ನೀಟ್ ಅಕ್ರಮ, ಆತ್ಮಾಹುತಿ ಮಾಡಿಕೊಂಡ ವಿದ್ಯಾರ್ಥಿ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾ ರಕ್ಕೆ ಸಾಗರದಲ್ಲಿ ಹಿರಿಯ ನಾಗರಿಕರ ಆಗ್ರಹ

ನೀಟ್ ಅಕ್ರಮ, ಆತ್ಮಾಹುತಿ ಮಾಡಿಕೊಂಡ ವಿದ್ಯಾರ್ಥಿ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾ ರಕ್ಕೆ ಸಾಗರದಲ್ಲಿ ಹಿರಿಯ ನಾಗರಿಕರ ಆಗ್ರಹ

ಸಾಗರ: ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳಿಂದ ಮನನೊಂದು ಪ್ರಾಣ ಕಳೆದುಕೊಂಡ ದೇಶದ 21 ಅಭ್ಯರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಾಗರ ತಾಲೂಕಿನ ಹಿರಿಯ ನಾಗರಿಕರು ಮತ್ತು ಸಮಾನ ಮನಸ್ಕರ ಬಳಗ ಸೋಮವಾರ ಸಾಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಮೇಣದಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿತು. ಬಳಿಕ ಘನತೆವೆತ್ತ ಭಾರತದ ರಾಷ್ಟ್ರಪತಿಗಳಿಗೆ ಉಪ ವಿಭಾಗಾಧಿಕಾರಿಗಳ ಮೂಲಕ ಮನವಿ ಪತ್ರ ರವಾನಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ನಾಗರಿಕರು, ಕಷ್ಟಪಟ್ಟು ಓದಿದ ಅರ್ಹ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮಗಳಿಂದ ತೀವ್ರ ಅನ್ಯಾಯವಾಗಿದೆ. ಈ ಅಕ್ರಮಗಳಿಂದ ಮನನೊಂದು ದೇಶಾದ್ಯಂತ 21 ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರಂತದ ಸಂಗತಿ. ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ಅಭ್ಯರ್ಥಿಯ ಕುಟುಂಬಕ್ಕೂ ಕೇಂದ್ರ ಸರ್ಕಾರ ತಕ್ಷಣವೇ ತಲಾ ₹1 ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು.

ಇದಲ್ಲದೆ, ಭವಿಷ್ಯದಲ್ಲಿ ಇಂತಹ ಪರೀಕ್ಷಾ ಅಕ್ರಮಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳು ಹಾಗೂ ಅವರ ಬೆಂಬಲಿತರ ಮೇಲೆ ಹಾಕಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ದೇಶದ ಭವಿಷ್ಯದ ತೂಗು ದೀಪಗಳಾದ ಯುವಜನತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ನಿಯೋಗವು ಆಗ್ರಹಿಸಿತು.

ಈ ಸಂದರ್ಭದಲ್ಲಿ ಉಮೇಶ್ ಹಿರೇನೆಲ್ಲೂರು, ಸೋಮರಾಜ್, ಸತ್ಯನಾರಾಯಣ, ಡಾ. ಕೆ. ಪ್ರಭಾಕರರಾವ್, ಅಖಿಲೇಶ್ ಚಿಪ್ಪಳಿ, ಎಂ.ಬಿ. ಮಂಜಪ್ಪ, ಹಾಲಪ್ಪ ಮೆಳವರಿಗೆ, ರಾಮಪ್ಪ, ದಿನೇಶ್ ಶಿರವಾಳ, ಎಂ.ಸಿ.ಪರಶುರಾಮಪ್ಪ, ಪ್ರತಿಭಾ ಎಂ.ವಿ., ಕರುಣಾಕರ,ಇನ್ನಿತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ