ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಪ್.ಐ.ಆರ್ ನ: 175/2025 ದಿನಾಂಕ; 23-09-2025 ರ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲು ವಿಳಂಬ ನೀತಿಗೆ ಸಾಗರದ ಸವಿತಾ ಸಮಾಜದಿಂದ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ
*ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಪ್.ಐ.ಆರ್ ನ: 175/2025 ದಿನಾಂಕ; 23-09-2025 ರ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲು ವಿಳಂಬ ನೀತಿಗೆ ಸಾಗರದ ಸವಿತಾ ಸಮಾಜದಿಂದ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ
ಸಾಗರದ ಚಿಪ್ಳಿಯ ಆದಿಶಕ್ತಿ ನಗರದಲ್ಲಿ ಕಳೆದ 11ತಿಂಗಳ ಹಿಂದೆ ನಡೆದ ಸಿಲಿಂಡರ್ ಸ್ಪೋಟದ ವಿಚಾರಕ್ಕೆ ಸಂಬಂಧಿಸಿದಂತೆ ದಿನಾಂಕ: 16-08-2025 ರಂದು ಮಧ್ಯಾಹ್ನ 2-40 ರ ಸಮಯದಲ್ಲಿ ನಮ್ಮ ಮನೆಯ ಐ.ಒ.ಸಿ. ಸಿಲೆಂಡರ್ ಲೀಕ್ ಆಗಿ ಇದನ್ನು ಹೊರಗಡೆ ತರಲು ನನ್ನ ಗಂಡ ವೆಂಕಟೇಶ ಭಂಡಾರಿ ಪ್ರಯತ್ನಿಸಿದ್ದು, ಆಗ ಬೆಂಕಿ ಹತ್ತಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಪಕ್ಕದ ಮನೆಯ ಕಿರಣ್ ಕುಮಾರ್ ಮತ್ತು ಧರಣೇಶ್ ಇವರಿಗೂ ಕೂಡ ಬೆಂಕಿ ತಗಲಿ ಸುಟ್ಟ ಗಾಯಗಳಾಗಿರುತ್ತದೆ. ಈ ಸಂದರ್ಭದಲ್ಲಿ ನನ್ನ ಗಂಡನಿಗೆ ತೀವ್ರ ಸುಟ್ಟ ಗಾಯವಾಗಿದ್ದು ಕೂಡಲೇ ಸಾಗರದ ಸರ್ಕಾರಿ ಆಸ್ಪತ್ರೆ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ಮಣಿಪಾಲ ಕೆ.ಎಮ್.ಸಿ. ಗೆ ದಾಖಲು ಮಾಡಲಾಗಿರುತ್ತದೆ. ಮಣಿಪಾಲದ ಕೆ.ಎಮ್.ಸಿ.ಯಲ್ಲಿ 1 ತಿಂಗಳ ಕಾಲ ಐ.ಸಿ.ಯು. ನಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ನನ್ನ ಗಂಡ ದಿನಾಂಕ: 23-09-2025 ರಂದು ಬೆಳಿಗಿನ ಜಾವ 2-00 ಗಂಟೆ ಸುಮಾರಿಗೆ ಮರಣ ಹೊಂದಿರುತ್ತಾರೆ. ಈ ಮರಣ ಹೊಂದಿದ ನಂತರ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆ ಸಾಗರ ಇಲ್ಲಿ ಬಿ.ಎನ್.ಎಸ್. ಸೆಕ್ಷನ್ 106 ರ ಅಡಿಯಲ್ಲಿ ಇಂಡಿಯನ್ ಗ್ಯಾಸ್ ಕಂಪನಿ ಮಂಗಳೂರು ಮತ್ತು ಇಂಧನ ಗ್ಯಾಸ್ ಏಜೆನ್ಸಿ ಸಾಗರ ಇವರ ವಿರುದ್ಧ ಎಫ್.ಐ.ಆರ್ ದಾಖಲಾಗಿರುತ್ತದೆ.
ಈ ಎಫ್.ಐ.ಆರ್ ದಾಖಲಾದ ನಂತರ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆದಿರುತ್ತದೆ. ಈ ಕೇಸಿನ ತನಿಖಾಧಿಕಾರಿಯು ಈಗ "ಬಿ" ವರಧಿಯನ್ನು ಸಲ್ಲಿಸುವುದಾಗಿ, ಸಹಕರಿಸಬೇಕಾಗಿಯೂ ಕೇಳುತ್ತಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಸಿಲೆಂಡರ್ ಬೆಂಕಿ ತಗುಲಿದ ದಿನಾಂಕ: 16-08-2025 ರಂದು ಕೂಡಲೇ ಐ.ಒ.ಸಿ. ಸಾಗರ ಇಂಧನ ಏಜೆನ್ಸಿ ಯವರು ಈ ಸಿಲೇಂಡರ್‌ನ್ನು ಸ್ಥಳದಿಂದ ತಮ್ಮ ಗೋಡೌನ್‌ನಿಗೆ ತೆಗೆದುಕೊಂಡು ಹೋಗಿರುತ್ತಾರೆ. ಆದರೆ ಈಗ ತನಿಖಾಧಿಕಾರಿಯು ತಾಂತ್ರಿಕ ವರಧಿಯು ಗ್ಯಾಸ್ ಏಜೆನ್ಸಿಯ ನಿರ್ಲಕ್ಷದಿಂದ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಸಿಲೆಂಡರ್‌ನ್ನು ಬದಲಾಯಿಸಿರುವ ಅಥವಾ ಸರಿಪಡಿಸಿರುವ ಸಾಧ್ಯತೆ ಇರುತ್ತದೆ. ಅಲ್ಲದೆ ಈ ಸಿಲೆಂಡರ್‌ನ್ನು ಖುದ್ದಾಗಿ ತಾಂತ್ರಿಕ ಏಜೆನ್ಸಿಸ್‌ರವರು ಪರಿಶೀಲಿಸದೇ ನೀಡಿರುವ ವರದಿಯಾಗಿದ್ದು, ಈ ಪ್ರಕರಣದಲ್ಲಿ 2 ಜನ ಗಾಯಾಳುಗಳು ಪ್ರತ್ಯಕ್ಷ ಸಾಕ್ಷಿದಾರರಾಗಿರುತ್ತಾರೆ. ಇದು ಐ.ಓ.ಸಿ. ರವರು ತಮ್ಮ ಸಿಲೆಂಡರ್‌ನ ವಾಲ್ ಜಾಗದಲ್ಲಿ ಅಳವಡಿಸಿರುವ ನೆಕ್ ನಿಷ್ಕ್ರಿಯವಾಗಿದ್ದು, ಇದನ್ನು ಸರಿಯಾಗಿ ಪರಿಶೀಲಿಸದೇ ನನ್ನ ಮನೆಗೆ ಸಿಲೆಂಡರ್‌ನ್ನು ಏಜೆನ್ಸಿಸ್ ರವರು ನೀಡಿದ ಪರಿಣಾಮ ಈ ಅಪಘಾತವಾಗಿ ನನ್ನ ಗಂಡ ಮರಣ ಹೊಂದಿರುತ್ತಾರೆ. ಇದರಿಂದ ಇಡೀ ನಮ್ಮ ಕುಟುಂಬ ದುಃಖದಿಂದ ತುಂಬಿದ್ದು, ಸದರಿ ಐ.ಓ.ಸಿ. ಕಂಪನಿ ಮತ್ತು ಏಜೆನ್ಸಿಸ್‌ರವರ ಮೇಲೆ ಕಾನೂನು ಕ್ರಮ ಮತ್ತು ಪರಿಹಾರ ಅವಶ್ಯಕವಾಗಿರುತ್ತದೆ.
ಆದ್ದರಿಂದ ತಾವುಗಳು ಈ ಪ್ರಕರಣದಲ್ಲಿ ಖುದ್ದು ಆಸಕ್ತಿವಹಿಸಿ ಸಾಗರ ಗ್ರಾಮಾಂತರ .. 2: 175/2025 ; 23-09-2025 ថ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಐ.ಓ.ಸಿ. ಕಂಪನಿ ಮ್ಯಾನೇಜರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು, ವಿತಕರರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಳಂಬ ನೀತಿ ಅನ್ಯಾಯಕರವಾಗಿದೆ ಎಂದು ಆಗ್ರಹಿಸಿ ಸಾಗರ ತಾಲ್ಲೂಕು ಸವಿತಾ ಸಮಾಜದಿಂದ ಸಾಗರ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಭಂಡಾರಿ, ಪ್ರದೀಪ ಭಂಡಾರಿ, ಶ್ರೀಮತಿವೆಂಕಟೇಶ್ ಆದ ಅನ್ಯಾಯದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ಮಲ್ ಸೇನ್, ಹರೀಶ, ಪ್ರಕಾಶ, ಶ್ರೀಮತಿ, ನಿರ್ಮಲ, ಆಶಾ ,ಅನಿತಾ, ಸಂಧ್ಯಾ, ಜಾನಕಿ, ತ್ರಿಮೂರ್ತಿ, ಜಯಣ್ಣ, ಗಣೇಶ, ಪ್ರಶಾಂತ, ದಿನಕರ, ಇನ್ನಿತರರು ಹಾಜರಿದ್ದರು.
ಮೀನಿನಹೆಜ್ಜೆ ನ್ಯೂಸ್, ಸಾಗರ
ಸುದ್ದಿ ಹಾಗೂ ಜಾಹೀರಾತು ನೀಡಲು ; 7204641701


Comments
Post a Comment