ಉಚಿತ ಹೃದಯ ತಪಾಸಣಾ ಶಿಬಿರ
ಉಚಿತ ಹೃದಯ ತಪಾಸಣಾ ಶಿಬಿರ
ಸಾಗರ : ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಸಾಗರ. ಶ್ರೀ ಶೃಂಗೇರಿ ಶಂಕರ ಮಠ ಸಾಗರ ,ಅಭಿನಯ ಸಾಗರ ಸಾಗರ.,ಇವರ ಆಶ್ರಯದಲ್ಲಿ ಮಾನ್ವಿತಾ ಹೆಲ್ತ್ ಕೇರ್ ಇವರ ಸಹಯೋಗದಲ್ಲಿ ಇವರ ಸಹಯೋಗದಲ್ಲಿ ದಿನಾಂಕ 18-7 -2026 ಶನಿವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಾಗರದ ಶೃಂಗೇರಿ ಶಂಕರ ಮಠದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಪವಿತ್ರ ನಾಗರಾಜ ಎಂ. ಹೇಳಿದರು.
ಅವರು ಸಾಗರದ ಕರಾಕಾನಿಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತ, ಸ್ಪಂದನ ಪ್ರೊ ಎಂಬ ವಿಶೇಷ ಉಪಕರಣದಿಂದ ಶಿಬಿರಕ್ಕೆ ತಪಾಸಣೆಗೆ ಬರುವವರ ಬಿ.ಪಿ, ಶುಗರ್ ಮತ್ತು ಇಸಿಜಿ ಹಾಗೂ ಉಚಿತ ಹೃದಯ ತಪಾಸಣೆಯನ್ನು ಮಾಡಲಾಗುವುದು ಎಂದು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ್ ಪವಿತ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಸಾಗರದ ಮೂಲದ ಮಾಧವ ಭಟ್ ಇವರ ಆಶಯದಂತೆ ಮಾನ್ವಿತಾ ಹೆಲ್ತ್ ಕೇರ್ ಸೆಂಟರ್ ಚೆನ್ನೈ ಇವರ ವೈದ್ಯರ ಬಳಗದಿಂದ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಜೀವ ಸದಸ್ಯರು, ಕುಟುಂಬದವರು ಹಾಗೂ ಮಾರಿಕಾಂಬಾ ದೇವಿಯ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಮತಿ ಶರಾವತಿ ಸಿ ರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಮೂರ್ತಿ ಕಾನುಗೋಡು, , ವಿ ಶಂಕರ್, ಆನಂದ್ ಎಂ ಡಿ, .ಸ. ನಂಜುಂಡಸ್ವಾಮಿ ಮುಂತಾದವರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment