ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ
ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ
ಸಾಗರ ; ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಜಪೂತ ಸಮಾಜ ಬಾಂಧವರಾದ ನಾವುಗಳು ರಜಪೂತ ಸಮಾಜವು ಗತಕಾಲದಲ್ಲಿ ರಾಜದರ್ಭಾರ ಮಾಡಿ ಅನೇಕ ಪ್ರಾಂತ್ಯಗಳಲ್ಲಿ ರಾಜ್ಯಗಳನ್ನು ಆಳಿ ಹಿಂದೂ ಧರ್ಮದ ರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿ ದೇಶವನ್ನು ರಕ್ಷಣೆ ಮಾಡಿದ ಕ್ಷತ್ರಿಯ ಸಮಾಜವಾಗಿತ್ತು. ಆದರೆ ಇಂದಿನ ಯುವ ಜನಾಂಗದವರಿಗೆ ರಜಪೂತರು ಯಾರು ಎಂದು ತಿಳಿಸುವ ಮಟ್ಟಿಗೆ ನಮ್ಮ ರಜಪೂತ ಸಮಾಜ ಅಧೋಗತಿಗೆ ಇಳಿದಿದೆ.
ನಮ್ಮ ರಜಪೂತ ಸಮಾಜದ ಜನರು ಕರ್ನಾಟಕದಲ್ಲಿ ಎಲ್ಲಾ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿರಳವಾಗಿ ವಾಸಿಸುತ್ತಿದ್ದಾರೆ. ನಾವು ನಮ್ಮ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ, ನಮ್ಮ ಸಮಾಜದ ಜನರು ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತೀ ಹಿಂದುಳಿದಿದ್ದೇವೆ. ನಮ್ಮ ಸಮಾಜದವರು ಸರ್ಕಾರಿ ಹುದ್ದೆಗಳಲ್ಲಿ ಮತ್ತು ರಾಜಕೀಯ ಸ್ಥಾನಮಾನ ಪಡೆಯಲು ಅತೀ ಹಿಂದುಳಿದಿದ್ದಾರೆ. ನಮ್ಮ ಸಮಾಜದ ಶೇಕಡಾ 90% ರಷ್ಟು ಜನರು ಬಡವರಿದ್ದು, ಇವರು ಸಣ್ಣ-ಪುಟ್ಟ ಕಾರ್ಮಿಕರಾಗಿ, ಕುಶಲ ಕರ್ಮಿಕರಾಗಿ ಹಾಗೂ ಬೇಸಾಯಗಾರರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ನಮ್ಮ ಸಮಾಜದವರಿಗೆ ಸರ್ಕಾರದ ಯಾವುದೇ ಸಹಾಯ, ಸೌಲಭ್ಯ ದೊರೆಯದೆ ಇರುವುದರಿಂದ ಇನ್ನು ಬಡತನದಲ್ಲಿಯೇ ಜೀವನ ನೆಡೆಸುತ್ತಿದ್ದಾರೆ. ಕಾರಣ ನಮ್ಮ ಸಮಾಜದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸುಧಾರಣೆಯಾಗಲು ಮತ್ತು ಅಬೀವೃದ್ಧಿ ಹೊಂದಲು ಸರ್ಕಾರದ ಸಹಾಯ ಅತೀ ಅವಶ್ಯವಾಗಿರುತ್ತದೆ.
ಕಾರಣ ಘನಸರ್ಕಾರದವರು ರಜಪೂತ ಸಮಾಜದ ಅಭಿವೃದ್ಧಿಗಾಗಿ ರಜಪೂತ ಸಮಾಜ ಅಭಿವೃದ್ಧಿ ಮಂಡಳಿಯನ್ನು ರಚನೆಮಾಡಿ ಈ ಜನರು ಅಭಿವೃದ್ಧಿ ಹೊಂದಲು ಸಹಕಾರ ಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ವಕೀಲರಾದ ಪ್ರೇಮ್'ಸಿಂಗ್, ರಜಪೂತ ಸಮಾಜದ ಸಾಗರ ತಾಲ್ಲೂಕು ಅಧ್ಯಕ್ಷ ಸುಂದರಸಿಂಗ್, ಗೌರವಾಧ್ಯಕ್ಷರಾದ ರಾಮಚಂದ್ರ ಸಿಂಗ್, ಸಮಾಜದ ಪ್ರದಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ (ರಾಜುಸಿಂಗ್) ಈ ಕುರಿತು ಮಾತನಾಡಿದರು.
ರಾಮಚಂದ್ರ ಸಿಂಗ್, ಠಾಕೂರ್ ಸಿಂಗ್, ಮಂಜುನಾಥ ಸಿಂಗ್, ಸೂರ್ಯನಾರಾಯಣ ಸಿಂಗ್, ಶಶಾಂಕ ಸಿಂಗ್, ಗಣೇಶ ಸಿಂಗ್ ಗೋಪಾಲಸಿಂಗ್, ವಿನೋದಬಾಯಿ, ಸುಮಿತ್ರ, ರೇಖಾ, ಶಕುಂತಲಾ, ಗಾಯತ್ರಿ, ಅನಿತಾಬಾಯಿ, ಮಂಜುಳಾಬಾಯಿ ಹಾಗೂ ಸಾಗರ ತಾಲ್ಲೂಕು ರಜಪೂತ ಸಮಾಜದ ಭಾಂಧವರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment