ಮುಂಗಾರು ಮಳೆ ; ವಿಶ್ವ ವಿಖ್ಯಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದಾದ ಜೋಗ ಜಲಪಾತಕ್ಕೆ ಜೀವಕಳೆ
ಮುಂಗಾರು ಮಳೆ ; ವಿಶ್ವ ವಿಖ್ಯಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದಾದ ಜೋಗ ಜಲಪಾತಕ್ಕೆ ಜೀವಕಳೆ
ಸಾಗರ ; ಸಮೀಪದ ಜೋಗದ ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ವೈಭವ ಮರಳಿ ಬಂದಿದೆ.
ಮುಂಗಾರು ಮಳೆ ಪ್ರಾರಂಭವಾಗಿದ್ದು,ಇದರಿಂದ ಜಲಾಶಯ ಹಾಗೂ ಜಲಪಾತಗಳಿಗೆ ಜೀವಕಳೆ ಬಂದಿದೆ. ನೀರಿನ ರಭಸ.
ಜೋಗದ ನಾಲ್ಕು ಪ್ರಮುಖ ಧಾರೆಗಳಾದ ಧುಮ್ಮಿಕ್ಕುವ ರಾಜ, ಬಳಕುತ್ತಾ ಜಾರುವ ರಾಣಿ, ಜೋರಾಗಿ ಆರ್ಭಟಿಸುತ್ತಾ ಹಲವು ಬಾರಿ ಚಿಮ್ಮುತ್ತಾ ಧುಮುಕುವ ರೋರರ್, ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್, ಜಲಪಾತಗಳು ಸಹ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದೆ.. ಮಳೆಗಾಲದಲ್ಲಿ ಅತ್ಯಂತ ರಮಣೀಯ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣ ಮುಚ್ಚಾಲೆ ಆಡುತ್ತಾ,ನೋಡುಗರ ಕಣ್ಮನ ಸೆಳೆಯುತ್ತಾ ಸೌಂದರ್ಯ ಹಾಗೂ ವೈಭವ
ವೈಭವದ ದೃಶ್ಯ ; ಎತ್ತರದಿಂದ ಬಂಡೆಗಳ ಮೇಲೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದೆ.
ಸೊರಗಿದ ಜಲಪಾತಗಳಿಗೆ ಮರುಜೀವ ಬಂದಿದ್ದು, ಭೋರ್ಗರೆವ ಶಬ್ದ, ಹಚ್ಚಹಸಿರಾದ ಗಿಡಮರಗಳು, ದಟ್ಟ ಮಂಜಿನ ನಡುವೆ ಮೂಡಿರುವ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಮುಂದಿನ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ,ಜೋಗ ಜಲಪಾತದ ನೀರಿನ ಹರಿವು ಇನ್ನಷ್ಟು ಹೆಚ್ಚಳವಾಗಲಿದೆ.
ಕಳೆದ ಕೆಲವು ತಿಂಗಳುಗಳಿಂದ ನೀರಿನ ರಭಸವಿಲ್ಲದೆ ಸೊರಗಿದ್ದ ಜೋಗ ಜಲಪಾತಕ್ಕೆ ಸುರಿಯುತ್ತಿರುವ ಮುಂಗಾರು ಮಳೆ ಜೀವ ತುಂಬಿದೆ,
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment