ಸಾಗರದ ಪ್ರಖ್ಯಾತ ಉದ್ಯಮಿ ಪಿ.ಎಂ.ಜೆ.ಎಫ್ ಲಯನ್ "ಟಿ.ವಿ ಪಾಂಡುರಂಗ " ಅವರಿಂದ ದಾವಣಗೆರೆಯ "ರಾಷ್ಟ್ರೀಯ ವಿಕಲಚೇತನ ಸಂಯುಕ್ತಾ ಪ್ರಾದೇಶಿಕ ಕೇಂದ್ರ" ಕ್ಕೆ 10 ಹೊಲಿಗೆ ಯಂತ್ರ ದೇಣಿಗೆ....ಮಾನವೀಯ ಮೌಲ್ಯ ಎತ್ತಿ ಹಿಡಿದ ಉದ್ಯಮಿ

ಸಾಗರದ ಪ್ರಖ್ಯಾತ ಉದ್ಯಮಿ ಪಿ.ಎಂ.ಜೆ.ಎಫ್ ಲಯನ್ ಟಿ.ವಿ ಪಾಂಡುರಂಗ ಅವರಿಂದ ದಾವಣಗೆರೆಯ "ರಾಷ್ಟ್ರೀಯ ವಿಕಲಚೇತನ ಸಂಯುಕ್ತಾ ಪ್ರಾದೇಶಿಕ ಕೇಂದ್ರ" ಕ್ಕೆ 10 ಹೊಲಿಗೆ ಯಂತ್ರ ದೇಣಿಗೆ....ಮಾನವೀಯ ಮೌಲ್ಯ ಎತ್ತಿ ಹಿಡಿದ ಉದ್ಯಮಿ

ಅಂಗವಿಕಲ ವ್ಯಕ್ತಿಗಳು ಸಮಾಜದ ಕಣ್ಣುಗಳು ದೇವರ ಮಕ್ಕಳು-ಟಿ. ವಿ. ಪಾಂಡುರಂಗ 

ದಿನಾಂಕ.28.09.2026 ರಂದು ಸಂಯುಕ್ತಾ ಪ್ರಾದೇಶಿಕ ಕೇಂದ್ರ, ದಾವಣಗೆರೆ ಹಾಗೂ ಲಯನ್ಸ್ ಕ್ಲಬ್, ಸಾಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಹೊಲಿಗೆ ಯಂತ್ರಗಳ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಸಮಾರಂಭವು ಬಹಳ ಆದ್ದೂರಿಯಾಗಿ ನಡೆಯಿತು.



ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಪಾಂಡುರಂಗ ಟಿ. ವಿ ಇಂತಹ ಕಾರ್ಯಗಳಿಗೆ ಜನರು ಧ್ವನಿಯಾಗಬೇಕು ಎಂದರು. ಸರ್ಕಾರದಿಂದ ನಾವು ಸವಲತ್ತಗಳನ್ನು ಪಡೆಯುವುದರ ಜೊತೆಗೆ ಸರ್ಕಾರಕ್ಕೂ ಕೂಡ ನಮ್ಮ ಕೈಲಾದ ಸಹಾಯದ ಮೂಲಕ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.



ಈ ಸಂಧರ್ಭದಲ್ಲಿ CRC ನಿರ್ದೇಶಕರಾದ ಮಾರುತಿಕೃಷ್ಣ,317ಹೆಚ್ ಜಿಲ್ಲಾ ಗವರ್ನರ್ ಆದ ಪಿ.ಎಂ.ಜೆ.ಎಫ್ ಲಯನ್ ಆರ್. ಜಿ. ಶ್ರೀನಿವಾಸ ಮೂರ್ತಿ, ದ್ವಿತೀಯ ಜಿಲ್ಲಾ ಉಪ ಗವರ್ನರ್  ಆದ ಪಿ.ಎಂ.ಜೆ.ಎಫ್ ಲಯನ್ ಅಶ್ವಿನಿ ಕುಮಾರ್, ಸಾಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ಎಂ.ಜೆ.ಎಫ್ ಲಯನ್ ಈ.ನಾಗರಾಜ್, ವಲಯ ಅಧ್ಯಕ್ಷ ಪಿ.ಎಂ.ಜೆ.ಎಫ್ ಲಯನ್ ಡಾ .ಪ್ರಸನ್ನ ಟಿ,ವಲಯ ಕಾರ್ಯದರ್ಶಿ ಎಂ.ಜೆ.ಎಫ್ ಲಯನ್ ಸುಧೀರ್ ಶೆಟ್ಟಿ, ಜಿಲ್ಲಾ ಕ್ಯಾಬಿನೆಟ್ ನ ಜಂಟಿ ಕಾರ್ಯದರ್ಶಿ ಲಯನ್. ನಾಗರಾಜ್ ಚಟ್ಟಕ್ಕಿ, ಸಾಗರ ಲಯನ್ಸ್ ಕಾರ್ಯದರ್ಶಿ ಸಂತೋಷ್ ನಮ್ಮನೆ ,ಎ ಎಂ ಶ್ರೀಧರ್, ಜಗನ್ನಾಥ ಗಾಣಿಗ CRC ಯ ಆಡಳಿತಾಧಿಕಾರಿ ಶ್ರೀ ಶ್ರೀನಾಥ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಸಾಗರ , ದಾವಣಗೆರೆ ಹಾಗೂ ಉಳವಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು CRC ನಿರ್ದೇಶಕರಾದ ಮಾರುತಿಕೃಷ್ಣ ಅವರು ವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ