Posts

Showing posts from September, 2026

ಸೆಪ್ಟೆಂಬರ್ 30 ರಂದು ಶಿಕಾರಿಪುರದಲ್ಲಿ ಭಾರತ್ ಜೋಡೋ-2-ಗೋಪಾಲಕೃಷ್ಣ ಬೇಳೂರು

Image
ಸೆಪ್ಟೆಂಬರ್ 30 ರಂದು ಶಿಕಾರಿಪುರದಲ್ಲಿ ಭಾರತ್ ಜೋಡೋ-2-ಗೋಪಾಲಕೃಷ್ಣ ಬೇಳೂರು  ಸಾಗರ : ಸೆಪ್ಟೆಂಬರ್ 30 ರಂದು ಶಿಕಾರಿಪುರದಲ್ಲಿ ನಡೆಯುವ ಭಾರತ್ ಜೋಡೋ-2 ನಲ್ಲಿ ಕೆ ಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ರಾಜ್ಯದ 80 ಕ್ಷೇತ್ರಗಳಲ್ಲಿ ಭಾರತ್ ಜೊಡೋ ಪಾದಯಾತ್ರೆ ನಡೆಯಲಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ತೀರ್ಥಹಳ್ಳಿ ,ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸಹಸ್ರಾರು ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಇಲ್ಲಿನ ಗಾಂಧಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಟ ನಾಯಕ ರಾಹುಲ್ ಗಾಂಧಿಯವರು ಭಾರತ್ ಜೊಡೋ ನಡೆಸುವ ಮೂಲಕ ಕರ್ನಾಟಕದಲ್ಲಿ 138 ಸ್ಥಾನಗಳನ್ನು ಗೆಲ್ಲಲುbಸಾಧ್ಯವಾಗಿತ್ತು. 2028ರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೇಸ್ ಪಕ್ಷ ಹೊಸ ಹುರುಪಿನಿಂದ ಎದುರಿಸಲು ಭಾರತ್ ಜೋಡೋ 2 ಸಹಕಾರಿಯಾಗಲಿದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಭಾರತ್ ಜೋಡೋಗೆ ಶಿಕಾರಿಪುರ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಬಿ.ವೈ. ವಿಜಯೇಂದ್ರ. ಬಳ್ಳಾರಿ ಪಾದಯಾತ್ರೆ ಮೂಲಕ ರೆಡ್ಡಿಗಳನ್ನುbಪುನರ್ ಪ್ರತಿಷ್ಟಾಪಿಸುವ ಉದ್ದೇಶದಿಂದ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜಿನಾಮೆ ನೀಡಿದ್ದಾಗ್ಯೂ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದ...

ಶಾಲಾ ಶೈಕ್ಷಣಿಕ ಭೋಧನಾ ವಿಸ್ತರಣೆ ಮಾಡಲು ABVP ಯಿಂದ ಪ್ರತಿಭಟನೆ : ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ

Image
ಶಾಲಾ ಶೈಕ್ಷಣಿಕ ಭೋಧನಾ ವಿಸ್ತರಣೆ ಮಾಡಲು ABVP ಯಿಂದ ಪ್ರತಿಭಟನೆ : ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಾಗರ : ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹಾಗೂ ನಿಗದಿತ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಲುವಾಗಿ ಅಗತ್ಯವಿರುವ ಕಾರ್ಯನಿರ್ವಹಣಾ ದಿನಗಳ ಕೊರತೆ ಉಂಟಾಗಿದೆ. ಆದ್ದರಿಂದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಕಾಲೇಜಿನ ಕಾರ್ಯನಿರ್ವಹಣಾ ದಿನಗಳನ್ನು ಇನ್ನು ನವೆಂಬರ್ 30 ರ ದಿನಗಳವರೆಗೆ ವಿಸ್ತರಿಸುವಂತೆ ಸಾಗರ ಉಪವಿಭಾಗಾಧಿಕಾರಿಗಳಿಗೆ ಇಂದು ABVP ಯಿಂದ ಮನವಿ ನೀಡಲಾಯಿತು. ಹಾಗೆಯೇ ಈ ಕಾರ್ಯನಿರ್ವಹಣಾ ದಿನಗಳ ವಿಸ್ತರಣೆಯ ಕುರಿತು ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿ ಅವರ ಅನುಮೋದನೆ/ಸೂಚನೆಯನ್ನು ಪಡೆಯುವಂತೆ ಮನವೀಯಲ್ಲಿ ವಿನಂತಿಸಲಾಗಿದೆ. ಬೇಡಿಕೆಗಳು ಹೀಗಿವೆ :- 1. ಶೈಕ್ಷಣಿಕ ಬೆಸ ದಿನಗಳನ್ನು ಕನಿಷ್ಠ 30 ದಿನಗಳು ವಿಸ್ತರಿಸುವಂತೆ ಅಥವಾ ಮುಂದೂಡಬೇಕು 2. ಪರೀಕ್ಷೆಗಳಲ್ಲಿ ವಿಷಯದಿಂದ ವಿಷಯಕ್ಕೆ ಕನಿಷ್ಠ ಎರಡು ದಿನಗಳ ಅಂತರವಿರುವಂತೆ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಬೇಕು 3. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಸರಿಯಾಗಿ ಕಾರ್ಯನಿರ್ವಹಿಸುವ ಸ್ಟುಡೆಂಟ್ ಹೆಗ್ಡೆ ನ ತೆರೆಯಬೇಕು 4. ವಿಶ್ವವಿದ್ಯಾಲಯವು ಪರೀಕ್ಷಾ ಫಲಿತಾಂಶವನ್ನು ವಿಳಂಬವಿಲ್ಲದೆ ನೀಡಬೇಕು ನಮ್ಮ ಮನವಿ ಮತ್ತು ಬೇಡಿಕೆಗಳನ್ನು ಪರಿಗಣಿ...

ಅಕ್ಟೋಬರ್ 2 ರಂದು ಮಾಜಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜನ್ಮದಿನ : ಅಕ್ಟೋಬರ್ 1 ರಂದು ಬೃಹತ್ ರಕ್ತದಾನ ಶಿಬಿರ

Image
ಅಕ್ಟೋಬರ್ 2 ರಂದು ಮಾಜಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜನ್ಮದಿನ : ಅಕ್ಟೋಬರ್ 1 ರಂದು ಬೃಹತ್ ರಕ್ತದಾನ ಶಿಬಿರ ನಗರದ ಅಲ್ಪಸಂಖ್ಯಾತರ ಪ್ರಮುಖ ಯುವ ನಾಯಕ, ಸಮಾಜ ಸೇವಕ, ಕೊಡುಗೈ ದಾನಿ ಹಾಗೂ ನಗರಸಭೆಯ ಮಾಜಿ ಸದಸ್ಯರು ಆದ ಸೈಯದ್ ಜಾಕೀರ್ ಅವರಿಗೆ ಮೂರನೇಕಣ್ಣು ನ್ಯೂಸ್, ಸಾಗರ ಮತ್ತು ಮೀನಿನಹೆಜ್ಜೆ ನ್ಯೂಸ್, ಸಾಗರದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು ಸಾಗರ: ನಗರದ ಅಲ್ಪಸಂಖ್ಯಾತರ ಪ್ರಮುಖ ಯುವ ನಾಯಕರು, ಸಮಾಜ ಸೇವಕರು, ಕೊಡುಗೈ ದಾನಿ ಹಾಗೂ ನಗರಸಭೆಯ ಮಾಜಿ ಸದಸ್ಯರೂ ಆದ ಸೈಯದ್ ಜಾಕೀರ್ ಅವರ ಹುಟ್ಟುಹಬ್ಬ (ಅಕ್ಟೋಬರ್ 2ರ) ಅಂಗವಾಗಿ ಅಕ್ಟೋಬರ್ "1 ರ ಗುರುವಾರದಂದು "ಬೃಹತ್ ರಕ್ತದಾನ" ಶಿಬಿರವನ್ನು ಆಯೋಜಿಸಲಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಅಪ್ಪಟ ಅಭಿಮಾನಿಯಾಗಿ ಜನಾನುರಾಗಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಜಾಕೀರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಅಭಿಮಾನಿ ಬಳಗ ಈ ಶಿಬಿರವನ್ನು ಹಮ್ಮಿಕೊಂಡಿದೆ. ಅಪ್ಪಟ ಜಾತ್ಯತೀತ ಮನಸ್ಸು ಹೊಂದಿರುವ ಸೈಯದ್ ಜಾಕಿರ್ ಮುಂಬರುವ ನಗರಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಲ್ಲಿ ಜಯಗಳಿಸಲಿ, ಜನಸೇವೆಗೆ ಮುಂದಾಗಲಿ, ನಗರಸಭೆಯ ಅಧ್ಯಕ್ಷರು ಆಗಲಿ., ಅವರಿಗೆ ಶುಭಾವಾಗಲಿ.... ಪಟ್ಟಣದ ಪ್ರತಿಷ್ಠಿತ 'ಹೋಟೆಲ್ ಗ್ರೀನ್ ಎಂಬಾಸ್ಸಿ'ಯಲ್ಲಿ ಅಕ್ಟೋಬರ್ 1ರಂದು  ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವ...

ಕುಡಿಯುವ ನೀರಿಗೆ 220 ಕೋಟಿ ತಂದಿದ್ದು ಸಾಬೀತು ಪಡಿಸಿದ್ರೆ ಇಂದೇ ರಾಜಕೀಯ ನಿವೃತ್ತಿಯ 'ಓಪನ್ ಚಾಲೆಂಜ್' ಹಾಕಿದ ಹರತಾಳು ಹಾಲಪ್ಪ

Image
ಕುಡಿಯುವ ನೀರಿಗೆ 220 ಕೋಟಿ ತಂದಿದ್ದು ಸಾಬೀತು ಪಡಿಸಿದ್ರೆ ಇಂದೇ ರಾಜಕೀಯ ನಿವೃತ್ತಿಯ 'ಓಪನ್ ಚಾಲೆಂಜ್' ಹಾಕಿದ ಹರತಾಳು ಹಾಲಪ್ಪ ದಾಖಲೆ ಹಿಡಿದು ಸವಾಲ್ ಹಾಕಿದ ಮಾಜಿ ಆಹಾರ ಸಚಿವ ಹಾಲಪ್ಪ ಹರತಾಳು- ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ  ಸಾಗರ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಗರ ಹಾಗೂ ಹೊಸನಗರ ಭಾಗಕ್ಕೆ ಜಾರಿಗೆ ತರಲಾದ ಐತಿಹಾಸಿಕ ಕುಡಿಯುವ ನೀರಿನ ಯೋಜನೆಗಳ ಸತ್ಯಾಸತ್ಯತೆಯನ್ನು ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹರತಾಳು ಹಾಲಪ್ಪ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ  ಸಾಗರದ  ಹಕ್ರೆ ಸಮೀಪವಿರುವ  ಗುಬ್ಬುಗೋಡಿವಿನಲ್ಲಿ  ನಡೆದ ಸಂವಾದ ಚರ್ಚೆ ವಿಚಾರ ವಿನಿಮಯ ಮತ್ತು  ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕಾಮಗಾರಿ ವೀಕ್ಷಿಸಿದ ಅವರು, ನಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಸ್ಥಳ ಪರಿಶೀಲನೆ ಕೈಗೊಂಡಿರುವುದಾಗಿ ತಿಳಿಸಿದರು.  ಈ ವೇಳೆ ಮಾತನಾಡಿದ ಅವರು, ಕೇವಲ ಶರಾವತಿ ಸೇತುವೆಯನ್ನಷ್ಟೇ ತೋರಿಸಿಕೊಂಡು ಓಡಾಡುವುದಲ್ಲ, ಸಾಗರ ತಾಲೂಕಿನ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಯೋಜನೆ ಇದಾಗಿದೆ ಎಂದರು. ಬರೋಬ್ಬರಿ...

ಸಾಗರದ ಪ್ರಖ್ಯಾತ ಉದ್ಯಮಿ ಪಿ.ಎಂ.ಜೆ.ಎಫ್ ಲಯನ್ "ಟಿ.ವಿ ಪಾಂಡುರಂಗ " ಅವರಿಂದ ದಾವಣಗೆರೆಯ "ರಾಷ್ಟ್ರೀಯ ವಿಕಲಚೇತನ ಸಂಯುಕ್ತಾ ಪ್ರಾದೇಶಿಕ ಕೇಂದ್ರ" ಕ್ಕೆ 10 ಹೊಲಿಗೆ ಯಂತ್ರ ದೇಣಿಗೆ....ಮಾನವೀಯ ಮೌಲ್ಯ ಎತ್ತಿ ಹಿಡಿದ ಉದ್ಯಮಿ

Image
ಸಾಗರದ ಪ್ರಖ್ಯಾತ ಉದ್ಯಮಿ ಪಿ.ಎಂ.ಜೆ.ಎಫ್ ಲಯನ್ ಟಿ.ವಿ ಪಾಂಡುರಂಗ ಅವರಿಂದ ದಾವಣಗೆರೆಯ "ರಾಷ್ಟ್ರೀಯ ವಿಕಲಚೇತನ ಸಂಯುಕ್ತಾ ಪ್ರಾದೇಶಿಕ ಕೇಂದ್ರ" ಕ್ಕೆ 10 ಹೊಲಿಗೆ ಯಂತ್ರ ದೇಣಿಗೆ....ಮಾನವೀಯ ಮೌಲ್ಯ ಎತ್ತಿ ಹಿಡಿದ ಉದ್ಯಮಿ ಅಂಗವಿಕಲ ವ್ಯಕ್ತಿಗಳು ಸಮಾಜದ ಕಣ್ಣುಗಳು ದೇವರ ಮಕ್ಕಳು-ಟಿ. ವಿ. ಪಾಂಡುರಂಗ  ದಿನಾಂಕ.28.09.2026 ರಂದು ಸಂಯುಕ್ತಾ ಪ್ರಾದೇಶಿಕ ಕೇಂದ್ರ, ದಾವಣಗೆರೆ ಹಾಗೂ ಲಯನ್ಸ್ ಕ್ಲಬ್, ಸಾಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಹೊಲಿಗೆ ಯಂತ್ರಗಳ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಸಮಾರಂಭವು ಬಹಳ ಆದ್ದೂರಿಯಾಗಿ ನಡೆಯಿತು. ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಪಾಂಡುರಂಗ ಟಿ. ವಿ ಇಂತಹ ಕಾರ್ಯಗಳಿಗೆ ಜನರು ಧ್ವನಿಯಾಗಬೇಕು ಎಂದರು. ಸರ್ಕಾರದಿಂದ ನಾವು ಸವಲತ್ತಗಳನ್ನು ಪಡೆಯುವುದರ ಜೊತೆಗೆ ಸರ್ಕಾರಕ್ಕೂ ಕೂಡ ನಮ್ಮ ಕೈಲಾದ ಸಹಾಯದ ಮೂಲಕ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಈ ಸಂಧರ್ಭದಲ್ಲಿ CRC ನಿರ್ದೇಶಕರಾದ ಮಾರುತಿಕೃಷ್ಣ,317ಹೆಚ್ ಜಿಲ್ಲಾ ಗವರ್ನರ್ ಆದ ಪಿ.ಎಂ.ಜೆ.ಎಫ್ ಲಯನ್ ಆರ್. ಜಿ. ಶ್ರೀನಿವಾಸ ಮೂರ್ತಿ, ದ್ವಿತೀಯ ಜಿಲ್ಲಾ ಉಪ ಗವರ್ನರ್  ಆದ ಪಿ.ಎಂ.ಜೆ.ಎಫ್ ಲಯನ್ ಅಶ್ವಿನಿ ಕುಮಾರ್, ಸಾಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ಎಂ.ಜೆ.ಎಫ್ ಲಯನ್ ಈ.ನಾಗರಾಜ್, ವಲಯ ಅಧ್ಯಕ್ಷ ಪಿ.ಎಂ.ಜೆ.ಎಫ್ ಲಯನ್ ಡಾ .ಪ್ರಸನ್ನ ಟಿ,ವಲಯ ಕಾರ್ಯದರ್ಶಿ ಎಂ.ಜೆ.ಎಫ್ ಲಯನ್ ಸುಧೀರ್ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ನ ಜಂಟಿ ಕಾರ್ಯದರ್...

ರಂಗಕರ್ಮಿ ಸಂತೋಷ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ನಟನೆ : ಸಂತೋಷ್ ಸದ್ಗುರು ಅವರಿಗೆ ಅವಾರ್ಡ್

Image
ರಂಗಕರ್ಮಿ ಸಂತೋಷ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ನಟನೆ : ಸಂತೋಷ್ ಸದ್ಗುರು ಅವರಿಗೆ ಅವಾರ್ಡ್ ಸಾಗರದ ರಂಗಕರ್ಮಿ ಸಂತೋಷ್ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ಉತ್ತಮ ನಟನಾಗಿ ಸಾಗರದ ರಂಗಕರ್ಮಿ ಸಂತೋಷ್ ಸದ್ಗುರು ಅವರನ್ನು ಆಯ್ಕೆ ಮಾಡಲಾಗಿದೆ. ಯೂನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್, ಜೆನೆಸಿಸ್ ಅಲ್ಟಿಮ ದುಬೈ, ಯುಎಇ  ಮತ್ತು ಇಂಡೋ ಶ್ರೀಲಂಕಾ ಫಿಲಂ ಅಂಡ್ ಕಲ್ಚರಲ್ ಫೋರಮ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ದಿನಾಂಕ : 27-09-2026ರ ಭಾನುವಾರ ಗೋವಾ ರಾಜ್ಯದ ಪಣಜಿಯ ಝೆಡ್ ಸ್ಕ್ವೇರ್ ಹಾಲ್, ಅಶೋಕ ಹೋಟೆಲ್ ಇಲ್ಲಿ ನಡೆಯುವ ಸಮಾರಂಭದಲ್ಲಿ 'ದಿ ಟೈಮ್' ಕಿರು ಚಿತ್ರದ ನಟ ಸಂತೋಷ್ ಸದ್ಗುರು ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸ್ಥಳೀಯ ಪ್ರಸಿದ್ಧ ರಂಗಕರ್ಮಿ ಸಂತೋಷ್ ಸದ್ಗುರು ಅವರು ನಿರ್ಮಿಸಿರುವ 'ದಿ ಟೈಮ್' (The Time) ಎಂಬ ಕಿರುಚಿತ್ರವು ಜುಲೈ 24ರ ಶುಕ್ರವಾರ ಸಂಜೆ 7 ಗಂಟೆಗೆ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. https://yt.openinapp.co/l9sxw ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಕಷ್ಟ-ಸುಖಗಳು ಹಾಗೂ ಆ ಕಾಲದ ಸಂವೇದನಾಶೀಲ ಕಥಾಹಂದರವನ್ನು ಆಧರಿಸಿ ಈ ಕಿರುಚಿತ್ರವನ್ನು ನಿರ್ಮಿಸಲಾಗಿದ್ದು, ಸನ್ನಿವೇಶಗಳ ಅಭಾವ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ಬಿಡುಗಡೆಯಾಗದೆ ಬಾಕಿಯ ಉಳಿದ...

ಸೆಪ್ಟೆಂಬರ್ 27ಕ್ಕೆ ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ

Image
ಸೆಪ್ಟೆಂಬರ್ 27ಕ್ಕೆ ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಸಾಗರ : ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಸೆ. 27ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಇಂದಿರಾಗಾಂಧಿ ಕಾಲೇಜು ಸಮೀಪದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದೆ ಎಂದು ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಆರ್.ನಾಯ್ಕ್ ತಿಳಿಸಿದರು. ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8ರಿಂದ 10ರೊಳಗೆ ಸತ್ಯನಾರಾಯಣ ಸ್ವಾಮಿ ಪೂಜೆ ಇರುತ್ತದೆ ಎಂದರು. ಬೆಳಿಗ್ಗೆ 11ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ವೆಂಕಟೇಶ್ ಕೆ.ಎಸ್. ಅಧ್ಯಕ್ಷತೆ ವಹಿಸುವರು. ಎಸ್.ಕೆ.ಚಂದ್ರು, ಗಜಾನನ ಕೆ.ಎಸ್., ಚಂದ್ರಶೇಖರ್ ಕೆ.ಎನ್., ನಾಗರಾಜ್ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದು, ಹಿರಿಯ ನಾಗರೀಕರಾದ ನಾರಾಯಣ ರಾವ್ ಆನಂದಪುರ, ಶಾಂತಮ್ಮ ಕೋಂ ಮಂಜಪ್ಪ ಅವರಿಗೆ ಸನ್ಮಾನ, ನಿವೃತ್ತ ಯೋಧ ಗೌರೀಶ್, ಶಶಿಕಲಾ ಎಸ್., ಗಣೇಶ್ ನಾಯ್ಕ್ ಅವರನ್ನು ಅಭಿನಂದಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬಾಬು ಬಿನ್ ಗಣಪನಾಯ್ಕ, ನಾಗರಾಜ್ ವರದಾಮೂಲ, ಶಾರದಮ್ಮ ಸಣ್ಣಪ್ಪ ಅವರನ್ನು ಗೌರವಿಸಲಾಗುತ್ತದೆ. ಎಸ್....

ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ

Image
ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗವು ಶೀಘ್ರದಲ್ಲಿಯೇ ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳ ಜತೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 5,950 ಗ್ರಾಮ ಪಂಚಾಯಿತಿಗಳಿವೆ. ಹಿಂದಿನ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳು ಡಿಸೆಂಬರ್ 2020 ರಲ್ಲಿ ಎರಡು ಹಂತಗಳಲ್ಲಿ ನಡೆದಿದ್ದವು. ಗ್ರಾಮ ಪಂಚಾಯಿತಿಗಳ ಅವಧಿ 5 ವರ್ಷಗಳಾಗಿದೆ. ಬಹುತೇಕ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯವಾಗಿದೆ. ಜತೆಗೆ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಯು ಹಲವು ವರ್ಷಗಳಿಂದ ಬಾಕಿ ಇದೆ. ಹೊಸದಾಗಿ ಚುನಾವಣೆ ನಡೆಸಲು ಅಗತ್ಯವಿದ್ದ ಮೀಸಲಾತಿ ಹಂಚಿಕೆ ಹಾಗೂ ವಾರ್ಡ್‌ ಮರುವಿಂಗಡಣೆಯನ್ನು ಸರ್ಕಾರ ಪೂರ್ಣಗೊಳಿಸಿದೆ. ಈ ಬೆನ್ನಲ್ಲೆ ಚುನಾವಣೆ ಆಯೋಗವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆ. ಆಯೋಗದಿಂದ ಮಹತ್ವದ ಸುತ್ತೋಲೆ ರಾಜ್ಯ ಚುನಾವಣಾ ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸುತ್ತೋಲೆ/ಸೂಚನಾ ಪತ್ರ ಹೊರಡಿಸಿದೆ. ಆಯೋಗದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29 ರಂದು ಮಹತ...

ಸಾಗರ ಹೊಸಗರ ತಾಲ್ಲೂಕು ಬರ ಪಿಡಿತ ಎಂದು ಘೋಷಿಸಿ-ಶಿವಾನಂದ ಕುಗ್ವೆ

Image
ಸಾಗರ ಹೊಸಗರ ತಾಲ್ಲೂಕು ಬರ ಪಿಡಿತ ಎಂದು ಘೋಷಿಸಿ-ಶಿವಾನಂದ ಕುಗ್ವೆ ಭೀಕರ ಬರಗಾಲ ಇದ್ದರೂ ಸರ್ಕಾರ ರೈತರ ನೆರವಿಗೆ ಇನ್ನೂ ಬಂದಿಲ್ಲ-ಎನ್. ಡಿ. ವಸಂತಕುಮಾರ್ ಸಾಗರ-ಹೊಸನಗರ ತಾಲೂಕನ್ನು ಬರ ಪೀಡಿತ ಎಂದು ಘೋಷಿಸದೆ ಇದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕರು ಹೇಳಬೇಕಿತ್ತು-ಭದ್ರೇಶ್ ಬಾಳಗೊಡು ಸಾಗರ : ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಸಾಗರ ಹೊಸಗರ ತಾಲ್ಲೂಕು ಬಿಟ್ಟಿರುವುದು ಖಂಡನೀಯ. ಸರ್ಕಾರ ತಕ್ಷಣ ಸಾಗರ ಹೊಸನಗರ ತಾಲ್ಲೂಕನ್ನು ಬರಪೀಡತ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದ್ದಾರೆ. ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರbಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ. ಆದರೆ ನಮ್ಮ ತಾಲ್ಲೂಕು ಬಿಟ್ಟಿರುವbಕ್ರಮ ಅವೈಜ್ಞಾನಿಕವಾದದ್ದು ಎಂದರು. ರಾಜ್ಯದಲ್ಲಿ 140 ವರ್ಷಗಳ ನಂತರ ಭೀಕರ ಬರಗಾಲ ಬಂದಿದ್ದು ರೈತರು ಆತಂಕದಲ್ಲಿದ್ದರೆ. ಕೆರೆಕಟ್ಟೆ ಜಲಮೂಲಗಳು ಬತ್ತಿ ನಿಂತಿದೆ. ರಾಜ್ಯ ಸರ್ಕಾರ ಈತನಕ 206 ತಾಲ್ಲೂಕನ್ನು ಮಾತ್ರ ಬರಪೀಡತ ಎಂದು ಘೋಷಣೆ ಮಾಡಿದೆ. ಶಿವಮೊಗ್ಗvಜಿಲ್ಲೆಯಲ್ಲಿ ಸಾಗರ ಹೊಸನಗರ ಎರಡು ತಾಲ್ಲೂಕು ಹೊರತುಪಡಿಸಿ ಇತರೆ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ನಮ್ಮ ತಾಲ್ಲೂಕು ಕೈಬಿಡಲಾಗಿದೆ. ಕೇಂದ್ರ ಮತ್ತು ರಾಜ...

DSS 386/2020-21 ಬಣ, ಒಂದಾದ ಸತ್ಯ ಭದ್ರಾವತಿ, ಹೊಳಲ್ಕೆರೆ ಪಾಂಡುರಂಗ ಸ್ವಾಮಿ, ಗಂಗಾಧರಪ್ಪ ಚಿಕ್ಕಬಳ್ಳಾಪುರ

Image
ದಲಿತ ಸಂಘರ್ಷ ಸಮಿತಿ ಮೂರು ಬಣಗಳ ವಿಲೀನ-ಸ್ವ ಇಚ್ಛೆಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸ್ಥಾನ ಬಿಟ್ಟು ಕೊಟ್ಟ ಪಾಂಡುರಂಗ ಸ್ವಾಮಿ-ನೂತನ ರಾಜ್ಯ ಸಂಚಾಲಕರಾಗಿ ಗಂಗಾಧರಪ್ಪ ಚಿಕ್ಕಬಳ್ಳಾಪುರ DSS 386/2020-21 ಬಣ, ಒಂದಾದ ಸತ್ಯ ಭದ್ರಾವತಿ, ಹೊಳಲ್ಕೆರೆ ಪಾಂಡುರಂಗ ಸ್ವಾಮಿ, ಗಂಗಾಧರಪ್ಪ ಚಿಕ್ಕಬಳ್ಳಾಪುರ ದಲಿತ ಸಂಘರ್ಷ ಸಮಿತಿ (DSS) ಮತ್ತು ಇತರೆ ದಲಿತ ಪರ ಸಂಘಟನೆಗಳು ಸಂವಿಧಾನಬದ್ಧವಾಗಿ ನೊಂದಾಯಿಸಲ್ಪಟ್ಟಿವೆ. ಈ ಸಂಘಟನೆಗಳು ಸಮಾಜದಲ್ಲಿ ಅಸಮಾನತೆ, ಜಾತಿ ವಿನಾಶ, ಆರ್ಥಿಕ ಹಾಗೂ ಶೈಕ್ಷಣಿಕ ಅಸಮಾನತೆ ಮತ್ತು ಸಂಪತ್ತಿನ ಅಸಮಾನತೆ ವಿರುದ್ಧ ನಿರಂತರವಾಗಿ ಹೋರಾಡುತ್ತಿವೆ. ಇದರೊಂದಿಗೆ, ಶೋಷಿತರು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಡಿಎಸ್‌ಎಸ್ ಸೇರಿದಂತೆ ಇತರೆ ದಲಿತ ಪರ ಸಂಘಟನೆಗಳು ಜನರಿಗೆ ಸಂವಿಧಾನಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ತಲುಪಿಸುವ ಮೂಲಕ ಸಂವಿಧಾನ ವಿರೋಧಿಗಳಿಗೆ ಸಿಂಹಸ್ವಪ್ನವಾಗಿವೆ.  ಸಮಾಜದಲ್ಲಿ ಕೆಲವೇ ಕೆಲವರನ್ನು ಶ್ರೇಷ್ಠರೆಂದು ಬಿಂಬಿಸುವ ಮೂಲಕ ಸಾಮಾಜಿಕ ಅಸಮಾನತೆಯನ್ನು ಬೆಂಬಲಿಸುವ ಮತ್ತು ವರ್ಣವ್ಯವಸ್ಥೆಯನ್ನು ಪೋಷಿಸುವ ಮನುಧರ್ಮಶಾಸ್ತ್ರವನ್ನು ಪುನರುಜ್ಜೀವನಗೊಳಿಸಲು ಹೊರಟಿರುವ ಸಂಘಟನೆಗಳಂತಲ್ಲ, ದಲಿತ ಪರ ಸಂಘಟನೆಗಳು. ಬದಲಾಗಿ, ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ...

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. ನಂ. 386/2020-21 ಇದರ ರಾಜ್ಯ ಸಂಚಾಲಕರಾಗಿ ಗಂಗಾಧರಪ್ಪ ಚಿಕ್ಕಬಳ್ಳಾಪುರ-ಸಾಗರ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಅವರಿಂದ ಅಭಿನಂದನೆ

Image
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. ನಂ. 386/2020-21 ಇದರ ರಾಜ್ಯ ಸಂಚಾಲಕರಾಗಿ ಗಂಗಾಧರಪ್ಪ ಚಿಕ್ಕಬಳ್ಳಾಪುರ-ಸಾಗರ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಅವರಿಂದ ಅಭಿನಂದನೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. ನಂ. 386/2020-21 ಇದರ ರಾಜ್ಯ ಸಂಚಾಲಕರಾಗಿ ಗಂಗಾಧರಪ್ಪ ಚಿಕ್ಕಬಳ್ಳಾಪುರ ಅವರು ಅವಿರೋಧವಾಗಿ ಆಯ್ಕೆ ಆಗಿದ್ದು, ಸಾಗರ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಹೊಳಲ್ಕೆರೆಯ ಪ್ರವಾಸಿ ಮಂದಿರದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಸತ್ಯ ಭದ್ರಾವತಿ ಅವರಿಂದ ಘೋಷಣೆ ಈ ಸಂಧರ್ಭದಲ್ಲಿ ಸಾಗರ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಲಕ್ಶ್ಮಣ್ ಸಾಗರ್, ನಗರ ಸಂಚಾಲಕರಾದ ವೆಂಕಟೇಶ್ ಗಾಂಧಿ ನಗರ, ತಾಲೂಕು ಸಂಘಟನಾ ಸಂಚಾಲಕರಾದ ರವಿ ಜಂಬಗಾರು ಹಾಜರಿದ್ದರು. ಸಾಗರ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಮಾತನಾಡಿ, ದಲಿತ ಸಂಘರ್ಷ ಸಮಿತಿಯ ದ್ಯೇಯೋದ್ದೇಶಗಳು ಮರೆಯಾಗಲು ಬಿಡುವುದಿಲ್ಲ. ಪ್ರೊ . ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ರಾಜ್ಯದಾದ್ಯಂತ ಸಂಘಟನೆಯ ಮೂಲಕ ಅನೇಕ ಚಳುವಳಿಗಳನ್ನು ಮಾಡಿ ಬಡವರಿಗೆ ದೀನ ದಲಿತರಿಗೆ ನ್ಯಾಯ ನೀಡಲು ಹೋರಾಟ ಮಾಡಿ ದಲಿತರನ್ನು ಮುಖ್ಯವಾಹಿನಿಗೆ ತರಲು ಕಾರಣರಾದವರು.  ಇಂದು ಹೊಳಲ್ಕೆರೆಯಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ರಾಜ್ಯ ಸಂಚಾಲಕರಾಗಿ ಗಂಗಾಧರಪ್ಪ ಚಿಕ್ಕಬಳ್ಳಾಪುರ ಅವರನ್ನು ಅಭಿನಂದನಂದಿಸಿ ಈ ಮೇಲಿನಂತೆ ಮಾತನಾಡಿದರು...

ಸಾಗರ ನಗರ DSS ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ

Image
ಸಾಗರ ನಗರ DSS ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ   ಸಾಗರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಾಗರ ನಗರ ವಿಭಾಗದ ಸಂಚಾಲಕರಾಗಿ ವೆಂಕಟೇಶ್ ಗಾಂಧಿನಗರ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ ಈ ಆದೇಶ ಜಾರಿಗೆ ಬರಲಿದ್ದು, ಸಾಗರ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮಣ್ ಸಾಗರ್ ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. DSS ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಂತೆ ಮತ್ತು ಸಂಘಟನೆಯ ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ. ನಿನ್ನೆ ದಿನ ಹೊಳಲ್ಕೆರೆಯಲ್ಲಿ ನಡೆದ DSS ಕಾರ್ಯಕ್ರಮ ಮುಗಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸುದ್ದಿ ಮತ್ತು ಜಾಹಿರಾತು ನೀಡಲು - 7204641701 ಮೀನಿನಹೆಜ್ಜೆ ನ್ಯೂಸ್, ಸಾಗರ 

ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಎ, ಎಸ್, ಪಿ ಗೆ ಮನವಿ

Image
ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಎ, ಎಸ್, ಪಿ ಗೆ ಮನವಿ  ಸಾಗರ : ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಬುಧವಾರ ಕಲ್ಮನೆ ಮತ್ತು ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರೀಕರು ಪೊಲೀಸ್ pಉಪಾಧೀಕ್ಷಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಕಲ್ಮನೆ ಮತ್ತು ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ. ಮುಖ್ಯವಾಗಿ ತೋಟಗಳಲ್ಲಿ, ಮನೆಯ ಹಿಂಬದಿಯಲ್ಲಿ ನೀರಿನ ವ್ಯವಸ್ಥೆಗಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಕಳ್ಳತನ ಮಾಡಲಾಗುತ್ತಿದ್ದು, ಕಳೆದ ಒಂದು ತಿಂಗಳಿನಿAದ ಇಪ್ಪತ್ತೆದಕ್ಕೂ ಹೆಚ್ಚು ಪಂಪ್‌ಸೆಟ್, ಅದಕ್ಕೆ ಅಳವಡಿಸಿದ್ದ ತಂತಿ, ಕೇಬಲ್‌ಗಳನ್ನು ಕಳ್ಳತನvಮಾಡಲಾಗಿದೆ. ಈ ಸಂಬAಧ ಎಂಟತ್ತು ಎಫ್.ಐ.ಆರ್. ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.vತಕ್ಷಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚAದ್ರ ಭಟ್ ಮಾತನಾಡಿ, ಕ...

ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭ-ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು

Image
ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭ-ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಸಾಗರ : ಆಪ್‌ಕೋಸ್ ಅಭಿವೃದ್ದಿಗೆ ಪೂರಕವಾದ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ಸಾಲಿಗಿಂತ ಹೆಚ್ಚಿನ ಲಾಭ ಸಂಸ್ಥೆ ಗಳಿಸಿದ್ದು, ಷೇರುದಾರರ ಹಿತಕಾಯುವ ಅನೇಕ ಯೋಜನೆಗಳನ್ನು ಹಂತಹಂತವಾಗಿ ಅನುಷ್ಟಾನಕ್ಕೆ ತರಲು ಆಡಳಿತ ಮಂಡಳಿ ಸಜ್ಜಾಗಿದೆ. ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭಗಳಿಸಲಾಗಿದೆ ಎಂದು ಆಪ್ಸ್,ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ತಿಳಿಸಿದರು. ಇಲ್ಲಿನ ಭದ್ರಕಾಳಿ ಸಭಾಂಗಣದಲ್ಲಿ ಬುಧವಾರ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಎಲ್ಲ ರೀತಿಯ ಷೇರುದಾರ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಂಸ್ಥೆಯ ಆಸ್ತಿ ಬೇರೆಬೇರೆ ಕಡೆ ಇದ್ದು ಅದರಲ್ಲಿ ಹೊಸಹೊಸ ಯೋಜನೆ ಮೂಲಕ ಸಂಸ್ಥೆಯ ಆರ್ಥಿಕ ಶಕ್ತಿ ಹೆಚ್ಚಿಸಲು ಗಮನ ಹರಿಸಿದ್ದು, ಸಂಗಳದಲ್ಲಿ ಸಂಸ್ಥೆಯ 7ಎಕರೆ ಜಾಗವಿದ್ದು ಅಲ್ಲಿ ವಂಡರ್‌ಲಾ, ಪವರ್ ಪ್ಲಾಂಟ್ ಇನ್ನಿತರೆ ಮಾಡುವ ಉದ್ದೇಶ ಹೊಂದಿದೆ. ತುರ್ತು ಸಂದರ್ಭದಲ್ಲಿ ಷೇರುದಾರರು ಅನಾರೋಗ್ಯಕ್ಕೆ ತುತ್ತಾದಾಗ ಅವರ ನೆರವಿಗೆ ಆಪ್‌ಕೋಸ್ ನಿಲ್ಲುತ್ತಿದೆ. ಹೆಸರಾಂತ ಆಸ್ಪತ್ರೆಯ ಜೊತೆ ಟೈಅಪ್ ಮಾಡಿಕೊಂಡು ತಕ್ಷಣ ಆರೋಗ್ಯ ಸೇವೆ ಕಲ್ಪಿಸಲು ತೀರ್ಮಾನಿಸಿದೆ. ರೈತರ ಅಡಿಕೆ ಖರೀದಿbಮಾಡಿ ಅದನ್ನು ಸಂಸ...

ಸಾಗರ ಕ್ಷೇತ್ರ ಶಾಸಕರು ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ-ಮಾಜಿ ಸಚಿವ ಹಾಲಪ್ಪ

Image
ಸಾಗರ ಕ್ಷೇತ್ರ ಶಾಸಕರು ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ-ಮಾಜಿ ಸಚಿವ ಹಾಲಪ್ಪ  ಮರಣಹೋಮ ಅಸಂಬದ್ಧ ಪದ ಬಳಕೆ  ಸಾಗರ : ಶಾಸಕ ಬೇಳೂರು ಸುಳ್ಳು ಹೇಳುತ್ತಾರೆ ಎಂದು ಪದೇಪದೇ ಹೇಳಿದ್ದೇನೆ. ಈಗ ಸದನದಲ್ಲೂ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಇಲ್ಲಿನ ವಿನೋಬಾ ನಗರದಲ್ಲಿ ಮಂಗಳವಾರ ವಿನೋಬಾ ನಗರ ಯುವಕ ಸಂಘದ ವತಿಯಿಂದ ಪ್ರತಿಷ್ಟಾಪಿಸಲಾಗಿರುವ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ. ಹನ್ನೊಂದು ಬಾರಿ ಏನು, ಯಾರು ವರದಿ ಕೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಬೇಕು. ಏನು ಹೇಳಬೇಕು ಎನ್ನುವುದನ್ನು ಇನ್ನೊಮ್ಮೆ ಸ್ಪಷ್ಟವಾಗಿ, ಯಾರ ಹತ್ತಿರವಾದರೂ ಸರಿಯಾಗಿ ಬರೆಸಿಕೊಂಡು ಅಧ್ಯಯನ ನಡೆಸಿ ಹೇಳಿಕೆ ನೀಡಲಿ ಎಂದು ಒತ್ತಾಯಿಸುತ್ತೇನೆ. ಸದನದ ಒಳಗೆ ಮತ್ತು ಹೊರಗೆ ಹನ್ನೊಂದು ಬಾರಿ ಏನು ಎನ್ನುವುದು ಸಾಗರದ ಜನರಿಗೆ ಸ್ಪಷ್ಟಪಡಿಸಲಿ. ನಾವು ಅಧಿಕಾರದಲ್ಲಿದ್ದಾಗ ಕಸ್ತೂರಿ ರಂಗನ್ ವರದಿ ಅಧಿಸೂಚನೆ ವಿರುದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೇಂದ್ರ ಸಚಿವರಾದ ಪ್ರಹ್ಲಾಧ್ ಜೋಷಿ ಅವರ ನಿಯೋಗದ ಜೊತೆ ಕೇಂದ್ರದ ...