ಅಕ್ರಮವಾಗಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಮಾಡುತ್ತಿದ್ದವನ ಬಂಧಿಸಿ 10000/- ರೂ ಮೌಲ್ಯದ ಗಾಂಜಾ ಹಾಗೂ 25000/- ರೂ ಮೌಲ್ಯದ ಎಂ.ಡಿ.ಎಂ ವಶ

ಸಾಗರ ಪೇಟೆಯ ದಾನ ಪ್ಯಾಲೆಸ್ ಹತ್ತಿರ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋಡನ್ ನಲ್ಲಿ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಮಾಡುತ್ತಿದ್ದವನ ಬಂಧಿಸಿ 10000/- ರೂ ಮೌಲ್ಯದ ಗಾಂಜಾ ಹಾಗೂ 25000/- ರೂ ಮೌಲ್ಯದ ಎಂ.ಡಿ.ಎಂ ವಶ


ದಿನಾಂಕ:08/07/2026 ರಂದು ಸಾಗರ ಟೌನ್ ವ್ಯಾಪ್ತಿಯ ದಾನ ಪ್ಯಾಲೇಸ್ ಎದುರು, ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋಡನ್ ನಲ್ಲಿ ಅಕ್ರಮವಾಗಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶ್ರೀ ನಿಖಿಲ್ ಬಿ. ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಶ್ರೀ ಕಾರಿಯಪ್ಪ ಎ ಜಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮಾರ್ಗದರ್ಶನದಲ್ಲಿ ಶ್ರೀ ಬೆನಕ ಪ್ರಸಾದ್, ಐ.ಪಿ.ಎಸ್ ಮಾನ್ಯ ಸಹಾಕ ಪೊಲೀಸ್ ಅಧೀಕ್ಷಕರು ಸಾಗರ ಉಪವಿಭಾಗ ಸಾಗರ ರವರ ನೇತೃತ್ವದಲ್ಲಿ, ಶ್ರೀ ಪುಲ್ಲಯ್ಯ ರಾಥೋಡ್ ಪೊಲೀಸ್ ನಿರೀಕ್ಷಕರು ಸಾಗರ ಪೇಟೆ ಠಾಣೆ ಮತ್ತು ಪಿಎಸ್‌ಐ ಶ್ರೀ ಶಾಂತರಾಜ್ ಹೆಚ್.ಜಿ ಮತ್ತು ಸಿಬ್ಬಂದಿಗಳಾದ ಪಿ.ಸಿ 1361 ಶ್ರೀ ರವಿಕುಮಾರ, ಪಿ.ಸಿ 1472 ಶ್ರೀ ನರೇಂದ್ರ, ಪಿಸಿ 1660 ಕೃಷ್ಣಮೂರ್ತಿ, ಹೆಚ್.ಸಿ 418 ಶ್ರೀ ಮೋಹನ್, ಪಿ.ಸಿ 1128 ಶ್ರೀ ಚಿದಾನಂದ, ಪಿ.ಸಿ 1603 ಲೋಹಿತ್ ರವರುಗಳನ್ನು ಒಳಗೊಂಡ ತನಿಖಾ ತಂಡವು ದಾಳಿ ನಡೆಸಿದೆ.

ದಾಳಿಯ ಸಂದರ್ಭದಲ್ಲಿ ಆರೋಪಿತನಾದ ಅಕ್ಟರ್ ಬೇಗ್ ತಂದೆ ಜಾಪರ್ ಬೇಗ್, 40 ವರ್ಷ, ಮುಸ್ಲಿಂ ಜನಾಂಗ,ಹಣ್ಣಿನ ವ್ಯಾಪಾರ ಕೆಲಸ ವಾಸ ಕೃಷ್ಣ ಗ್ಯಾರೇಜ್ ರಸ್ತೆ, ಸಾಗರ ಟೌನ್ ಈತನನ್ನು ವಶಕ್ಕೆ ಪಡೆದು, ಸದರಿ ಆರೋಪಿತನಿಂದ 1) 156 ಗ್ರಾಂ ತೂಕದ ಒಣ ಗಾಂಜಾ ಅಂದಾಜು ಮೌಲ್ಯ 10000/- ರೂ 2) 10ಗ್ರಾಂ ತೂಕದ ಎಂ.ಡಿ.ಎಂ ಅಂದಾಜು ಮೌಲ್ಯ 25000/- ರೂ ನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ