ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಾಗರ ತಾಲ್ಲೂಕು ಬಿಜೆಪಿಯಿಂದ ಖಂಡಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ
ಭಾರತ ಚುನಾವಣಾ ಆಯೋಗದ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜಕೀಯ ಪ್ರಚಾರಕ್ಕೆ ದುರುಪಯೋಗಪಡಿಸಿಕೊಂಡು, ಚುನಾವಣಾ ಆಯೋಗದ ನಿಷ್ಪಕ್ಷವಾತತೆಯನ್ನು ಪ್ರಶ್ನಿಸುವ ಹಾಗೂ ಮತದಾರರಲ್ಲಿ ಗೊಂದಲ ಉಂಟುಮಾಡುವ ಕರಪತ್ರವನ್ನು ವಿತರಿಸಿರುವ ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಾಗರ ತಾಲ್ಲೂಕು ಬಿಜೆಪಿಯಿಂದ ಖಂಡಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ
ಸಾಗರ ನಗರಮಂಡಲ ಅಧ್ಯಕ್ಷ ಕೆ.ಆರ್. ಗಣೇಶ್'ಪ್ರಸಾದ್, ಮಧುರಾ ಶಿವಾನಂದ್, ದೇವೇಂದ್ರಪ್ಪ ಯಲಕುಂದ್ಲಿ, ರಮೇಶ ಹಾರೆಗೊಪ್ಫ ಭಾಷಣ
ಸಾಗರ ; ಭಾರತ ಚುನಾವಣಾ ಆಯೋಗವು ದೇಶಾದ್ಯಂತ ಮತದಾರರ ಪಟ್ಟಿಯ (SpecialIntensive Revision SIR) ಕಾರ್ಯಕ್ರಮವನ್ನು ಕೈಗೊಂಡಿದ್ದು, ಅದರ ಅಂಗವಾಗಿ ಮತದಾರರಿಗೆ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಆ ದರೆ, ನಾಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಚುನಾವಣಾ ಆಯೋಗದ ಅಧಿಕೃತ ಅರ್ಜಿಗಳ ಜೊತೆಗೆ ರಾಜಕೀಯ ಪ್ರಚಾರದ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಸದರಿ ಕರಪತ್ರದಲ್ಲಿ ಚುನಾವಣಾ ಆ ಯೋಗದ ಕಾರ್ಯವೈಖರಿಯನ್ನು ರಾಜಕೀಯ ಬಣ್ಣ ಬಳಿದು ಬಿಜೆಪಿ ಚುನಾವಣಾ ಆಯೋಗದ ಸಹಾಯದಿಂದ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿದೆ".
"ಕಾಂಗ್ರೆಸ್ ನಿಮ್ಮ ಮತವನ್ನು ಉಳಿಸುತ್ತದೆ" ಎಂಬ ಅರ್ಥ ಬರುವ ರೀತಿಯ ಹೇಳಿಕೆಗಳನ್ನು ನೀಡಿ ಸಾರ್ವಜನಿಕರ ಲ್ಲಿ ಚುನಾವಣಾ ಆಯೋಗದ ಬಗ್ಗೆ ಅಪನಂಬಿಕೆ ಮತ್ತು ಗೊಂದಲವನ್ನು ಉಂಟುಮಾಡುವ ಪ್ರಯತ್ನ ಮಾಡಲಾಗಿದೆ.
ಈ ರೀತಿಯ ಕೃತ್ಯವು ಕೇವಲ ರಾಜಕೀಯ ಪ್ರಚಾರವಲ್ಲ; ಬದಲಾಗಿ, ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಭಾರತ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ, ವಿಶ್ವಾಸಾರ್ಹತೆ ಹಾಗೂ ಸ್ವತಂತ್ರ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಅಪನಂಬಿಕೆ ಉಂಟುಮಾಡುವ ಪ್ರಯತ್ನವಾಗಿದೆ.
ಇಂತಹ ನಡೆಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು, ಮ ತದಾರರ ಸ್ವತಂತ್ರ ನಿರ್ಧಾರಕ್ಕೆ ಧಕ್ಕೆಯನ್ನುಂಟುಮಾಡುವ ಸಾಧ್ಯತೆಯನ್ನು ಹೊಂದಿವೆ. ಸದರಿ ಪ್ರಕರಣದಲ್ಲಿ ಪ್ರಾ ಧಮಿಕವಾಗಿ ಕೆಳಕಂಡ ಕಾನೂನು ಹಾಗೂ ನಿಯಮಗಳ ಅಡಿಯಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವು ದು ಅಗತ್ಯವಾಗಿದೆ.
1. ಭಾರತದ ಸಂವಿಧಾನದ ವಿಧಿ 324 ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಸ್ವತಂತ್ರ ಮ ತು ನ್ಯಾಯಸಮ್ಮತ ಚುನಾವಣೆ ನಡೆಸುವ ಅಧಿಕಾರಕ್ಕೆ ಧಕ್ಕೆ ತರುವ ಕೃತ್ಯ.
2. Representation of the People Act, 1950 कǝr Representation of the People Act. 1951 ರ ಉದ್ದೇಶಗಳಿಗೆ ವಿರುದ್ಧವಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜಕೀಯ ಉ ದ್ದೇಶಗಳಿಗೆ ಬಳಸುವ ಕೃತ್ಯ.
3. Election Commissionofindia ಹೊರಡಿಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂ ಬಂಧಿಸಿದ ಮಾರ್ಗಸೂಚಿಗಳು ಹಾಗೂ ನಿರ್ದೇಶನಗಳ ಉಲ್ಲಂಘನೆ.
2023) Sanhita, Nyaya 4. ಭಾರತೀಯ ನ್ಯಾಯ ಸಂಹಿತ,2023(Bharatiya ಅಡಿಯಲ್ಲಿ, ತನಿಖೆಯಲ್ಲಿ ಕಂಡುಬರುವ ಸಂಗತಿಗಳ ಆಧಾರದ ಮೇಲೆ ಸಾರ್ವಜನಿಕರಲ್ಲಿ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಹರಡುವುದು, ಸಾರ್ವಜನಿಕ ಶಾಂತಿ ಅಥವಾ ಚುನಾವಣಾ ಪ್ರಕ್ರಿಯೆಗೆ ಧ ಕ್ಕೆ ತರುವ ಕೃತ್ಯಗಳಿಗೆ ಸಂಬಂಧಿಸಿದ ಅನ್ವಯಿಸುವ ವಿಧಿಗಳಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನ.
5. ಅಗತ್ಯವಿದ್ದಲ್ಲಿ, ಚುನಾವಣಾ ಆಯೋಗದ ಆದೇಶಗಳು ಹಾಗೂ ಅನ್ವಯಿಸುವ ಚುನಾವಣಾ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದ ಇತರೆ ಕಾನೂನು ಕ್ರಮ.
ಆದ್ದರಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,
1. ಸದರಿ ಕರಪತ್ರವನ್ನು ತಕ್ಷಣ ವಶಪಡಿಸಿಕೊಂಡು ತನಿಖೆ ನಡೆಸಬೇಕು.
2. ಕರಪತ್ರವನ್ನು ಮುದ್ರಿಸಿದವರು. ಪ್ರಕಟಿಸಿದವರು. ವಿತರಿಸಿದವರು ಹಾಗೂ ಇದರ ಹಿಂದೆ ಇರುವ ಜವಾಬ್ದಾ ರ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
3. ಚುನಾವಣಾ ಆಯೋಗದ ಅಧಿಕೃತ ಅರ್ಜಿಗಳೊಂದಿಗೆ ಯಾವುದೇ ರಾಜಕೀಯ ಪಕ್ಷದ ಪ್ರಚಾರ ಸಾಮಗ್ರಿ ಯನ್ನು ವಿತರಿಸುವುದನ್ನು ತಕ್ಷಣ ನಿಷೇಧಿಸಿ ಅಗತ್ಯ ನಿರ್ದೇಶನಗಳನ್ನು ಹೊರಡಿಸಬೇಕು.
4. ಮತದಾರರಲ್ಲಿ ಗೊಂದಲ ಉಂಟುಮಾಡುವ ಹಾಗೂ ಚುನಾವಣಾ ಆಯೋಗದ ಘನತೆಗೆ ಧಕ್ಕೆ ತರುವ ಈ ರೀತಿಯ ಕೃತ್ಯಗಳು ಮರುಕಳಿಸದಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.
5. ತನಿಖೆಯ ಆಧಾರದ ಮೇಲೆ ಅನ್ವಯಿಸುವ ಕಾನೂನುಗಳಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ದಂಡನಾತ್ಮಕ ಕ್ರಮ ಜರುಗಿಸಬೇಕು.
ಸದರಿ ದೂರಿನೊಂದಿಗೆ ಸಂಬಂಧಿತ ಕರಪತ್ರದ ಪ್ರತಿಯನ್ನು ಲಗತ್ತಿಸಲಾಗಿದೆ. ಈ ವಿಷಯವು ಚುನಾವಣಾ ವ್ಯವಸ್ಥೆ ಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಅತ್ಯಂತ ಗಂಭೀರ ವಿಷಯವಾಗಿರುವುದರಿಂದ, ತಮ್ಮಿಂದ ತುರ್ತು ಕ್ರಮವನ್ನು ಕೈಗೊಂಡು ನ್ಯಾಯ ಒದಗಿಸುವಂತೆ ಸಾಗರ ಉಪವಿಭಾಗಾಧಿಕಾರಿಗಳಿಗೆ ಂವಿ ನೀಡಿದ್ದಾರೆ
ಬಿಜೆಪಿ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.
ಮೀನಿನಹೆಜ್ಜೆ ನ್ಯೂಸ್, ಸಾಗರ
ಸುದ್ದಿ ಮತ್ತು ಜಾಹೀರಾತಿಗಾಗಿ : 7204641701


Comments
Post a Comment