ರಂಗಕರ್ಮಿ ಸಂತೋಷ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ನಟನೆ : ಸಂತೋಷ್ ಸದ್ಗುರು ಅವರಿಗೆ ಅವಾರ್ಡ್
ರಂಗಕರ್ಮಿ ಸಂತೋಷ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ನಟನೆ : ಸಂತೋಷ್ ಸದ್ಗುರು ಅವರಿಗೆ ಅವಾರ್ಡ್
ಸಾಗರದ ರಂಗಕರ್ಮಿ ಸಂತೋಷ್ ಸದ್ಗುರು ಅವರ 'ದಿ ಟೈಮ್' ಯೂಟ್ಯೂಬ್ ಕಿರುಚಿತ್ರದ ಉತ್ತಮ ನಟನಾಗಿ ಸಾಗರದ ರಂಗಕರ್ಮಿ ಸಂತೋಷ್ ಸದ್ಗುರು ಅವರನ್ನು ಆಯ್ಕೆ ಮಾಡಲಾಗಿದೆ.
ಯೂನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್, ಜೆನೆಸಿಸ್ ಅಲ್ಟಿಮ ದುಬೈ, ಯುಎಇ ಮತ್ತು ಇಂಡೋ ಶ್ರೀಲಂಕಾ ಫಿಲಂ ಅಂಡ್ ಕಲ್ಚರಲ್ ಫೋರಮ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ದಿನಾಂಕ : 27-09-2026ರ ಭಾನುವಾರ ಗೋವಾ ರಾಜ್ಯದ ಪಣಜಿಯ ಝೆಡ್ ಸ್ಕ್ವೇರ್ ಹಾಲ್, ಅಶೋಕ ಹೋಟೆಲ್ ಇಲ್ಲಿ ನಡೆಯುವ ಸಮಾರಂಭದಲ್ಲಿ 'ದಿ ಟೈಮ್' ಕಿರು ಚಿತ್ರದ ನಟ ಸಂತೋಷ್ ಸದ್ಗುರು ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸ್ಥಳೀಯ ಪ್ರಸಿದ್ಧ ರಂಗಕರ್ಮಿ ಸಂತೋಷ್ ಸದ್ಗುರು ಅವರು ನಿರ್ಮಿಸಿರುವ 'ದಿ ಟೈಮ್' (The Time) ಎಂಬ ಕಿರುಚಿತ್ರವು ಜುಲೈ 24ರ ಶುಕ್ರವಾರ ಸಂಜೆ 7 ಗಂಟೆಗೆ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು.
https://yt.openinapp.co/l9sxw
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಕಷ್ಟ-ಸುಖಗಳು ಹಾಗೂ ಆ ಕಾಲದ ಸಂವೇದನಾಶೀಲ ಕಥಾಹಂದರವನ್ನು ಆಧರಿಸಿ ಈ ಕಿರುಚಿತ್ರವನ್ನು ನಿರ್ಮಿಸಲಾಗಿದ್ದು, ಸನ್ನಿವೇಶಗಳ ಅಭಾವ ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ಬಿಡುಗಡೆಯಾಗದೆ ಬಾಕಿಯ ಉಳಿದಿತ್ತು. ಇದೀಗ ಎಲ್ಲ ಅಡೆತಡೆಗಳನ್ನು ದಾಟಿ ಪ್ರೇಕ್ಷಕರ ಮುಂದಿದೆ.
ಕೊರೊನಾ ಸಮಯದಲ್ಲಿ ನಲುಗಿದ ಕಷ್ಟಪಟ್ಟು ದುಡಿಯುವ ವರ್ಗ ಹಾಗೂ ತಂದೆ-ಮಕ್ಕಳ ಭಾವನಾತ್ಮಕ ಪ್ರಯಾಣದ ಸುತ್ತ ಈ ಚಿತ್ರದ ಕಥೆ ಸಾಗಿದೆ. ಚಿತ್ರವು ಮನಸ್ಸಿಗೆ ತಟ್ಟಿತ್ತು.
ಯುಟ್ಯೂಬ್ ಚಾನಲ್ :*https://youtube.com/@santhoshsadguru?si=WWTG7NeoeEFRWBU6 (ತಪ್ಪದೆ ಸಬ್ ಸ್ಕ್ರೈಬ್ ಮಾಡಿ)*
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment