ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಶೇ. 86ರಷ್ಟು SIR ಪ್ರಕ್ರಿಯೆ ಪೂರ್ಣ – ಪೌರಾಯುಕ್ತ ಎಚ್.ಕೆ. ನಾಗಪ್ಪ

ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಶೇ. 86ರಷ್ಟು SIR ಪ್ರಕ್ರಿಯೆ ಪೂರ್ಣ – ಪೌರಾಯುಕ್ತ ಎಚ್.ಕೆ. ನಾಗಪ್ಪ


ಶೇ.100ರಷ್ಟು ಯಶಸ್ವಿಯಾಗಿ SIR ಪೂರೈಸಿದ BLA ಜ್ಯೋತಿಯವರಿಗೆ ನಗರಸಭೆಯಿಂದ ಸನ್ಮಾನ

ಸಾಗರ: ನಗರಸಭೆ ವ್ಯಾಪ್ತಿಯಲ್ಲಿ ಶೇ. 86ರಷ್ಟು SIR (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 50,396 ಮತದಾರರ ಪೈಕಿ ಇನ್ನು ಸ್ಪಂದಿಸದ 7,639 ಮತದಾರರನ್ನು ಸಂಪರ್ಕಿಸಿ ಪಟ್ಟಿಗೆ ಸೇರಿಸಲು BLA ತಂಡಗಳು ನಿರಂತರ ಶ್ರಮಿಸುತ್ತಿವೆ ಎಂದು ಪೌರಾಯುಕ್ತ ಎಚ್.ಕೆ. ನಾಗಪ್ಪ ತಿಳಿಸಿದರು. ಇಲ್ಲಿನ ನಗರಸಭೆಯ ಪುರಭವನದಲ್ಲಿ ಇಂದು ಮಂಗಳವಾರ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ವೇಳೆ ಶೇ.100ರಷ್ಟು ಯಶಸ್ವಿಯಾಗಿ ಎಸ್.ಐ.ಆರ್. ಪೂರೈಸಿದ BLA ಜ್ಯೋತಿ ಅವರನ್ನು ಸನ್ಮಾನಿಸಲಾಯಿತಲ್ಲದೆ, ಉತ್ತಮವಾಗಿ ಕಾರ್ಯನಿರ್ವ ಹಿಸಿದ ಮತಗಟ್ಟೆ ಅಧಿಕಾರಿ ನಿಕ್ಸನ್ ಗೋನ್ಸಾಲ್ವಿಸ್ ಅವರನ್ನು ಕೂಡ ಅಭಿನಂದಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪೌರಾಯುಕ್ತರು, "ಈಗಾಗಲೇ ಶೇ. 10ರಷ್ಟು ಜನರು SIR ಫಾರಂ ಪಡೆದಿದ್ದು, ಅದನ್ನು ತಕ್ಷಣ BLA ಅಥವಾ BLO ಗಳಿಗೆ ಹಿಂದಿರುಗಿಸಬೇಕು.ಹೆಸರು ಕೈಬಿಡಲಾಗುವುದಿಲ್ಲ ಎಂಬ ಉದಾಹಸೀನತೆ ಬೇಡ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಗಳೂ ಎಚ್ಚರಿಸಿದ್ದಾರೆ.ಹಕ್ಕುಗಳ ಬಗ್ಗೆ ಮಾತನಾಡುವ ಮತದಾರರು ಕರ್ತವ್ಯವನ್ನೂ ಮರೆಯಬಾರದು," ಎಂದರು.

ಬಿಎಲ್‌ಎಗಳು ಮನೆಗೆ ತೆರಳಿದಾಗ ಬೀಗ ಹಾಕಿರುವುದು ಹಾಗೂ ನುಣುಚಿಕೊಳ್ಳುವ ಪ್ರಕ್ರಿಯೆ ಕಂಡುಬಂದಿದ್ದು, ಆಗಸ್ಟ್ 8ರವರೆಗೆ ಪರಿಷ್ಕರಣೆಗೆ ಅವಕಾಶವಿದೆ. ಒಂದು ವೇಳೆ ಹೆಸರು ಬಿಟ್ಟುಹೋದರೆ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.ಈ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಪೌರಾಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಿಎಒ ಸದಾನಂದ ಸ್ವಾಮಿ,ಕೆ.ಮದನ್, ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹಾನೆ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಲ್. ಶಿವಪ್ರಕಾಶ್ ಹಾಗೂ ಪ್ರಮುಖರಾದ ಫರ್ನಾಂಡಿಸ್, ಡಾ.ಅನ್ನಪೂರ್ಣ, ಪ್ರತಿಭಾ,ಮಮತಾ ಕೆ.ಎಸ್. ಪ್ರಶಾಂತ್ ವರ್ಣೇಕರ್,ಡಾ.ಅರುಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ


Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ