ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭ-ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು

ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭ-ಆಪ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು

ಸಾಗರ : ಆಪ್‌ಕೋಸ್ ಅಭಿವೃದ್ದಿಗೆ ಪೂರಕವಾದ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದಿನ ಸಾಲಿಗಿಂತ ಹೆಚ್ಚಿನ ಲಾಭ ಸಂಸ್ಥೆ ಗಳಿಸಿದ್ದು, ಷೇರುದಾರರ ಹಿತಕಾಯುವ ಅನೇಕ ಯೋಜನೆಗಳನ್ನು ಹಂತಹಂತವಾಗಿ ಅನುಷ್ಟಾನಕ್ಕೆ ತರಲು ಆಡಳಿತ ಮಂಡಳಿ ಸಜ್ಜಾಗಿದೆ. ಈ ಆರ್ಥಿಕ ಸಾಲಿನಲ್ಲಿ ಸುಮಾರು 4 ಕೋಟಿ ರೂ. ಲಾಭಗಳಿಸಲಾಗಿದೆ ಎಂದು ಆಪ್ಸ್,ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ತಿಳಿಸಿದರು.

ಇಲ್ಲಿನ ಭದ್ರಕಾಳಿ ಸಭಾಂಗಣದಲ್ಲಿ ಬುಧವಾರ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಎಲ್ಲ ರೀತಿಯ ಷೇರುದಾರ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಆಸ್ತಿ ಬೇರೆಬೇರೆ ಕಡೆ ಇದ್ದು ಅದರಲ್ಲಿ ಹೊಸಹೊಸ ಯೋಜನೆ ಮೂಲಕ ಸಂಸ್ಥೆಯ ಆರ್ಥಿಕ ಶಕ್ತಿ ಹೆಚ್ಚಿಸಲು ಗಮನ ಹರಿಸಿದ್ದು, ಸಂಗಳದಲ್ಲಿ ಸಂಸ್ಥೆಯ 7ಎಕರೆ ಜಾಗವಿದ್ದು ಅಲ್ಲಿ ವಂಡರ್‌ಲಾ, ಪವರ್ ಪ್ಲಾಂಟ್ ಇನ್ನಿತರೆ ಮಾಡುವ ಉದ್ದೇಶ ಹೊಂದಿದೆ. ತುರ್ತು ಸಂದರ್ಭದಲ್ಲಿ ಷೇರುದಾರರು ಅನಾರೋಗ್ಯಕ್ಕೆ ತುತ್ತಾದಾಗ ಅವರ ನೆರವಿಗೆ ಆಪ್‌ಕೋಸ್ ನಿಲ್ಲುತ್ತಿದೆ. ಹೆಸರಾಂತ ಆಸ್ಪತ್ರೆಯ ಜೊತೆ ಟೈಅಪ್ ಮಾಡಿಕೊಂಡು ತಕ್ಷಣ ಆರೋಗ್ಯ ಸೇವೆ ಕಲ್ಪಿಸಲು ತೀರ್ಮಾನಿಸಿದೆ. ರೈತರ ಅಡಿಕೆ ಖರೀದಿbಮಾಡಿ ಅದನ್ನು ಸಂಸ್ಕರಿಸುವ ಜೊತೆಗೆ ನ್ಯಾಯವಾದ ಬೆಲೆ ಅವರಿಗೆ ಸಿಗಬೇಕು ಎನ್ನುವbನಿಟ್ಟಿನಲ್ಲಿ ಗಮನ ಹರಿಸಿದ್ದು, ರೈತರಿಂದ ಹಸಿ ಅಡಿಕೆಯನ್ನು ಖರೀದಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಅಡಿಕೆಯನ್ನು ಗ್ರಾಹಕರು ತಂದು ಆಪ್‌ಕೋಸ್‌ಗೆ ಸರಿಯಾಗಿ ಹಾಕಿಲ್ಲ. ಜೊತೆಗೆ 27ಸಾವಿರ ಮೂಟೆ ಅಡಿಕೆ ಸಂಗ್ರಹ ಇರುವುದರಿಂದ ಹೆಚ್ಚಿನ ಲಾಭ ಗಳಿಸಲು ಸ್ವಲ್ಪ ಹಿನ್ನೆಡೆ ಉಂಟಾಗಿದೆ. ಅಡಿಕೆ ಧಾರಣೆ ಕುಸಿಯುತ್ತಿದ್ದು, ಬೆಳೆಗಾರರು ಉತ್ತಮ ದರ ಇದ್ದಾಗ ಅಡಿಕೆ ಮಾರಾಟ ಮಾಡಿ ಲಾಭ ಗಳಿಸಬೇಕು. ಸುಮಾರು 70 ಕೋಟಿ ಹಣ ಡೆಪಾಜಿಟ್ ಮಾಡಿದ್ದು, ಹೊಸನಗರದಲ್ಲಿ ಸುಮಾರು 2.5 ಕೋಟಿ ರೂ. ಗೋದಾಮು ನಿರ್ಮಿಸಿದ್ದು ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ. ಸಾಗರದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಿಸಲು ಗಮನ ಹರಿಸಲಾಗಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಆರ್.ಎಸ್.ಗಿರಿ ಷೇರುದಾರರ ಆರೋಗ್ಯ ರಕ್ಷಣೆಗೆ ಹೊಸ ಯೋಜನೆ ತನ್ನಿ ಎಂದರೇ, ಕೆ.ಆರ್.ಶ್ರೀಧರ್ ಭಟ್ ಅಡಿಕೆ ದರ ಕುಸಿತ ಸಂದರ್ಭದಲ್ಲಿ ಕ್ಯಾಂಪ್ಕೋ ಹೆಚ್ಚಿನ ಅಡಿಕೆ ಖರೀದಿ ಮಾಡಬೇಕು ಎಂದು ಸಲಹೆ ನೀಡಿದರೆ ಭರತ್ ನಾಡಿಗ್ ಹೆಸರಾಂತ ಆಸ್ಪತ್ರೆಗಳಿದ್ದು ಅವರ ಜೊತೆ ಟೈಅಪ್ ಮಾಡಿಕೊಳ್ಳಲು ಮನವಿ ಮಾಡಿದರು. ಸದಸ್ಯ ಸಿದ್ದವೀರಪ್ಪ ಆಡಿಟ್ ಬಗ್ಗೆ ತಕರಾರು ಸಲ್ಲಿಸಿದರು.

ಉಪಾಧ್ಯಕ್ಷ ಎ.ಓ.ರಾಮಚಂದ್ರ, ನಿರ್ದೇಶಕರಾದ ಕೆ.ಎಂ.ಸೂರ್ಯನಾರಾಯಣ ಖಂಡಿಕಾ, ಕೆ.ಎಸ್.ಸುಬ್ಬರಾವ್ ಕೇಡಲಸರ, ರಮೇಶ್ ಎಂ.ಬಿ., ವೈ.ಎನ್.ಸುರೇಶ್, ಎಚ್.ಬಿ.ಕಲ್ಯಾಣಪ್ಪ ಗೌಡ, ಎಚ್.ಓಮಕೇಶ್, ಎಚ್.ಕೆ.ರಾಘವೇಂದ್ರ, ಭಾರತಿ ಎಂ.ಡಿ., ನಾಗರತ್ನ ಎಸ್.ಎಸ್., ಕೆ.ಎಂ.ಸತ್ಯನಾರಾಯಣ, ನಂದನಕುಮಾರ್, ಚೌಡಪ್ಪ ಎ.ಕೆ., ಭಾಸ್ಕರ ಭಟ್ ಇನ್ನಿತರರು ಹಾಜರಿದ್ದರು. ಕಾರ್ಯದರ್ಶಿ ಲಂಬೋಧರ ಎಚ್.ಎನ್. ನಿರೂಪಿಸಿದರು. 

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ