ಅಕ್ಟೋಬರ್ 2 ರಂದು ಮಾಜಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜನ್ಮದಿನ : ಅಕ್ಟೋಬರ್ 1 ರಂದು ಬೃಹತ್ ರಕ್ತದಾನ ಶಿಬಿರ
ಅಕ್ಟೋಬರ್ 2 ರಂದು ಮಾಜಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜನ್ಮದಿನ : ಅಕ್ಟೋಬರ್ 1 ರಂದು ಬೃಹತ್ ರಕ್ತದಾನ ಶಿಬಿರ
ನಗರದ ಅಲ್ಪಸಂಖ್ಯಾತರ ಪ್ರಮುಖ ಯುವ ನಾಯಕ, ಸಮಾಜ ಸೇವಕ, ಕೊಡುಗೈ ದಾನಿ ಹಾಗೂ ನಗರಸಭೆಯ ಮಾಜಿ ಸದಸ್ಯರು ಆದ ಸೈಯದ್ ಜಾಕೀರ್ ಅವರಿಗೆ ಮೂರನೇಕಣ್ಣು ನ್ಯೂಸ್, ಸಾಗರ ಮತ್ತು ಮೀನಿನಹೆಜ್ಜೆ ನ್ಯೂಸ್, ಸಾಗರದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು
ಸಾಗರ: ನಗರದ ಅಲ್ಪಸಂಖ್ಯಾತರ ಪ್ರಮುಖ ಯುವ ನಾಯಕರು, ಸಮಾಜ ಸೇವಕರು, ಕೊಡುಗೈ ದಾನಿ ಹಾಗೂ ನಗರಸಭೆಯ ಮಾಜಿ ಸದಸ್ಯರೂ ಆದ ಸೈಯದ್ ಜಾಕೀರ್ ಅವರ ಹುಟ್ಟುಹಬ್ಬ (ಅಕ್ಟೋಬರ್ 2ರ) ಅಂಗವಾಗಿ ಅಕ್ಟೋಬರ್ "1 ರ ಗುರುವಾರದಂದು "ಬೃಹತ್ ರಕ್ತದಾನ" ಶಿಬಿರವನ್ನು ಆಯೋಜಿಸಲಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರ ಅಪ್ಪಟ ಅಭಿಮಾನಿಯಾಗಿ ಜನಾನುರಾಗಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಜಾಕೀರ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಅಭಿಮಾನಿ ಬಳಗ ಈ ಶಿಬಿರವನ್ನು ಹಮ್ಮಿಕೊಂಡಿದೆ.
ಪಟ್ಟಣದ ಪ್ರತಿಷ್ಠಿತ 'ಹೋಟೆಲ್ ಗ್ರೀನ್ ಎಂಬಾಸ್ಸಿ'ಯಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಈ ಸಮಾಜಮುಖಿ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ಅಭಿಮಾನಿ ಬಳಗ ಪ್ರಕಟಣೆಯಲ್ಲಿ ಕೋರಿದೆ.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment