ಸಿಗಂದೂರು ದಸರಾಕ್ಕೆ ಸರ್ವರನ್ನು ಆಹ್ವಾನಿಸಿದ ಸಿಗಂದೂರು ಶ್ರೀ ಚೌದಮ್ಮ ದೇವಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಎಚ್. ಆರ್. ರವಿಕುಮಾರ್
ಸಿಗಂದೂರು ದಸರಾಕ್ಕೆ ಸರ್ವರನ್ನು ಆಹ್ವಾನಿಸಿದ ಸಿಗಂದೂರು ಶ್ರೀ ಚೌದಮ್ಮ ದೇವಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಎಚ್. ಆರ್. ರವಿಕುಮಾರ್
ಶ್ರೀಕ್ಷೇತ್ರ ಸಿಗಂದೂರಿನ ಚಿತ್ತ ರಂಗಶಿಕ್ಷಣದತ್ತ ಯೋಜನೆಯಡಿ ರಂಗನವರಾತ್ರಿಯ ನಾಟಕೋತ್ಸವ ಪ್ರದರ್ಶನ
11/10/2026 ರಿಂದ 21/10/2026 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
'ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ' ಯೋಜನೆಯ 2026/27ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆಯನ್ನು ಎಸ್. ಮಧುಬಂಗಾರಪ್ಪನವರು ಉದ್ಘಾತಟಿಸಲಿದ್ದಾರೆ.
ಸಿಗಂದೂರು ದಸರಾಕ್ಕೆ ಚಾಲನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣಬೇಳೂರು ನೀಡಲಿದ್ದಾರೆ.
ಓಂಸರ್ವಸ್ವರೂಪೇಸರ್ವೇಶೇಸರ್ವಶಕ್ತಿಸಮನ್ವಿತೇ । ಭಯೇಭ್ಯಸ್ತ್ರಾಹಿನೋದೇವಿಶ್ರೀಚೌಡಮ್ಮದೇವಿನಮೋಸ್ತುತೇ ।।
ಡಾ.ಶ್ರೀ ಎಸ್. ರಾಮಪ್ಪನವರಿಂದ ಸಿಗಂದೂರಿನಲ್ಲಿ ಸ್ಥಾಪಿಸಿ ಆರಾಧಿಸಲ್ಪಡುತ್ತಿರುವ ಶ್ರೀ ಚೌಡಮ್ಮದೇವಿ ದೇವಾಲಯ, ಶ್ರೀಕ್ಷೇತ್ರ ಸಿಗಂದೂರು
ಶ್ರೀಸಿಗಂದೂರು ದಸರಾ-2026
11/10/2026 ರಿಂದ 21/10/2026 ರವರೆಗೆ
ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ (ರಿ.), ಶ್ರೀಕ್ಷೇತ್ರ ಸಿಗಂದೂರು ಕಳಸವಳ್ಳಿ ಗ್ರಾಮ, ತುಮರಿ ಅಂಚೆ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ - 577453
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೯೪೮ನೇ ಶ್ರೀ ಪರಾಭವ ಸಂವತ್ಸರದ ದಕ್ಷಿಣಾಯಣ ಶರದೃತು 'ಆಶ್ವಯುಜ ಮಾಸ ಶುಕ್ಲಪಕ್ಷ ದಿನಾಂಕ 11/10/2026ನೇ ಭಾನುವಾರದಿಂದ 21/10/2026ನೇ ಬುಧವಾರದವರೆಗೆ ಶರನ್ನವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಪ್ರತಿ ದಿನ ದೇವಿಗೆ ಪಂಚಾಮೃತ ಅಭಿಷೇಕ, ವಿವಿಧ ವಿಶೇಷ ದ್ರವ್ಯಗಳಿಂದ ಮಹಾಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಗುರುಗಳಆರಾಧನೆ, ಕುಂಕುಮಾರ್ಚನೆ, ದುರ್ಗಾಹೋಮ, ಚಂಡಿಕಾಹೋಮ, ನವಚಂಡಿಕಾ ಹೋಮ, ದುರ್ಗಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸಿಗಂದೂರು ದಸರಾ ಉದ್ಘಾಟನಾ ಸಮಾರಂಭ ದಿನಾಂಕ 11/10/2026 ಬೆಳಗ್ಗೆ 10.30 ಕ್ಕೆ
ದಿವ್ಯಸಾನಿಧ್ಯ:
ಪ.ಪೂ. ಜಗದ್ಗುರು ವೇದಾಂತಾಚಾರ್ಯ ಶ್ರೀಶ್ರೀಶ್ರೀ ಮಂಜುನಾಥಭಾರತಿ ಸ್ವಾಮೀಜಿ, ಶ್ರೀಗೋಸಾಯಿಮಹಾಸ೦ಸ್ಥಾನಮಠ, ಭವಾನಿದತ್ತಪೀಠ, ಗವಿಪುರಂ, ಬೆಂಗಳೂರು ಮತ್ತು ಡಾ. ಶ್ರೀ ಎಸ್. ರಾಮಪ್ಪನವರು ಅನುವಂಶಿಕ ಧರ್ಮದರ್ಶಿಗಳು, ಶ್ರೀಕ್ಷೇತ್ರ ಸಿಗಂದೂರು
ಸಿಗಂದೂರು ದೇವಸ್ಥಾನದ ಮಹತ್ವದ ಯೋಜನೆಗಳಲ್ಲೊಂದಾದ 'ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ' ಯೋಜನೆಯ 2026/27ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆ : ಎಸ್. ಮಧು ಬಂಗಾರಪ್ಪನವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಸಿಗಂದೂರು ದಸರಾಕ್ಕೆ ಚಾಲನೆ : ಗೋಪಾಲಕೃಷ್ಣ ಬೇಳೂರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಶಾಸಕರು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ
ವಿಶೇಷ ಆಹ್ವಾನಿತರು : ಡಾ. ಕಾಗೋಡು ತಿಮ್ಮಪ್ಪನವರು, ಮಾಜಿ ವಿಧಾನಸಭಾಧ್ಯಕ್ಷರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು : ವೀರೇಶ್‌ಕುಮಾರ್ (ಕೆ.ಎ.ಎಸ್),ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು, ಸಾಗರ
ಡಾ. ಬೆನಕಪ್ರಸಾದ್ ಎನ್.ಜೆ. ಐ.ಪಿ.ಎಸ್. ಸಹಾಯಕ ಪೋಲೀಸ್ ಅಧೀಕ್ಷಕರು, ಸಾಗರ ಉಪವಿಭಾಗ, ಸಾಗರ.
ಶ್ರೀಮತಿ ಡಾ. ಪ್ರತಿಭಾ ಆರ್. (ಕೆ ಎ ಎಸ್) ತಹಶೀಲ್ದಾರ್, ಸಾಗರ
ಕಲಗೋಡು ರತ್ನಾಕರ್ ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಶಿವಮೊಗ್ಗ ಇವರು ವೇದಿಕೆಯಲ್ಲಿ ಉಪಸ್ಥಿತರಿರುತಾರೆ.
ಈ ಶುಭ ದಿನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಹೋಮ ಹವನಗಳಿಗೂ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ ತಾಯಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಡಾ.ಶ್ರೀ ಎಸ್. ರಾಮಪ್ಪನವರು,ಅನುವಂಶಿಕ ಧರ್ಮದರ್ಶಿಗಳು,ಶ್ರೀಕ್ಷೇತ್ರ ಸಿಗಂದೂರು ಮತ್ತು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಆರ್. ರವಿಕುಮಾರ್ ಮತ್ತು ಆಡಳಿತ ಮಂಡಳಿಯ ಸರ್ವಸದಸ್ಯರು ಶ್ರೀ ಚೌಡಮ್ಮದೇವಿ ದೇವಾಲಯ ಶ್ರೀಕ್ಷೇತ್ರ ಸಿಗಂದೂರು ಪ್ರಕಟಣೆಯಲ್ಲಿ ಕೊರಿದ್ದಾರೆ.
ಭಕ್ತ ಮಹಾಶಾಯರೇ,
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೯೪೮ನೇ ಶ್ರೀ ಪರಾಭವ ಸಂವತ್ಸರದ ದಕ್ಷಿಣಾಯಣ ಶರದೃತು ಆಶ್ವಯುಜ ಮಾಸ ಶುಕ್ಲಪಕ್ಷ ದಿನಾಂಕ 11/10/2026ನೇ ಭಾನುವಾರದಿಂದ 21/10/2026ನೇ ಬುಧವಾರದವರೆಗೆ ಶರನ್ನವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಪ್ರತಿ ದಿನ ದೇವಿಗೆ ಪಂಚಾಮೃತ ಅಭಿಷೇಕ, ವಿವಿಧ ವಿಶೇಷ ದ್ರವ್ಯಗಳಿಂದ ಮಹಾಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಗುರುಗಳಆರಾಧನೆ, ಕುಂಕುಮಾರ್ಚನೆ, ದುರ್ಗಾಹೋಮ, ಚಂಡಿಕಾಹೋಮ, ನವಚಂಡಿಕಾ ಹೋಮ, ದುರ್ಗಾಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರತಿದಿನ ಕಾರ್ಯಕ್ರಮದ ವಿವರ
"ಅನುವಂಶಿಕ ಧರ್ಮದರ್ಶಿಗಳಾದ ಡಾ. ಶ್ರೀ ಎಸ್. ರಾಮಪ್ಪನವರ ದಿವ್ಯಸಾನಿಧ್ಯದಲ್ಲಿ"
11/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ತೈಲಾಭಿಷೇಕ, ವಿಶೇಷ ಅಲಂಕಾರ, ಶೈಲಪುತ್ರಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಶುದ್ಧಿ ಪುಣ್ಯಾಹ, ಗಣಹೋಮ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
12/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಕ್ಷಿರಾಭಿಷೇಕ, ವಿಶೇಷ ಅಲಂಕಾರ, ಬ್ರಹ್ಮಚಾರಿಣಿಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ,ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ,
13/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಮೊಸರಿನ ಅಭಿಷೇಕ, ವಿಶೇಷ ಅಲಂಕಾರ, ಚಂದ್ರಘಂಟ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
14/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಧೃತಾಭಿಷೇಕ, ವಿಶೇಷ ಅಲಂಕಾರ, ಕೂಷ್ಮಾಂಡಿನಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
15/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಮಧುವಿನಭಿಷೇಕ, ವಿಶೇಷ ಅಲಂಕಾರ, ಸ್ಕಂದಮಾತಾ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
16/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಸಕ್ಕರೆ ಅಭಿಷೇಕ, ವಿಶೇಷ ಅಲಂಕಾರ, ಕಾತ್ಯಾಯಿನಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
17/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಎಳನೀರಿನಭಿಷೇಕ, ವಿಶೇಷ ಅಲಂಕಾರ, ಕಾಲರಾತ್ರಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ,
18/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಎಳನೀರಿನಭಿಷೇಕ, ವಿಶೇಷ ಅಲಂಕಾರ, ಕಾಲರಾತ್ರಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
19/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಚಂದನಾಭಿಷೇಕ, ವಿಶೇಷ ಅಲಂಕಾರ, ಮಹಾಗೌರಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ನವಚಂಡಿಕಾ ಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ, ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
20/10/2026
ಮುಂಜಾನೆ 4.30 ರಿಂದ ದೇವಿಗೆ ಪಂಚಾಮೃತಾಭಿಷೇಕ, ಹರಿದ್ರಾ ಮತ್ತು ಕುಂಕುಮಾಭಿಷೇಕ, ವಿಶೇಷ ಅಲಂಕಾರ, ಸಿದ್ದಿದಾತ್ರಿ ಆರಾಧನೆ, ಮಹಾಪೂಜೆ, ಗುರುಗಳ ಆರಾಧನೆ, ಚಂಡಿಕಾಹೋಮ, ಕುಂಕುಮಾರ್ಚನೆ, ಮಧ್ಯಾನ್ಹ 12.30ಕ್ಕೆ ನೈವೇದ್ಯ ಮಹಾಮಂಗಳಾರತಿ ಸಂಜೆ 7 ಕ್ಕೆ ದುರ್ಗಾಪೂಜೆ ರಾತ್ರಿ 7.30ಕ್ಕೆ ದೀಪೋತ್ಸವ, 8 ಗಂಟೆಗೆ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ.
ಶ್ರೀಕ್ಷೇತ್ರ ಸಿಗಂದೂರಿನ ಚಿತ್ತ ರಂಗಶಿಕ್ಷಣದತ್ತ ಯೋಜನೆಯಡಿ ರಂಗನವರಾತ್ರಿಯ ನಾಟಕೋತ್ಸವ ಪ್ರದರ್ಶನದ ವಿವರ
ಸಮಯ:ಸಂಜೆ 7 ರಿಂದ 8
ಪುಣ್ಯಕೋಟಿ
ಮಡೇನೂರು ರಿಯಾಲಿಟಿ
ಕನ್ನಾ ಪ್ಲಾನ್ ಕದ್ದಿದ್ದು
ಈ ಕಥೆಗೊಂದು ಹೆಸರು ಕೊಡಿ
ಪರಿಹಾರ
ಬಿದಿರಿನ ಚದುರೆ
ಹಿನ್ನೀರ ಅಜ್ಜಿಯ ಕಣ್ಣೀರ ಕಥೆ
ಚನ್ನಭೈರಾದೇವಿ
ಮಹಿಮೆಯ ಭೂತರಾಯ
ಈ ನಾಟಕಗಳು ಸರಕಾರಿ ಶಾಲೆಯ ಮಕ್ಕಳಿಂದ ನಡೆಯಲಿವೆ.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ







Comments
Post a Comment