ಸಾಗರ ಕ್ಷೇತ್ರ ಶಾಸಕರು ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ-ಮಾಜಿ ಸಚಿವ ಹಾಲಪ್ಪ

ಸಾಗರ ಕ್ಷೇತ್ರ ಶಾಸಕರು ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ-ಮಾಜಿ ಸಚಿವ ಹಾಲಪ್ಪ 

ಮರಣಹೋಮ ಅಸಂಬದ್ಧ ಪದ ಬಳಕೆ 


ಸಾಗರ : ಶಾಸಕ ಬೇಳೂರು ಸುಳ್ಳು ಹೇಳುತ್ತಾರೆ ಎಂದು ಪದೇಪದೇ ಹೇಳಿದ್ದೇನೆ. ಈಗ ಸದನದಲ್ಲೂ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಇಲ್ಲಿನ ವಿನೋಬಾ ನಗರದಲ್ಲಿ ಮಂಗಳವಾರ ವಿನೋಬಾ ನಗರ ಯುವಕ ಸಂಘದ ವತಿಯಿಂದ ಪ್ರತಿಷ್ಟಾಪಿಸಲಾಗಿರುವ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಅದೇನೋ ಹನ್ನೊಂದು ಬಾರಿ ಎಂದು ಹೇಳುತ್ತಿದ್ದಾರೆ. ಅದೇನೆಂದು ನನಗೂ ಅರ್ಥವಾಗಿಲ್ಲ. ಹನ್ನೊಂದು ಬಾರಿ ಏನು, ಯಾರು ವರದಿ ಕೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಬೇಕು. ಏನು ಹೇಳಬೇಕು ಎನ್ನುವುದನ್ನು ಇನ್ನೊಮ್ಮೆ ಸ್ಪಷ್ಟವಾಗಿ, ಯಾರ ಹತ್ತಿರವಾದರೂ ಸರಿಯಾಗಿ ಬರೆಸಿಕೊಂಡು ಅಧ್ಯಯನ ನಡೆಸಿ ಹೇಳಿಕೆ ನೀಡಲಿ ಎಂದು ಒತ್ತಾಯಿಸುತ್ತೇನೆ.

ಸದನದ ಒಳಗೆ ಮತ್ತು ಹೊರಗೆ ಹನ್ನೊಂದು ಬಾರಿ ಏನು ಎನ್ನುವುದು ಸಾಗರದ ಜನರಿಗೆ ಸ್ಪಷ್ಟಪಡಿಸಲಿ. ನಾವು ಅಧಿಕಾರದಲ್ಲಿದ್ದಾಗ ಕಸ್ತೂರಿ ರಂಗನ್ ವರದಿ ಅಧಿಸೂಚನೆ ವಿರುದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೇಂದ್ರ ಸಚಿವರಾದ ಪ್ರಹ್ಲಾಧ್ ಜೋಷಿ ಅವರ ನಿಯೋಗದ ಜೊತೆ ಕೇಂದ್ರದ ಪ್ರಮುಖರನ್ನು ಭೇಟಿ ಮಾಡಿದ್ದೇವೆ. ಪ್ರತಿ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ ಇದ್ದರು. ಇವರು ಮೂರು ಬಾರಿ ಶಾಸಕರಾದವರು, ಯಾವಾಗ ಹೋಗಿ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿ ಬೇಡ ಎಂದು ಮನವಿ ಮಾಡಿದ್ದಾರೆ ಎನ್ನುವುದನ್ನಾದರೂ ಜನರಿಗೆ ತಿಳಿಸಲಿ ಎಂದು ಹೇಳಿದರು.

ಪ್ರತಿಬಾರಿ ಮರಣ ಹೋಮ ಎನ್ನುತ್ತಾರೆ. ಮರಣ ಹೋಮ ಎನ್ನುವ ಶಬ್ದ ಪರಿಸರಕ್ಕೆ ಸಂಬಂಧಿಸಿದಂತೆ ಹೆಚ್ಚು ಉಪಯೋಗ ಮಾಡುವುದಿಲ್ಲ. ಮಾರಣ ಹೋಮ ಎನ್ನುವ ಶಬ್ದವನ್ನು ನಾವೆಲ್ಲಾ ಕೇಳಿದ್ದೇವೆ. ಒಂದು ರೀತಿಯಲ್ಲಿ ಅಸಂಬದ್ದವಾಗಿ ಮಾತನಾಡುತ್ತಾ ಹೋಗುವುದೇ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ ಎಂದು ಬೇಳೂರು ಅವರನ್ನು ಟೀಕಿಸಿರುವ ಹರತಾಳು ಹಾಲಪ್ಪ, ಊರಿನಲ್ಲಿ ಅಭಿವೃದ್ದಿ ಕೆಲಸಗಳು ಪೂರ್ಣ ನಿಂತು ಹೋಗಿದೆ. ದಿನವಹಿ ವಹಿವಾಟು ನಡೆಸುವವರಿಗೆ ಕೇಳಿ ನೋಡಿ ಎಷ್ಟು ಆರ್ಥಿಕ ಚಟುವಟಿಕೆ ನಡೆಯುತ್ತಿದೆ. ಸರ್ಕಾರದಿಂದ ಹಣ ಬರಬೇಕು. ಆಗ ಕೆಲಸಗಳು ನಡೆಯುತ್ತದೆ. ಜನರ ಕೈನಲ್ಲಿ ಹಣ ಓಡಾಡುತ್ತದೆ. ಇದನ್ನು ನಮ್ಮ ಜನರಿಗೆ ತಿಳಿಸಿ ಹೇಳುವವರು ಯಾರು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಗಣೇಶ ಪ್ರಸಾದ್, ಮಹೇಶ್ ಎಂ.ಆರ್., ಬಿ.ಟಿ.ರವೀಂದ್ರ ಇನ್ನಿತರರು ಹಾಜರಿದ್ದರು. 

ಸುದ್ದಿ ಮತ್ತು ಜಾಹಿರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ