ಶಾಲಾ ಶೈಕ್ಷಣಿಕ ಭೋಧನಾ ವಿಸ್ತರಣೆ ಮಾಡಲು ABVP ಯಿಂದ ಪ್ರತಿಭಟನೆ : ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ
ಶಾಲಾ ಶೈಕ್ಷಣಿಕ ಭೋಧನಾ ವಿಸ್ತರಣೆ ಮಾಡಲು ABVP ಯಿಂದ ಪ್ರತಿಭಟನೆ : ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ
ಸಾಗರ : ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹಾಗೂ ನಿಗದಿತ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಲುವಾಗಿ ಅಗತ್ಯವಿರುವ ಕಾರ್ಯನಿರ್ವಹಣಾ ದಿನಗಳ ಕೊರತೆ ಉಂಟಾಗಿದೆ. ಆದ್ದರಿಂದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಪಠ್ಯಕ್ರಮವನ್ನು ಪೂರ್ಣಗೊಳಿಸಲು ಕಾಲೇಜಿನ ಕಾರ್ಯನಿರ್ವಹಣಾ ದಿನಗಳನ್ನು ಇನ್ನು ನವೆಂಬರ್ 30 ರ ದಿನಗಳವರೆಗೆ ವಿಸ್ತರಿಸುವಂತೆ ಸಾಗರ ಉಪವಿಭಾಗಾಧಿಕಾರಿಗಳಿಗೆ ಇಂದು ABVP ಯಿಂದ ಮನವಿ ನೀಡಲಾಯಿತು.
ಹಾಗೆಯೇ ಈ ಕಾರ್ಯನಿರ್ವಹಣಾ ದಿನಗಳ ವಿಸ್ತರಣೆಯ ಕುರಿತು ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿ ಅವರ ಅನುಮೋದನೆ/ಸೂಚನೆಯನ್ನು ಪಡೆಯುವಂತೆ ಮನವೀಯಲ್ಲಿ ವಿನಂತಿಸಲಾಗಿದೆ.
ಬೇಡಿಕೆಗಳು ಹೀಗಿವೆ :-
1. ಶೈಕ್ಷಣಿಕ ಬೆಸ ದಿನಗಳನ್ನು ಕನಿಷ್ಠ 30 ದಿನಗಳು ವಿಸ್ತರಿಸುವಂತೆ ಅಥವಾ ಮುಂದೂಡಬೇಕು
2. ಪರೀಕ್ಷೆಗಳಲ್ಲಿ ವಿಷಯದಿಂದ ವಿಷಯಕ್ಕೆ ಕನಿಷ್ಠ ಎರಡು ದಿನಗಳ ಅಂತರವಿರುವಂತೆ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಬೇಕು
3. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಸರಿಯಾಗಿ ಕಾರ್ಯನಿರ್ವಹಿಸುವ ಸ್ಟುಡೆಂಟ್ ಹೆಗ್ಡೆ ನ ತೆರೆಯಬೇಕು
4. ವಿಶ್ವವಿದ್ಯಾಲಯವು ಪರೀಕ್ಷಾ ಫಲಿತಾಂಶವನ್ನು ವಿಳಂಬವಿಲ್ಲದೆ ನೀಡಬೇಕು
ನಮ್ಮ ಮನವಿ ಮತ್ತು ಬೇಡಿಕೆಗಳನ್ನು ಪರಿಗಣಿಸಿ ಅಗತ್ಯಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ದಕ್ಷಿಣ ಪ್ರಾಂತ ರಾಜ್ಯ ಕಾರ್ಯಕಾರಣಿ ಸದಸ್ಯರು ಮತ್ತು ಸಾಗರ ತಾಲೂಕು ಸಂಚಾಲಕರು ಮೋಹನ್ ಹೆಚ್. ಜಿ., ಪುನೀತ್. ಮದನ್.ಲೇ, ಆಕಾಶ, ಚೇತನ್, ಮಣಿ, ರಾಕೇಶ್ ಇನ್ನಿತರರು ಇದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment