ಮಕ್ಕಳ ಕೈಯಲ್ಲಿ ನಾವೇ ಮೊಬೈಲ್ ಫೋನ್ ಕೊಟ್ಟು ಈಗ ಪಶ್ಚಾತ್ತಾಪ ಪಡುವ ದುರಂತ ನಿರ್ಮಾಣವಾಗಿದೆ. ಅವರ ಕೈಗೆ ಪುಸ್ತಕ, ಸಂಗೀತ ವಾದ್ಯಗಳನ್ನು ನೀಡುವ ಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡಬೇಕಾಗಿದೆ-ಮ.ಸ. ನಂಜುಂಡಸ್ವಾಮಿ

ಮಕ್ಕಳ ಕೈಯಲ್ಲಿ ನಾವೇ ಮೊಬೈಲ್ ಫೋನ್ ಕೊಟ್ಟು ಈಗ ಪಶ್ಚಾತ್ತಾಪ ಪಡುವ ದುರಂತ ನಿರ್ಮಾಣವಾಗಿದೆ. ಅವರ ಕೈಗೆ ಪುಸ್ತಕ, ಸಂಗೀತ ವಾದ್ಯಗಳನ್ನು ನೀಡುವ ಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡಬೇಕಾಗಿದೆ-ಮ.ಸ. ನಂಜುಂಡಸ್ವಾಮಿ


ಸಾಗರ: ಮಕ್ಕಳ ಕೈಯಲ್ಲಿ ನಾವೇ ಮೋಬೈಲ್ ಫೋನ್ ಕೊಟ್ಟು ಈಗ ಪಶ್ಚಾತ್ತಾಪ ಪಡುವ ದುರಂತ ನಿರ್ಮಾಣವಾಗಿದೆ. ಮೊಬೈಲ್ ಫೋನ್ ಚಟ ತಪ್ಪಿಸಲು ಲಲಿತಕಲೆಗಳ ರುಚಿ ಹೆಚ್ಚಿಸುವುದು ಅತ್ಯಂತ ಉತ್ತಮ ಪರಿಹಾರವಾಗಿದೆ ಎಂದು ಮ. ಸ. ನಂಜುಂಡಸ್ವಾಮಿ ಹೇಳಿದರು.

ಇಲ್ಲಿನ ವಿಜಯನಗರದ ಮೂಗೂರು ಮನೆ ಸಿಂಫನಿ ಹೌಸ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಲಯಪರಂಪರಾ ಬೈಠಕ್ ಸೀರೀಸ್ 'ನ ಪ್ರಥಮ ಕಾರ್ಯಕ್ರಮ ಉದ್ಘಾಟಿಸಿ ನೂತನ ಧ್ವನಿವರ್ಧಕ ವ್ಯವಸ್ಥೆ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ  ನಮ್ಮ ಮಕ್ಕಳಿಗೆ ಮೊಬೈಲ್ ಫೋನ್ ಬಿಟ್ಟು ಇರಲಾರದ ಸ್ಥಿತಿ ನಿರ್ಮಾಣವಾಗಿದೆ. ಅವರ ಕೈ ಗೆ ಪುಸ್ತಕ, ಸಂಗೀತ ವಾದ್ಯಗಳನ್ನು ನೀಡುವ ಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡಬೇಕಾಗಿದೆ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಮಕ್ಕಳ ಏಕಾಗ್ರತೆ ಸಂಪೂರ್ಣ ಹಾಳಾಗಿದೆ. ಬೆರಳುಗಳು ದುರ್ಬಲವಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳಿಗೆ ವಿವಿಧ ಕಲಾಪ್ರಕಾರಗಳ ಹವ್ಯಾಸ ಅತ್ಯುತ್ತಮ ಪರಿಹಾರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪಂ.ಮೋಹನ್ ಹೆಗಡೆ ಹುಣಸೆಕೊಪ್ಪ  ಮಾತನಾಡಿ, ಲಯ ಮತ್ತು ಶ್ರುತಿ ಕೇವಲ ಸಂಗೀತ ಅಥವಾ ನೃತ್ಯ ಕ್ಕೆ ಸೀಮಿತವಾಗಿಲ್ಲ. ನಮ್ಮ ಉಸಿರಾಟ ದಲ್ಲಿ,ನಡಿಗೆಯಲ್ಲಿ ಲಯ ಬದ್ಧತೆ ಇದೆ.  ಸಂಗೀತ ಕಲಿಕೆ ಅಥವಾ ಆಲಿಸುವಿಕೆ ನಮ್ಮ ಮನಸ್ಸು ಮತ್ತು ವ್ಯಕ್ತಿತ್ವ ಆರೋಗ್ಯಕರವಾಗಿರಲು ನೆರವಾಗುತ್ತದೆ ಎಂದು ಹೇಳಿದರು.

ನಾಧಿನ್ ಧಿನ್ನಾ ತಬಲಾ ಶಿಕ್ಷಣ ಸಂಸ್ಥೆಯ ನಿಖಿಲ್ ವಿ.ಕುಂಸಿ ಮಾತನಾಡಿ , ಸಂಗೀತ, ನೃತ್ಯ ಮುಂತಾದ ಲಲಿತ ಕಲೆಗಳ ಶಿಕ್ಷಣ ನೀಡುತ್ತಿರುವ ಸಾಗರದ ಬಹುತೇಕ ಶಿಕ್ಷಣ ಸಂಸ್ಥೆಗಳು ಅನ್ಯ ಕಲಾ ಪ್ರಕಾರಗಳ ಪ್ರದರ್ಶನ ಏರ್ಪಡಿಸುವ ಪರಂಪರೆಯನ್ನು ನಿರ್ಮಿಸಿವೆ. ಈ ಪರಂಪರೆಯ ಭಾಗವಾಗಿ ನಮ್ಮ ಸಂಸ್ಥೆ ಕೂಡ ತಬಲಾ ಶಿಕ್ಷಣ ನೀಡುವುದರ ಜೊತೆಗೆ ಪರಂಪರಾ ಬೈಠಕ್ ಮಾಲಿಕೆಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ತಬಲಾ ಕಲಿಯುತ್ತಿರುವ ವಿದ್ಯಾರ್ಥಿಗಳು ಹಿರಿಯ ಮತ್ತು ಪ್ರಸಿದ್ಧ ತಬಲವಾದಕರ ಏಕವ್ಯಕ್ತಿ ಪ್ರದರ್ಶನವನ್ನು ಗಮನಿಸುವ ಮೂಲಕ ತಬಲಾ ವ್ಯಾಕರಣವನ್ನು ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತಬಲಾ ವಾದನದಲ್ಲಿ ನಿರ್ದಿಷ್ಟವಾದ ಸ್ವರ, ವ್ಯಂಜನಗಳ ನುಡಿಸುವಿಕೆಯ ಸ್ಪಷ್ಟತೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಬೆಂಗಳೂರಿನ ಮೇಘ ಶ್ಯಾಮ್ ಕೇಶವ್ ತಬಲಾ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟರು.ಸಂವತ್ಸರ ಹಾರ್ಮೋನಿಯಂ ಸಾಥ್ ನೀಡಿದರು. ವಿದುಷಿ ವಸುಧಾ ಶರ್ಮಾ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಸಿಕೊಟ್ಟರು.ನಿಖಿಲ್ ಕುಂಸಿ, ವಿದ್ವಾನ್ ನರಸಿಂಹಮೂರ್ತಿ  ಶರ್ಮಾ ಮತ್ತು ಸಂವತ್ಸರ ಸಾಥ್ ನೀಡಿದರು.

ಸುವರ್ಣ ಹೆಗಡೆ ಮತ್ತು ಸಮನ್ವಿತ ಪ್ರಾರ್ಥಿಸಿದರು. ಲಯಾಂಕುರ ಟ್ರಸ್ಟ್ ನ ಸಂಸ್ಥಾಪಕ ವಿಜಯೇಂದ್ರ ಕುಂಸಿ ಸ್ವಾಗತಿಸಿದರು. ಬಿ.ಜಿ.ಮಂಜಪ್ಪ ನಿರೂಪಿಸಿದರು.ಚಂದ್ರಕಲಾ,ಸುಮಂಗಲಾ, ಮಹಾಬಲೇಶ್ವರ ಕಿಬ್ಬಚ್ಚಲು, ಸುಬ್ಬಣ್ಣ ಮಂಗಳೂರು, ವಿವೇಕಾನಂದ ಎಚ್.ಸಿ. ಮತ್ತಿತರು ಹಾಜರಿದ್ದರು.

ವರದಿ ; ಯೋಗೀಶ್ ಜಿ. 

ಸುದ್ದಿ ಮತ್ತಿ ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ