ಶಿವಮೊಗ್ಗ ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುಧಾಯಗಳಿಗೆ ಮಾಸಿಕ ಪೌಷ್ಠಿಕ ಆಹಾರ ನೀಡುವುದನ್ನು ನಿಲ್ಲಿಸಿರುವ ಬಗ್ಗೆ ಅರಣ್ಯ ‌ಮೂಲ ಬುಡಕಟ್ಟು ನಿವಾಸಿಗಳಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುಧಾಯಗಳಿಗೆ ಮಾಸಿಕ ಪೌಷ್ಠಿಕ ಆಹಾರ ನೀಡುವುದನ್ನು ನಿಲ್ಲಿಸಿರುವ ಬಗ್ಗೆ ಅರಣ್ಯ ‌ಮೂಲ ಬುಡಕಟ್ಟು ನಿವಾಸಿಗಳಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಸಾಮೂಹಿಕ ಅರಣ್ಯ ಹಕ್ಕು ನೀಡುವ ಬಗ್ಗೆಯೂ ಪ್ರತಿಭಟನೆ

ಸಾಗರ ; ಸರ್ಕಾರವು ಮಲೆನಾಡಿನ ಗುಡ್ಡಗಾಡುಗಳಲ್ಲಿ ವಾಸ ಮಾಡುವ ಆದಿವಾಸಿ ಬುಡಕಟ್ಟು ಸಮುಧಾಯಗಳಿಗೆ ಪೌಷ್ಠಿಕ ಆಹಾರ ನೀಡುತ್ತಾ ಬಂದಿರುವುದು ಸರಿಯಷ್ಟೆ. ಆದರೆ ಕಳೆದ ಏಪ್ರಿಲ್ ತಿಂಗಳಿಂದ ಈ ಯೋಜನೆಯನ್ನು ನಿಲ್ಲಿಸಿರುವುದು, ಇದನ್ನೇ ನಂಬಿಕೊಂಡಿದ್ದವರಿಗೆ ತುಂಬಾ ತೊಂದರೆ ಆಗಿರುತ್ತದೆ. ಆದ್ದರಿಂದ ಕೂಡಲೇ ಪೌಷ್ಠಿಕ ಆಹಾರ ವಿತರಣೆ ಮಾಡಲು, ಪಾರಂಪರಿಕ ಅರಣ್ಯವಾಸಿ ಹಾಗೂ ಬುಡಕಟ್ಟು ಜನರಿಗಾಗಿ ಜಾರಿ ಮಾಡಿರುವ ಅರಣ್ಯ ಹಕ್ಕು ಕಾಯ್ದೆ-2006ರ ಅನ್ವಯ, ವೈಯಕ್ತಿಕ ಹಕ್ಕು ಹಾಗೂ ಸಮುದಾಯಿಕ ಹಕ್ಕು ನೀಡುವ ಪ್ರಕ್ರಿಯೆಗೆ ಮುನಃ ಅರಣ್ಯ ಹಕ್ಕು ಸಮಿತಿಗಹಳ ಸಭೆ ಹಾಗೂ ಅರಣ್ಯ ಹಕ್ಕು ಗ್ರಾಮಸಭೆ ನಡೆಸುವರೆ ತುರ್ತು ಕ್ರಮ ತೆಗೆದುಕೊಳ್ಳಲು, ಶಿವಮೊಗ್ಗ ಜಿಲ್ಲೆಯಲ್ಲಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ ಹಾಗೂ ಮಾರಾಟ ವ್ಯವಸ್ಥೆಯಿಂದ ಮಧ್ಯವರ್ತಿಗಳಿಂದ ತಪ್ಪಿಸಿ ನೈಜ ಹಕ್ಕುದಾರರಾದ ಬುಡಕಟ್ಟು ಸಮುದಾಯದವರೇ ಮಾಡಬೇಕು ಎನ್ನುವ ಸದುದ್ದೇಶದಿಂದ ಬಹಳ ಕಷ್ಟ ಪಟ್ಟು ಸಾಗರ-ಹೊಸನಗರ ವ್ಯಾಪ್ತಿಯನ್ನೊಳಗೊಂಡು ಲ್ಯಾಪ್ ಸೊಸೈಟಿಯನ್ನು ನೊಂದಣಿ ಮಾಡಿ 4 ವರ್ಷ ಕಳೆದರೂ ಇದುವರೆಗೂ ಅರಣ್ಯ ಇಲಾಖೆಯವರು ಮೀನಾಮೇಶ ಮಾಡುತ್ತಿದ್ದು, ಯಾವುದೇ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿರುವುದಿಲ್ಲ. ಈ ವಿಷಯದಲ್ಲಿ ನಮಗೆ ಸಹಾಯಕವಾಗಲೀ ಎಂದು ಸ್ವತಃ ಜಿಲ್ಲಾ ಅರಣ್ಯಾಧಿಕಾರಿಗಳನ್ನೇ ಲ್ಯಾಂಪ್ ಸೊಸೈಟಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅವರು ಈ ವಿಷಯಕ್ಕೆ ಯಾವುದೇ ರೀತಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ,‌ ಜಿಲ್ಲಾ ಅರಣ್ಯಾಧಿಕಾರಿಗಳನ್ನು ಜವಾಬ್ದಾರಿ ಮಾಡಿ ಲ್ಯಾಂಪ್ ಸೊಸೈಟಿಗಳ ಮೂಲಕ ತಕ್ಷಣ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಏರ್ಪಾಟಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟಿಸಿ ಸಾಗರ ಎಸಿಯವರಿಗೆ ಮನವಿ ನೀಡಲಾಗಿದೆ.

ಈ‌ ಸಂದರ್ಭದಲ್ಲಿ ಅಶೋಕ ಉಡುಪಿ, ಶಿವಾನಂದ ಕುಗ್ವೆ ಮತ್ತು ರಾಮಣ್ಣ ಹಸಲರ, ಲಕ್ಷ್ಮಮ್ಮ ಮಾತನಾಡಿದರು.

ಸಾಧು, ರಮೇಶ, ನಾಗರತ್ನ, ಮಂಜಪ್ಪ ಹಾಗೂ ಸಾಗರ ಸುತ್ತಮುತ್ತಲಿನ ಪ್ರದೇಶದ ಅನೇಕ ಬುಡಕಟ್ಟು ಜನಾಂಗದವರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ‌ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ