ಆದಿಚುಂಚನಗಿರಿ ಮಠದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆವಂಚನೆ ಮಾಡಿದ್ದ ಪ್ರಕರಣದಲ್ಲಿ 11 ಮಂದಿ ಬಂಧನ

ಆದಿಚುಂಚನಗಿರಿ ಮಠದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆವಂಚನೆ ಮಾಡಿದ್ದ ಪ್ರಕರಣದಲ್ಲಿ 11 ಮಂದಿ ಬಂಧನ

ಬೆಂಗಳೂರು: ಆದಿಚುಂಚನಗಿರಿ ಮಠದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆವಂಚನೆ ಮಾಡಿದ್ದ ಪ್ರಕರಣದಲ್ಲಿ 11 ಮಂದಿ ಬಂಧನವಂಚನೆ ಪ್ರಕರಣದಲ್ಲಿ 11 ಜನರ ಪೈಕಿ 6 ಜನ ಸರ್ಕಾರಿ ಅಧಿಕಾರಿಗಳ ಬಂಧನ ಮಾಡಲಾಗದೆ.

ರಾಜಧಾನಿಯಲ್ಲಿ ಸಿನಿಮೀಯ ಶೈಲಿಯನ್ನು ಮೀರಿಸುವಂತಹ ಬೃಹತ್ ಭೂಹಗರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು ೧೨೦ ಕೋಟಿ ರೂಪಾಯಿ ಮೌಲ್ಯದ ೬ ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ.

ಹಿನ್ನೆಲೆ: 30 ವರ್ಷಗಳ ಹಿಂದಿನ ಭಕ್ತರ ಕಾಣಿಕೆಸುಮಾರು ೩೦ ವರ್ಷಗಳ ಹಿಂದೆ ಭಕ್ತಾದಿಗಳು ಆದಿಚುಂಚನಗಿರಿ ಮಠಕ್ಕೆ ಕಾಣಿಕೆ ರೂಪದಲ್ಲಿ ಒಟ್ಟು ೪೫ ಎಕರೆ ಜಮೀನನ್ನು ನೀಡಿದ್ದರು. ಈ ಪೈಕಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂಬರ್ ೪೩ ರಲ್ಲಿರುವ ೬ ಎಕರೆ ಜಮೀನಿನ ಮೇಲೆ ಕಣ್ಣಿಟ್ಟ ಭೂಮಾಫಿಯಾ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿತ್ತು.

ಬಂಧಿತ ಆರೋಪಿಗಳ ವಿವರಈ ವಂಚನೆ ಪ್ರಕರಣದಲ್ಲಿ ಕೇವಲ ಖಾಸಗಿ ವ್ಯಕ್ತಿಗಳಷ್ಟೇ ಅಲ್ಲದೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳೇ ಭಾಗಿಯಾಗಿರುವುದು ತನಿಖೆಯಿಂದ ಬಯಲಾಗಿದೆ.ಬಂಧಿತ ಸರ್ಕಾರಿ ಅಧಿಕಾರಿಗಳು (೬ ಜನ):ಶಿವಪ್ರಸಾದ್ (ಬೇಗೂರು ವಿಲೇಜ್ ಅಕೌಂಟೆಂಟ್)ಕಿರಣ್ (ರೆವಿನ್ಯೂ ಇನ್ಸ್ಪೆಕ್ಟರ್)ದೀಪಕ್ (ಡೆಪ್ಯೂಟಿ ತಹಶೀಲ್ದಾರ್)ಸತೀಶ್ ಕುಮಾರ್ (ಕೆಂಗೇರಿ ವಿಲೇಜ್ ಅಕೌಂಟೆಂಟ್)ಅರುಣ್ ಕುಮಾರ್ (ರೆವಿನ್ಯೂ ಇನ್ಸ್ಪೆಕ್ಟರ್)ಮತ್ತೊಬ್ಬ ಡೆಪ್ಯೂಟಿ ತಹಶೀಲ್ದಾರ್.ಬಂಧಿತ ಖಾಸಗಿ ವ್ಯಕ್ತಿಗಳು (5 ಜನ):

ಬಂಧಿತ ಖಾಸಗಿ ವ್ಯಕ್ತಿಗಳು (5 ಜನ):ಆರೋಗ್ಯಸಾಮಿ, ಫ್ರಾನ್ಸಿಸ್ ಜೋಸ್ವನ, ಶ್ರೀನಿವಾಸ, ನರೇಂದ್ರ ಸೇರಿದಂತೆ ಐವರು ವಂಚಕರು.೩. ಮಾಸ್ಟರ್ ಮೈಂಡ್ ನರೇಶ್ ಗೌಡನಿಗಾಗಿ ತಲಾಶ್ಈ ಇಡೀ ಹಗರಣದ ಸೂತ್ರಧಾರ ನೆಲಮಂಗಲ ಮೂಲದ ನರೇಶ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿರುವ ಈತನ ಬಂಧನಕ್ಕಾಗಿ ಕೆಂಗೇರಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.೪. ವಂಚನೆಗೆ ಖದೀಮರು ಬಳಸಿದ ರೋಚಕ ಹಾದಿಸತ್ತವರ ಹೆಸರಿನಲ್ಲಿ ಕೃತ್ಯ: ಮಠದ ಆಸ್ತಿಯ ಮೂಲ ಮಾಲೀಕರಾಗಿದ್ದ (ಸುಮಾರು ವರ್ಷಗಳ ಹಿಂದೆ ಮೃತಪಟ್ಟಿದ್ದ) ವ್ಯಕ್ತಿಗಳ ಹೆಸರನ್ನೇ ಬಳಸಿಕೊಂಡು ಆರೋಪಿಗಳು ನಕಲಿ ಮ್ಯುಟೇಷನ್ ಮತ್ತು ಪಹಣಿ (RTC) ದಾಖಲೆಗಳನ್ನು ಸೃಷ್ಟಿಸಿದ್ದರು.ಅಧಿಕಾರಿಗಳ ಅಸಮ್ಮತಿ ಮರೆಮಾಚುವಿಕೆ: ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಂಪ್ಯೂಟರ್ ಆಪರೇಟರ್‌ಗಳ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು, ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾತ್ರೋರಾತ್ರಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದರು.

ಬಂಧಿತರು ಆರೋಗ್ಯಸಾಮಿ, ಫ್ರಾನ್ಸಿಸ್ ಜೋಸ್ವನ , ಶ್ರೀನಿವಾಸ ನರೇಂದ್ರ ಬಂಧಿತ ಖಾಸಗಿ ವ್ಯಕ್ತಿಗಳುಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್, ಡೆಪ್ಯೂಟಿ ತಹಶೀಲ್ದಾರ್ ದೀಪಕ್ ,ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್ , ರೆವಿನ್ಯೂ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ಬಂಧಿತ ಸರ್ಕಾರಿ ಅಧಿಕಾರಿಗಳು ಕೆಂಗೇರಿ ಪೊಲೀಸರಿಂದ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನ ಒಟ್ಟು 120 ಕೋಟಿ ಮೌಲ್ಯದ 6 ಎಕರೆ ಜಮೀನಿನ್ನ ಕಬಳಿಸಿದ್ದ ಆರೋಪಿಗಳು.

ಸುಮಾರು 30 ವರ್ಷದ ಹಿಂದೆ ಆದಿಚುಂಚನಗಿರಿ ಮಠಕ್ಕೆ ಭಕ್ತಾದಿ ಗಳಿಂದ 45 ಎಕರೆ ಜಮೀನು ಕಾಣಿಕೆ ರೂಪದಲ್ಲಿ ನೀಡಲಾಗಿತ್ತು45 ಎಕರೆ ಪೈಕಿ 6 ಎಕರೆ ನಕಲಿ ದಾಖಲಾತಿ ಸೃಷ್ಟಿ..ಕೆಂಗೇರಿ ಹೋಬಳಿ ಕಂಬಳಿ ಪುರ ಗ್ರಾಮದ ಸರ್ವೇ 43 ರ ನಕಲಿ ದಾಖಲೆ ಸೃಷ್ಟಿ ಆರೋಪ..ಪ್ರಕರಣದ ಮತ್ತೊಬ್ಬ ಮಾಸ್ಟರ್ ಮೈಂಡ್ ನೆಲಮಂಗಲ ಮೂಲದ ನರೇಶ್ ಗೌಡ ಸದ್ಯ ನಾಪತ್ತೆಯಾಗಿರುವ ನರೇಶ್ ಗೌಡಗಾಗಿ ಪೊಲೀಸರ ಹುಡುಕಾಟ..

ಹಾಗಾದ್ರೆ ಆರೋಪಿಗಳು ವಂಚನೆಗೆ ಹುಡುಕಿದ ದಾರಿ ಏನ್ ಗೊತ್ತಾ..? 

ಪೊಲೀಸರು ಆರೋಪಿಗಳ ಕೃತ್ಯ ಪತ್ತೆ ಮಾಡಿದ್ದೆ ದೊಡ್ಡ ರೋಚಕ ವಿಚಾರ*ಆರೋಪಿಗಳ ವಂಚನೆ ಬಗ್ಗೆ ತಿಳಿಯೋದೇ ಹೆಚ್ಚು ಕಾಲ ತೆಗೆದುಕೊಂಡಿತ್ತುಪ್ರಕರಣದ ಮಾಸ್ಟರ್ ಮೈಂಡ್ ನರೇಶ್ ಗೌಡಮಠದ ಜಾಗ ಹೊಡೆಯಲು ಪ್ಲಾನ್ ಮಾಡಿದ್ದ ನರೇಶ್ ಗೌಡಈ ವಿಚಾರ ಬ್ರೋಕರ್ ಆರೋಗ್ಯ ಸ್ವಾಮಿಗೆ ತಿಳಿಸಿದ್ದ ನರೇಶ್ ಗೌಡಇಬ್ಬರು ಸೇರಿ ಜಮೀನಿನ ಮೂಲ ಮಾಲೀಕರ ಹೆಸರಿನ ಮತ್ತೊಬ್ಬ ವ್ಯಕ್ತಿ ಪತ್ತೆ ಮಾಡಿದ್ದರುಆದ್ರೆ ಇವರಿಗೆ ಜಮೀನು ವಂಚನೆ ಮಾಡಬೇಕಾದರೆ ಸತ್ತಿರುವ ವ್ಯಕ್ತಿ ಬೇಕಾಗಿರುತ್ತದೆಸ್ಮಶಾನದಲ್ಲಿ ಹೋಗಿ ಸತ್ತುಹೋಗಿದ್ದ ಮೂಲ ಮಾಲೀಕ ಆರೋಗ್ಯ ಸ್ವಾಮಿಯ ಹೆಸರಿನ ಮತ್ತೊಬ್ಬನ ಸಮಾಧಿ ಹುಡುಕುತ್ತಾರೆಸಮಾಧಿ ಮೇಲಿನ ಹೆಸರು ಹುಡುಕಿ ಅವರ ಮಕ್ಕಳನ್ನ ಕಾಂಟ್ಯಾಕ್ಟ್ ಮಾಡಿದ್ರುಅಲ್ಲೇ ಮತ್ತೊಬ್ಬ ಆರೋಪಿ ಫ್ರಾನ್ಸಿಸ್ ಸಿಕ್ಕಿದ್ದಆತನ ತಂದೆಯ ಹೆಸರು ಹಾಗೂ ಮೂಲ ಮಾಲೀಕರ ಹೆಸರು ವಯಸ್ಸು ಮ್ಯಾಚ್ ಆಗಿತ್ತುಫ್ರಾನ್ಸಿಸ್ ಬೇಗೂರು ಪೊಲೀಸ್ ಠಾಣೆ ರೌಡಿ ಶೀಟರ್ಫ್ರಾನ್ಸಿಸ್ ಹಾಗೂ ಜೋಸ್ವಾನ್ ಇಬ್ಬರು ಅಣ್ಣ ತಂಗಿ ಎಂದು ವಂಶ ವೃಕ್ಷ ಸೃಷ್ಟಿ ಮಾಡಿಸಿದ್ದರುಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿಕೊಟ್ಟಿದ್ದ ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್, ಡೆಪ್ಯೂಟಿ ತಹಶೀಲ್ದಾರ್ ದೀಪಕ್ಇದನ್ನ ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್ , ರೆವಿನ್ಯೂ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್ ನಕಲಿ ದಾಖಲೆ ಪಡೆದು ಪೌತಿ ಖಾತೆ ಮಾಡಿಕೊಟ್ಟಿದ್ದರುನಕಲಿ ದಾಖಲಾತಿ ಅಂತ ಗೊತ್ತಿದ್ದರು ಪೌತಿ ಖಾತೆ ಮಾಡಿಕೊಟ್ಟಿದ್ದರುಆರೋಪಿಗಳು ಜಮೀನು ತಮ್ಮ ಹೆಸರಿಗೆ ಮಾಡಿಕೊಂಡು ಬೇರೊಬ್ಬರಿ ಗೆ ಮಾರಾಟ ಕೂಡ ಮಾಡಿಬಿಟ್ಟಿದ್ದರುನಂತರ ವಿಚಾರ ತಿಳಿದು ಮಠದ ವತಿಯಿಂದ ದೂರು ನೀಡಲಾಗಿತ್ತುಪ್ರಕರಣ ದಾಖಲಿಸಿ ಪ್ರಕರಣ ಬಯಲಿಗೆ ಎಳೆದ ಕೆಂಗೇರಿ ಪೊಲೀಸರು..ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತುನಂತರ ಪ್ರಕರಣ ತನಿಖಾಧಿಕಾರಿ ಯಾಗಿ ಕೆಂಗೇರಿ ಇನ್ಸ್ಪೆಕ್ಟರ್ ಜಗದೀಶ್ ನೇಮಿಸಲಾಗಿತ್ತುಪ್ರಕರಣ ತನಿಕೆ ನಡೆಸಿ ಆರೋಪಿಗಳ ಬಂಧನ ಮಾಡಿರುವ ಕೆಂಗೇರಿ ಇನ್ಸ್ಪೆಕ್ಟರ್ ಜಗದೀಶ್

ಪೊಲೀಸರ ರೋಚಕ ಕಾರ್ಯಾಚರಣೆಈ ವಂಚನೆಯ ಜಾಲವನ್ನು ಪತ್ತೆಹಚ್ಚುವುದು ಪೊಲೀಸರಿಗೂ ದೊಡ್ಡ ಸವಾಲಾಗಿತ್ತು. ಆರೋಪಿಗಳು ತಂತ್ರಜ್ಞಾನ ಹಾಗೂ ಇಲಾಖೆಯ ಲೋಪದೋಷಗಳನ್ನು ಬಳಸಿಕೊಂಡು ಇತಿಹಾಸದ ದಾಖಲೆಗಳನ್ನೇ ತಿದ್ದಿದ್ದರಿಂದ, ಈ ಕೃತ್ಯವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಕಷ್ಟು ಸಮಯ ಹಿಡಿಯಿತು. ದಾಖಲೆಗಳ ಮೂಲವನ್ನು ತಡಕಾಡಿದ ಕೆಂಗೇರಿ ಪೊಲೀಸರು, ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಅಧಿಕಾರಿಗಳ ಸಹಿತ ಇಡೀ ಗ್ಯಾಂಗನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ