ಸಾಗರ ಹೊಸಗರ ತಾಲ್ಲೂಕು ಬರ ಪಿಡಿತ ಎಂದು ಘೋಷಿಸಿ-ಶಿವಾನಂದ ಕುಗ್ವೆ

ಸಾಗರ ಹೊಸಗರ ತಾಲ್ಲೂಕು ಬರ ಪಿಡಿತ ಎಂದು ಘೋಷಿಸಿ-ಶಿವಾನಂದ ಕುಗ್ವೆ

ಭೀಕರ ಬರಗಾಲ ಇದ್ದರೂ ಸರ್ಕಾರ ರೈತರ ನೆರವಿಗೆ ಇನ್ನೂ ಬಂದಿಲ್ಲ-ಎನ್. ಡಿ. ವಸಂತಕುಮಾರ್

ಸಾಗರ-ಹೊಸನಗರ ತಾಲೂಕನ್ನು ಬರ ಪೀಡಿತ ಎಂದು ಘೋಷಿಸದೆ ಇದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕರು ಹೇಳಬೇಕಿತ್ತು-ಭದ್ರೇಶ್ ಬಾಳಗೊಡು


ಸಾಗರ : ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಸಾಗರ ಹೊಸಗರ ತಾಲ್ಲೂಕು ಬಿಟ್ಟಿರುವುದು ಖಂಡನೀಯ. ಸರ್ಕಾರ ತಕ್ಷಣ ಸಾಗರ ಹೊಸನಗರ ತಾಲ್ಲೂಕನ್ನು ಬರಪೀಡತ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಒತ್ತಾಯಿಸಿದ್ದಾರೆ.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರbಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹ. ಆದರೆ ನಮ್ಮ ತಾಲ್ಲೂಕು ಬಿಟ್ಟಿರುವbಕ್ರಮ ಅವೈಜ್ಞಾನಿಕವಾದದ್ದು ಎಂದರು.

ರಾಜ್ಯದಲ್ಲಿ 140 ವರ್ಷಗಳ ನಂತರ ಭೀಕರ ಬರಗಾಲ ಬಂದಿದ್ದು ರೈತರು ಆತಂಕದಲ್ಲಿದ್ದರೆ. ಕೆರೆಕಟ್ಟೆ ಜಲಮೂಲಗಳು ಬತ್ತಿ ನಿಂತಿದೆ. ರಾಜ್ಯ ಸರ್ಕಾರ ಈತನಕ 206 ತಾಲ್ಲೂಕನ್ನು ಮಾತ್ರ ಬರಪೀಡತ ಎಂದು ಘೋಷಣೆ ಮಾಡಿದೆ. ಶಿವಮೊಗ್ಗvಜಿಲ್ಲೆಯಲ್ಲಿ ಸಾಗರ ಹೊಸನಗರ ಎರಡು ತಾಲ್ಲೂಕು ಹೊರತುಪಡಿಸಿ ಇತರೆ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ನಮ್ಮ ತಾಲ್ಲೂಕು ಕೈಬಿಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಪೀಡಿತ ತಾಲ್ಲೂಕುಗಳಿಗೆ ಶೇ. 50ರ ಅನುಪಾತದಡಿ ಸಮಾನವಾಗಿ ಪರಿಹಾರ ನೀಡಬೇಕು. ರೈತರು ಗುಳೆ ಹೋಗುತ್ತಿದ್ದು ಉದ್ಯೋಗ ಖಾತ್ರಿ ಕೂಲಿಯ ದಿನವನ್ನು 200ಕ್ಕೆ ಏರಿಸಬೇಕು. ರೈತರಿಗೆ ಕೊಡುತ್ತಿರುವ ವಿಮಾ ಪರಿಹಾರ ಅವೈಜ್ಞಾನಿಕವಾಗಿದ್ದು ಇದಕ್ಕೆ ಸೂಕ್ತ ಮಾನದಂಡ ರಚಿಸುವ ಜೊತೆಯಲ್ಲಿ ಬರಗಾಲ ಸಂದರ್ಭದಲ್ಲಿ ರೈತರಿಗೆ ತಕ್ಷಣ ವಿಮಾ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಅರಣ್ಯಮೂಲ ಬುಡಕಟ್ಟು ಜನರಿಗೆ ವರ್ಷದ 12 ತಿಂಗಳು ಪೌಷ್ಟಿಕ ಆಹಾರ ನೀಡುವ ಮೂಲಕ ಅವರಿಗೆ ರಕ್ಷಣೆ ನೀಡಿತ್ತು. ನಂತರ ಬಂದ ಸರ್ಕಾರಗಳು ಇದರ ಬಗ್ಗೆ ತೀವೃ ನಿರ್ಲಕ್ಷö್ಯ ವಹಿಸಿದೆ. ಕಳೆದ ಆರು ತಿಂಗಳಿನಿಂದ ಪೌಷ್ಟಿಕ ಆಹಾರ ಕೊಡುವುದನ್ನು ನಿಲ್ಲಿಸಿದೆ. ಇದನ್ನು ಖಂಡಿಸಿ ಸೆ. 28ರಂದು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ರೈತರ ನೆರವಿಗೆ ಇನ್ನೂ ಬಂದಿಲ್ಲ. ಮಲೆನಾಡು ಭಾಗದಲ್ಲಿ 21 ದಿನಗಳ ಕಾಲ ಮಳೆ ಬಂದಿಲ್ಲ ಎಂದರೆ ಅದನ್ನು ಬರಗಾಲ ಎಂದು ಘೋಷಣೆ ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿಕಡಿಮೆ ಮಳೆಯಾಗಿದೆ. ಆದರೂ ಸಾಗರ ಹೊಸನಗರ ತಾಲ್ಲೂಕನ್ನು ಬರದ ಪಟ್ಟಿಯಿಂದ ಹೊರಗೆ ಇಟ್ಟಿರುವುದು ಖಂಡನೀಯ. ಶಸಕರು ತಕ್ಷಣ ಸರ್ಕಾರದ ಮೇಲೆ ಒತ್ತಡbತರಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಜೊತೆಗೆ ಎರಡೂ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.

ರೈತ ಮುಖಂಡ ಭದ್ರೇಶ್ ಬಾಳಗೋಡು ಮಾತನಾಡಿ, ಸಾಗರ ಹೊಸನಗರ ಕ್ಷೇತ್ರ ಶಾಶಕರು ವಿಧಾನಸೌಧದಲ್ಲಿ ಇದರ ಬಗ್ಗೆ ಮಾತನಾಡದೆ ಇರುವುದು ರೈತರಿಗೆ ಮಾಡಿದ ಅನ್ಯಾಯ. ಬೇರೆ ವಿಷಯಗಳಿಗಾಗಿ ರಾಜೀನಾಮೆ ಕೊಡಲು ಮುಂದಾಗುವ ನಮ್ಮ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ತಾಲೂಕನ್ನು ಬರ ಪೀಡಿತ ಎಂದು ಘೋಷಿಸದೆ ಇದ್ದರೆ ರಾಜೀನಾಮೆ ಕೊಡುವುದಾಗಿ ಮುಖ್ಯಮಂತ್ರಿಗಳಿಗೆ ಹೇಳಲಿ, ಆಗ ಶಾಸಕರಿಗೆ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು. ಬೇರೇ ಕ್ಷೇತ್ರದ ಶಾಸಕರು ರಾಜೀನಾಮೆಯ ಗುಟುರು ಹಾಕಿ ತಮ್ಮ ಕ್ಷೇತ್ರವನ್ನು ಬರ ಪಿಡಿತ ಕ್ಷೇತ್ರಗಳ ಪಟ್ಟಿಯಲ್ಲಿ ತರುವಲ್ಲಿ ಸಫಲರಾಗಿದ್ದಾರೆ. ಆದರೆ ನಮ್ಮ ಶಾಸಕರು ಈ ವಿಷಯದಲ್ಲಿ ಮೌನ ವಹಿಸಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಗೋಷ್ಟಿಯಲ್ಲಿ ಹೊಯ್ಸಳ ಗಣಪತಿಯಪ್ಪ, ಎಂ.ಬಿ. ಮಂಜಪ್ಪ,ಕಿರಣ್ ಕುಮಾರ್ ವಡ್ನಾಲ, ರಮೇಶ್ ಐಗಿನಬೈಲು, ರಾಮಪ್ಪ ಶಿರವಾಳ, ರಾಮಣ್ಣ ಹಸಲರು, ಶ್ಯಾಮಲಾ ಹಾಜರಿದ್ದರು. 


ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ