ಸೆಪ್ಟೆಂಬರ್ 27ಕ್ಕೆ ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ
ಸೆಪ್ಟೆಂಬರ್ 27ಕ್ಕೆ ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ
ಸಾಗರ : ಶಿವಮೊಗ್ಗ ಜಿಲ್ಲಾ ನಾಮಧಾರಿ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕೋತ್ಸವ, ಸರ್ವಸದಸ್ಯರ ಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಸೆ. 27ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಇಂದಿರಾಗಾಂಧಿ ಕಾಲೇಜು ಸಮೀಪದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದೆ ಎಂದು ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಆರ್.ನಾಯ್ಕ್ ತಿಳಿಸಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8ರಿಂದ 10ರೊಳಗೆ ಸತ್ಯನಾರಾಯಣ ಸ್ವಾಮಿ ಪೂಜೆ ಇರುತ್ತದೆ ಎಂದರು.
ಬೆಳಿಗ್ಗೆ 11ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ವೆಂಕಟೇಶ್ ಕೆ.ಎಸ್. ಅಧ್ಯಕ್ಷತೆ ವಹಿಸುವರು. ಎಸ್.ಕೆ.ಚಂದ್ರು, ಗಜಾನನ ಕೆ.ಎಸ್., ಚಂದ್ರಶೇಖರ್ ಕೆ.ಎನ್., ನಾಗರಾಜ್ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದು, ಹಿರಿಯ ನಾಗರೀಕರಾದ ನಾರಾಯಣ ರಾವ್ ಆನಂದಪುರ, ಶಾಂತಮ್ಮ ಕೋಂ ಮಂಜಪ್ಪ ಅವರಿಗೆ ಸನ್ಮಾನ, ನಿವೃತ್ತ ಯೋಧ ಗೌರೀಶ್, ಶಶಿಕಲಾ ಎಸ್., ಗಣೇಶ್ ನಾಯ್ಕ್ ಅವರನ್ನು ಅಭಿನಂದಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬಾಬು ಬಿನ್ ಗಣಪನಾಯ್ಕ, ನಾಗರಾಜ್ ವರದಾಮೂಲ, ಶಾರದಮ್ಮ ಸಣ್ಣಪ್ಪ ಅವರನ್ನು ಗೌರವಿಸಲಾಗುತ್ತದೆ. ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಬೆಳಿಗ್ಗೆ 10ಕ್ಕೆ ಪರಿಣತಿ ಕಲಾಕೇಂದ್ರದ ವತಿಯಿಂದ ವಿದ್ವಾನ್ ಎಂ. ಗೋಪಾಲ್ ಅವರ ನೇತೃತ್ವದಲ್ಲಿ ಭರತನಾಟ್ಯ, ರವಿವರ್ಮ ಚಿತ್ರಕಲಾ ಶಾಲೆಯಿಂದ ಮ್ಯೂಸಿಕಲ್ ಮತ್ತು ಸ್ಪೀಡ್ ಪೈಂಟಿAಗ್, ಶಿಕ್ಷಕರಿಂದ ಸಮೂಹ ಗಾಯನ ಇರುತ್ತದೆ. ಸಂಘವು ಕಳೆದ ಆರು ವರ್ಷಗಳಿಂದ ಬೇರೆಬೇರೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದೆ. ಎಲ್ಲರೂ ಸಂಘದ ಶ್ರೇಯೋಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ್ ಕೆ.ಎಸ್., ಗಜಾನನ, ಸೋಮಶೇಖರ್, ಗೋಪಾಲ ಎಂ. ಹಾಜರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment