ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಎ, ಎಸ್, ಪಿ ಗೆ ಮನವಿ
ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಎ, ಎಸ್, ಪಿ ಗೆ ಮನವಿ
ಸಾಗರ : ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ತೋಟ ಮತ್ತು ಮನೆಗಳಲ್ಲಿ ಪಂಪ್‌ಸೆಟ್, ವಿದ್ಯುತ್ ತಂತಿ ಕಳ್ಳತನ, ಸೊಪ್ಪಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ವಿರುದ್ದ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಬುಧವಾರ ಕಲ್ಮನೆ ಮತ್ತು ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರೀಕರು ಪೊಲೀಸ್ pಉಪಾಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಕಲ್ಮನೆ ಮತ್ತು ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು ಜಾಸ್ತಿಯಾಗುತ್ತಿದೆ. ಮುಖ್ಯವಾಗಿ ತೋಟಗಳಲ್ಲಿ, ಮನೆಯ ಹಿಂಬದಿಯಲ್ಲಿ ನೀರಿನ ವ್ಯವಸ್ಥೆಗಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಕಳ್ಳತನ ಮಾಡಲಾಗುತ್ತಿದ್ದು, ಕಳೆದ ಒಂದು ತಿಂಗಳಿನಿAದ ಇಪ್ಪತ್ತೆದಕ್ಕೂ ಹೆಚ್ಚು ಪಂಪ್‌ಸೆಟ್, ಅದಕ್ಕೆ ಅಳವಡಿಸಿದ್ದ ತಂತಿ, ಕೇಬಲ್‌ಗಳನ್ನು ಕಳ್ಳತನvಮಾಡಲಾಗಿದೆ. ಈ ಸಂಬAಧ ಎಂಟತ್ತು ಎಫ್.ಐ.ಆರ್. ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.vತಕ್ಷಣ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚAದ್ರ ಭಟ್ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಗ್ರಾಮೀಣ ಭಾಗದ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಕಲ್ಮನೆ, ಭೀಮನಕೋಣೆ, ಹೆಗ್ಗೋಡು ಸೇರಿ ಅಕ್ಕಪಕ್ಕದ ಗ್ರಾಮ ಪಂಚಾಯ್ತಿಯಲ್ಲಿ ವ್ಯವಸ್ಥಿತವಾದ ಜಾಲವೊಂದು ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡುತ್ತಿದೆ. ಇದರ ಬಗ್ಗೆ ದೂರು ಸಹ ನೀಡಲಾಗಿದೆ. ಆದರೂ ಪೊಲೀಸರು ಕಳ್ಳರನ್ನು ಹಿಡಿದಿಲ್ಲ. ತಕ್ಷಣ ಪಂಪ್‌ಸೆಟ್ ಕಳ್ಳರನ್ನು ಹಿಡಿಯಬೇಕು. ಇಕ್ಕೇರಿ ರಸ್ತೆಯ ಪಾಲಿಟೆಕ್ನಿಕ್ ಕಾಲೇಜಿನಿಂದvಲಿಂಗದಹಳ್ಳಿ ಬೋರ್ಡ್,ಗಲ್ಲಿನವೆರೆಗೆ ಹದಿಹರೆಯದ ಯುವಕ ಯುವತಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದನ್ನು ಗ್ರಾಮಸ್ಥರು ನೋಡಿದ್ದು, ಅವರಿಗೆ ಬುದ್ದಿ ಹೇಳಿದರೆ ನಮ್ಮ ಮೈಮೇಲೆ ಬರುತ್ತಾರೆ. ಮಾದಕ ಪದಾರ್ಥ ಸೇವಿಸಿದ್ದು ಮೇಲ್ನೊಟಕ್ಕೆ ಕಂಡು ಬರುತ್ತದೆ. ತಕ್ಷಣ ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಇಕ್ಕೇರಿ ವೃತ್ತದಿಂದ ಲಿಂಗದಹಳ್ಳಿ ವೃತ್ತದವರೆಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಣೇಶ್ ಪ್ರಸಾದ್, ಎಲ್.ವಿ.ಅಕ್ಷರ, ಸುರೇಶ್ ಗೌಡ, ಮಹಾಬಲೇಶ್ವರ, ಮಹ್ಮದ್ ಗೌಸ್, ಶ್ರಾವ್ಯ, ರಾಜೇಶ್ ಮಾವಿನಸರ, ಪ್ರಸನ್ನ, ಕುಂಟಗೋಡು ಸೀತಾರಾಮ್ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment