ಬಿಜೆಪಿ ಸಾಗರ ನಗರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಪರಶುರಾಮ, ಪ್ರದಾನ ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ಮತ್ತು ವಿನಯ್ ಪೂಜಾರಿ
ಬಿಜೆಪಿ ಸಾಗರ ನಗರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಪರಶುರಾಮ, ಪ್ರದಾನ ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ಮತ್ತು ವಿನಯ್ ಪೂಜಾರಿ
ಸಾಗರ ; ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತ, ಸಂಘಟನಾ ಚತುರ ಯುವನಾಯಕನಾಗಿ ಬಿಜೆಪಿಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಪರಶುರಾಮ ಶ್ರೀಧರನಗರ, ಇವರನ್ನು ಸಾಗರದ ನಗರ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ಮಾಡಲಾಗಿದೆ.
ಅಂತೆಯೇ ಸಾಗರ ನಗರ ಮಂಡಲ ಯುವಮೋರ್ಚಾ ಪ್ರದಾನ ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ಮತ್ತು ವಿನಯಪೂಜಾರಿ ಆಯ್ಕೆಯಾಗಿದ್ದಾರೆ.
ನಿನ್ನೆ ದಿನ ಸಾಗರದ ಬಿಜೆಪಿ ಕಚೇರಿಯಲ್ಲಿ ಹಾಜರಿದ್ದ ಪ್ರಮುಖರ ಉಪಸ್ಥಿತಿಯಲ್ಲಿ ಯುವಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯ ಕಾರ್ಯಕ್ರಮದಲ್ಲಿ ಪರಶುರಾಮ ಅವರನ್ನು ಸಾಗರ ನಗರ ಮಂಡಲಕ್ಕೆ ಅಧ್ಯಕ್ಷರೆಂದು ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಗರ ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆ. ಆರ್. ಹಾಗೂ ದಾವಣಗೆರೆ ಜಿಲ್ಲಾ ಪ್ರಭಾರಿಗಳಾದ ಮೇಘರಾಜ್ ಟಿ. ಡಿ. ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಯುವ ಮೋರ್ಚಾ ಅಧ್ಯಕ್ಷರಾದ ಪರಶುರಾಮ ಈ ಕಾರ್ಯಕ್ರಮದ ರವರ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಧುರ ಶಿವಾನಂದ, ಜಿಲ್ಲಾ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಸಂತೋಷ್ ಆರ್ ಶೇಟ್, ನಗರ ಮಂಡಲ ಯುವ ಮೋರ್ಚಾ ಪ್ರಭಾರಿಗಳಾದ *ಶಂಕರ್ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಮೊಗವೀರ್, ಸಂತೋಷ್ ರಾಯಲ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಯುವ ಮೋರ್ಚಾದ ತಂಡ, ಮಂಡಲ ಪದಾಧಿಕಾರಿಗಳು, ಮೋರ್ಚಾಗಳ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಇನ್ನುಳಿದಂತೆ ಪ್ರಭಾರಿಗಳಾಗಿ ಶಂಕರಪೂಜಾರಿ, ಉಪಾಧ್ಯಕ್ಷರಾಗಿ ನಿತಿನ್ ಶೆಟ್ಟಿ, ರಂಜಿತ ಡಿ., ಮೋಹನ ಆಚಾರ್, ಭರತ್ ಪಾವಟೆ, ಸಚಿನ್ ಹೆಗಡೆ, ಪ್ರವೀಣ, ಖಜಾಂಚಿಯಾಗಿ ಗಣೇಶ, ಮಾಧ್ಯಮ ಪ್ರಮುಖರಾಗಿ ಅರುಣಕುಮಾರ್, ಸೋಶಿಯಲ್ ಮಿಡಿಯಾಕ್ಕೆ ಸುಬ್ರಹ್ಮಣ್ಯ, ಕಾರ್ಯದರ್ಶಿಗಳಾಗಿ ಗಣೇಶ ಕಿಟ್ಟದಹಳ್ಳಿ, ಅಖಿಲೇಶ, ವಿನಾಯಕ, ಲೋಕೇಶ, ಕಾರ್ತೀಕ, ಪ್ರಜ್ವಲ್, ಸದಸ್ಯರಾಗಿ ಮಣಿಕಂಠ, ಲೋಹಿತ, ಸಾಗರ್, ಅನಿತ, ಪವನ, ಪಂಕಜ್ ಜೈನ್, ಸಂಜಯ, ಸಾಗರ, ಜನಾರ್ಧನ, ಅರುಣ, ಗುರುರಾಜ ಇವರನ್ನು ಆಯ್ಕೆ ಮಾಡಲಾಗಿದೆ.
ನೂತನವಾಗಿ ಬಿಜೆಪಿ ನಗರ ಮಂಡಲ ಯುವಮೋರ್ಚಕ್ಕೆ ಆಯ್ಕೆಯಾದ ಎಲ್ಲರಿಗೂ ಮೂರನೇಕಣ್ಣು ನ್ಯೂಸ್, ಸಾಗರ ಶುಭ ಕೋರುತ್ತದೆ.
ಮೀನಿನಹೆಜ್ಜೆ ನ್ಯೂಸ್, ಸಾಗರ
ಸುದ್ದಿ ಮತ್ತು


Comments
Post a Comment