Posts

Showing posts from October, 2026

ಸಾಗರದಲ್ಲಿ ಲಾಡ್ಜ್‌ ಮೇಲೆ ಪೊಲೀಸರ ದಾಳಿ: ಗಾಂಜಾ ಸೇವನೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರ ವಿರುದ್ಧ FIR ದಾಖಲು

Image
ಸಾಗರದಲ್ಲಿ ಲಾಡ್ಜ್‌ ಮೇಲೆ ಪೊಲೀಸರ ದಾಳಿ: ಗಾಂಜಾ ಸೇವನೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರ ವಿರುದ್ಧ FIR ದಾಖಲು ಸಾಗರ : ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ಗಾಂಜಾ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಯುವತಿ ಸೇರಿದಂತೆ ನಾಲ್ವರು ಯುವಕರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಜೋಗ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಕೆಲ ಯುವಕ-ಯುವತಿಯರು ಮಾದಕ ವಸ್ತು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಸಾಗರ ಎಎಸ್ಪಿ ಡಾ.ಬೆನಕ ಪ್ರಸಾದ್ ಅವರಿಗೆ ಸಿಗುತ್ತದೆ. ಆ ಮಾಹಿತಿಯನ್ನು ಸಾಗರ ಟೌನ್ ಠಾಣೆಯ ಪಿಎಸ್‌ಐ ಶಾಂತರಾಜ್ ಎಚ್.ಜಿ. ಅವರಿಗೆ ನೀಡಿ, ದಾಳಿಗೆ ಸೂಚಿಸುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದಂತ ಪಿಎಸ್ಐ, ತಮ್ಮ ಸಿಬ್ಬಂದಿಯೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಲಾಡ್ಜ್ ಕೊಠಡಿಯನ್ನು ಪರಿಶೀಲಿಸಿದಾಗ, ಮೂವರು ಯುವಕರು ಹಾಗೂ ಓರ್ವ ಯುವತಿ ಇರುವುದು ಕಂಡುಬಂದಿದೆ. ಕೊಠಡಿಯಲ್ಲಿದ್ದ ಟೇಬಲ್ ಮೇಲೆ ಸಿಗರೇಟ್‌ಗಳಲ್ಲಿ ತಂಬಾಕನ್ನು ಖಾಲಿ ಮಾಡಿ, ಅದರೊಳಗೆ ಗಾಂಜಾ ತುಂಬಿ ಸೇವಿಸುತ್ತಿದ್ದ ಕುರುಹುಗಳು ಪತ್ತೆಯಾಗಿವೆ. ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳನ್ನು ಶಿವಮೊಗ್ಗದ ಲಯನ್ ಸಫಾರಿ ಸಮೀಪದ ಯುವಕ, ಸಾಗರ ನಗರದ ಯುವತಿ, ಬೆಂಗಳೂರು ಯಲಹಂಕದ yuvaka ಹಾಗೂ ಸಾಗರದ ವಿನೋಬ ನಗರದ ಯುವಕ ಎಂದು ಹೇಳಲಾಗಿದೆ. ವಿಚಾರಣೆ ವೇಳೆ ಯುವತಿ ತನಗೆ ವಿನೋಬ ನಗರದ ಓರ್ವ ಗಾಂಜಾ ನೀಡಿದ್ದಾಗಿ ತಿಳಿಸಿ...

ಕಸ್ತೂರಿರಂಗನ್ ವರದಿಗೆ ವಿರೋಧ ಏಕೆ? ವರದಿ ಜಾರಿಯಾದರೆ ಪರಿಣಾಮವೇನು? ಜೀವ ವೈವಿಧ್ಯದ ಹಾಟ್ ಸ್ಪಾಟ್ 'ಪಶ್ಚಿಮ ಘಟ್ಟ' ಜನರ ಆತಂಕವೇನು?

Image
ಕಸ್ತೂರಿರಂಗನ್ ವರದಿಗೆ ವಿರೋಧ ಏಕೆ? ವರದಿ ಜಾರಿಯಾದರೆ ಪರಿಣಾಮವೇನು? ಜೀವ ವೈವಿಧ್ಯದ ಹಾಟ್ ಸ್ಪಾಟ್ 'ಪಶ್ಚಿಮ ಘಟ್ಟ' ಜನರ ಆತಂಕವೇನು? ಕರ್ನಾಟಕವು ಸ್ಥಳ ಪರಿಶೀಲನೆ (ಫೀಲ್ಡ್ ಸ್ಟಡಿ) ನಡೆಸಲು ಒಂದು ವರ್ಷದ ಕಾಲಾವಕಾಶ ಕೋರಿದೆ.  ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ? ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಆರು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ವಿಚಾರವನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿವೆ. ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆ ಕುರಿತು ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸುವ ಗಡುವು ಮುಕ್ತಾಯದ ಹಂತಕ್ಕೆ ಬರುತ್ತಿರುವಂತೆಯೇ, ವರದಿ ಜಾರಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ಉದ್ದೇಶದ ಈ ಕರಡು ಅಧಿಸೂಚನೆ ಹಲವು ಆತಂಕಗಳನ್ನು ಹುಟ್ಟುಹಾಕಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಆರು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ವಿಚಾರವನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿವೆ. ಕೇರಳ ಮತ್ತು ತಮಿಳುನಾಡು ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಸ್ವತಂತ್ರ ಅಧ್ಯಯನಗಳನ್ನು ನಡೆಸುತ್ತಿದ್ದರೆ, ಕರ್ನಾಟಕವು ಸ್ಥಳ ಪರಿಶೀಲನೆ ನಡೆಸಲು ಒಂದು ವರ್ಷದ ಕಾಲಾವಕಾಶ ಕೋರಿದೆ. ಇದೇ ವೇಳೆ, ವ...

ಡಿಸೆಂಬರ್ ಒಳಗೆ ಜಿ.ಪಂ., ತಾ.ಪಂ.ಚುನಾವಣೆ ಬಳಿಕ ತಿಂಗಳ ಅಂತರದಲ್ಲಿ ಗ್ರಾ.ಪಂ.ಚುನಾವಣೆ

Image
ಡಿಸೆಂಬರ್ ಒಳಗೆ ಜಿ.ಪಂ., ತಾ.ಪಂ.ಚುನಾವಣೆ ಬಳಿಕ ತಿಂಗಳ ಅಂತರದಲ್ಲಿ ಗ್ರಾ.ಪಂ.ಚುನಾವಣೆ ಕಾಂಗ್ರೆಸ್‌ ಸಿಎಲ್‌ಪಿ ಸಭೆಯಲ್ಲಿ ಸಿ.ಎಂ.ಡಿಕೆ ಶಿವಕುಮಾರ್‌ ಹೇಳಿಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸೆ.29ಕ್ಕೆ: ಇದೇ ವೇಳೆ, ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳ ಬಗ್ಗೆ ವಿಚಾರಣೆ ನಡೆದಿದೆ. ಬೆಂಗಳೂರು : ಇದೇ ಡಿಸೆಂಬರ್ ಒಳಗೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಕ್ಕೆ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಚುನಾವಣೆ ನಡೆದು ತಿಂಗಳ ಅಂತರದಲ್ಲಿ ಗ್ರಾಮ ಪಂಚಾಯತ್ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ(ಸಿಎಲ್‌ಪಿ)ದ ಸಭೆಯಲ್ಲಿ ಪಕ್ಷದ ಶಾಸಕರು ಮತ್ತು ಮೇಲ್ಮನೆ ಸದಸ್ಯರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಡಿಕೆಶಿ. ಈಗಿನಿಂದಲೇ ಪಕ್ಷ ಸಂಘಟನೆಗೆ ಸಿದ್ದರಾಗಬೇಕು ಎಂದು ಟಾಸ್ಕ್ ನೀಡಿದರು.ಡಿಸೆಂಬರ್ ಅಂತ್ಯದೊಳಗೆ ಜಿ.ಪಂ., ತಾ.ಪಂ.ಹಾಗೂ ಜಿಬಿಎ ಚುನಾವಣೆ ನಡೆಸುವ ಗುರಿ ಇದೆ.ಅದಕ್ಕೆ ಸನ್ನದ್ದರಾಗಬೇಕು. ಇದಾಗಿ ತಿಂಗಳ ಬಳಿಕ ಗ್ರಾ.ಪಂ. ಚುನಾವಣೆಯನ್ನೂ ನಡೆಸಲಾಗುವುದು. ಶತಾಯಗತಾಯ ನಾವು ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕು. ಅದಕ್ಕಾಗಿ...