ನೀಟ್ ಪರೀಕ್ಷೆ ಅಕ್ರಮ ಹಾಗೂ ಕೇಂದ್ರದ ಧೋರಣೆ ಖಂಡಿಸಿ ಆಕ್ರೋಶ : 'ಸಂಸತ್ ಚಲೋ' ಮಾದರಿ ಹೋರಾಟಕ್ಕೆ ಕಾಂಗ್ರೇಸ್ ಮುಖಂಡ, ರಂಗಕರ್ಮಿ ಸಂತೋಷ್ ಸದ್ಗುರು ಕರೆ

ನೀಟ್ ಪರೀಕ್ಷೆ ಅಕ್ರಮ ಹಾಗೂ ಕೇಂದ್ರದ ಧೋರಣೆ ಖಂಡಿಸಿ ಆಕ್ರೋಶ : 'ಸಂಸತ್ ಚಲೋ' ಮಾದರಿ ಹೋರಾಟಕ್ಕೆ ಕಾಂಗ್ರೇಸ್ ಮುಖಂಡ, ರಂಗಕರ್ಮಿ ಸಂತೋಷ್ ಸದ್ಗುರು ಕರೆ

ಸಾಗರ ; ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ. ಪ್ರಶ್ನೆ ಪತ್ರಿಕೆ‌ಸೋರಿಕೆ ಆದ ಮೇಲೆ ಸರಕಾರ ಎಚ್ಚೆತ್ತುಕೊಳ್ಳದೇ ಕೇಂದ್ರದಲ್ಲಿ ಏನೂ ಆಗಿಲ್ಲ ಎಂಬಂತೆ ಈ ವಿಷಯನ್ನು ಗಂಭೀರವಾಗಿ ತೆಗದುಕೊಳ್ಳದೆ ಸೋನಂ ವಾಂಗ್ಚೂಕ್ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿದ ಸಿಜೆಪಿಯ ವಿದ್ಯಾರ್ಥಿ ಕಾರ್ಯಕರ್ತರನ್ನು ಥಳಿಸಿರುವುದು ಖಂಡನೀಯ ಇದಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡ ಸಂತೋಷ್ ಸದ್ಗುರು ಹೇಳಿದರು.

ಅವರು ಇಂದು ನಿನ್ನೆ ದಿನ ಪಾರ್ಲಿಮೆಂಟ್ ಎದುರು ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳ ಮೇಲೆ ಆದ ದೌರ್ಜನ್ಯವನ್ನು ಖಂಡಿಸಿ ಸಾಗರ ಬ್ಲಾಕ್ ಕಾಂಗ್ರೇಸ್ ‌ಪಕ್ಷದಿಂದ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.


ನವದೆಹಲಿದಲ್ಲಿ ಸಂಸತ್ ಚಲೋ ಪ್ರತಿಭಟನೆಯ ವೇಳೆ ನೀಟ್ (NEET) ಪರೀಕ್ಷಾ ಅಕ್ರಮದ ವಿರುದ್ಧ ನ್ಯಾಯಕ್ಕಾಗಿ ಮೆರವಣಿಗೆ ನಡೆಸುತ್ತಿದ್ದ ಸಾವಿರಾರು ಯುವಕರ ಮೇಲೆ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿರುವುದನ್ನು ಕಾಂಗ್ರೇಸ್ ಮುಖಂಡ ಹಾಗೂ ರಂಗಕರ್ಮಿ ಸಂತೋಷ್ ಸದ್ಗುರು ಅವರು ತೀವ್ರವಾಗಿ ಖಂಡಿಸಿದರು.

ಯುವಕರ ಭವಿಷ್ಯವನ್ನು ಹಾಳು ಮಾಡಿದವರಿಗೆ ರಕ್ಷಣೆ ನೀಡುತ್ತಿರುವ ಸರ್ಕಾರ, ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆಯೇ ಬಲಪ್ರಯೋಗ ನಡೆಸುತ್ತಿದೆ ಎಂದು ಆರೋಪಿಸಿದರು.

ನೀಟ್ ಅಕ್ರಮದಿಂದಾಗಿ ಸುಮಾರು 21ಕ್ಕೂ ಹೆಚ್ಚು ನಿರುದ್ಯೋಗಿ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವರು ಕನಿಷ್ಠ ಸಮಾಧಾನಪಡಿಸುವ ಕಾರ್ಯವನ್ನೂ ಮಾಡಿಲ್ಲ. 'ಸಂಸತ್ ಚಲೋ' ಮಾದರಿಯಲ್ಲಿ ಹೋರಾಟ ನಡೆಸಿದವರ ಮೇಲೆ ಲಾಠಿಚಾರ್ಜ್ ನಡೆಸಿ ದೌರ್ಜನ್ಯ ಎಸಗಲಾಗಿದೆ. ಈ ಹಿಂದೆ 2G ಸ್ಪೆಕ್ಟ್ರಮ್ ಹಗರಣದ ನೆಪದಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ಕೆಳಗಿಳಿಸಿದವರು, ಇಂದು ನೀಟ್ ಅಕ್ರಮ, ಮಣಿಪುರ ಹಿಂಸಾಚಾರ ಹಾಗೂ ನಿರುದ್ಯೋಗ ಸಮಸ್ಯೆಯ ನಡುವೆಯೂ ಜಾರಿಕೊಳ್ಳುತ್ತಿರುವುದು ಅತ್ಯಂತ ಅಸಹ್ಯಕರ ಎಂದು ಕಿಡಿಕಾರಿದರು.

"ಸಂಸತ್ತಿನತ್ತ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ 20 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಲಾಠಿ ಮತ್ತು ಅಶ್ರುವಾಯು ಪ್ರಯೋಗ ಮಾಡಿರುವುದು ಅತ್ಯಂತ ಖಂಡನೀಯ. ನಮ್ಮ ಯುವಕರ ಕನಸುಗಳ ಮೇಲೆಯೇ ಲಾಠಿ ಪ್ರಹಾರ ನಡೆಸಲಾಗಿದೆ. ಆದರೆ, ಅವರ ಭವಿಷ್ಯವನ್ನು ನಾಶಪಡಿಸಿದವರಿಗೆ ಮಾತ್ರ ಸರ್ಕಾರ ರಕ್ಷಣೆ ನೀಡುತ್ತಿದೆ" ಎಂದು ಕಿಡಿಕಾರಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಪ್ರತಿಭಟನೆಗಳು ಪ್ರತ್ಯೇಕ ಘಟನೆಗಳಲ್ಲ.


ಲಡಾಖ್‌ನಲ್ಲಿ ಪರಿಸರ ಮತ್ತು ಶಿಕ್ಷಣಕ್ಕಾಗಿ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರಂತಹ ಮಹಾನ್ ವ್ಯಕ್ತಿಯ ಕೂಗಿಗೂ ಸ್ಪಂದಿಸದ ಈ ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನವೂ ಇಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ 'ಗೂಂಡಾಗಿರಿ' ಮಾದರಿಯ ಆಡಳಿತ ನಡೆಸಲಾಗುತ್ತಿದೆ ಎಂದು ಸದ್ಗುರು ಆಪಾದಿಸಿದರು. ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಪಕ್ಷಾತೀತ ಹೋರಾಟ ಅಗತ್ಯ ಎಂದ ಸದ್ಗುರು, ಎನ್‌ಎಸ್‌ಯುಐ (NSUI) ಜೊತೆಗೆ ಎಬಿವಿಪಿ (ABVP) ಸೇರಿದಂತೆ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ನೆಲ್ಸನ್ ಮಂಡೇಲಾ, ಭಗತ್ ಸಿಂಗ್, ಅಂಬೇಡ್ಕರ್ ಹಾಗೂ ಜವಾಹರ್ ಲಾಲ್ ನೆಹರೂ ಅವರ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಜೆಪಿ ನಾರಾಯಣ್ ಅವರ ಕಾಲದ ಮಾದರಿಯಲ್ಲಿ ಬೃಹತ್ ದೇಶವ್ಯಾಪಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.


ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ನೀಟ್ (NEET) ಪರೀಕ್ಷೆ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೇಂದ್ರ ಸರ್ಕಾರದ ಸಂವೇದನಾ ರಹಿತ ಧೋರಣೆಯನ್ನು ಖಂಡಿಸಿ ಮಾತನಾಡಿದರು.

"ಸಂಸತ್ತಿನತ್ತ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ 20 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಲಾಠಿ ಮತ್ತು ಅಶ್ರುವಾಯು ಪ್ರಯೋಗ ಮಾಡಿರುವುದು ಅತ್ಯಂತ ಖಂಡನೀಯ. ನಮ್ಮ ಯುವಕರ ಕನಸುಗಳ ಮೇಲೆಯೇ ಲಾಠಿ ಪ್ರಹಾರ ನಡೆಸಲಾಗಿದೆ. ಆದರೆ, ಅವರ ಭವಿಷ್ಯವನ್ನು ನಾಶಪಡಿಸಿದವರಿಗೆ ಮಾತ್ರ ಸರ್ಕಾರ ರಕ್ಷಣೆ ನೀಡುತ್ತಿದೆ" ಎಂದು ಕಿಡಿಕಾರಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಪ್ರತಿಭಟನೆಗಳು ಪ್ರತ್ಯೇಕ ಘಟನೆಗಳಲ್ಲ.

"ಪ್ರತಿ ಅಕ್ರಮ, ಪ್ರತಿ ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವಲ್ಲಿ ಉಂಟಾಗುವ ಪ್ರತಿ ವಿಳಂಬವು ವಿದ್ಯಾರ್ಥಿಗಳ ವೃತ್ತಿಜೀವನವನ್ನಷ್ಟೇ ಅಲ್ಲ, ದೇಶದ ಸಂಸ್ಥೆಗಳ ಮೇಲಿನ ನಂಬಿಕೆಯನ್ನೂ ಕುಸಿಯುವಂತೆ ಮಾಡುತ್ತದೆ. ನಿರಾಶೆಯಿಂದ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿರುವ ವರದಿಗಳು ಬರುತ್ತಿರುವಾಗ ಸರ್ಕಾರ ನಿರ್ಲಕ್ಷ್ಯವಲ್ಲ, ಸಹಾನುಭೂತಿ ಮತ್ತು ಹೊಣೆಗಾರಿಕೆ ಪ್ರದರ್ಶಿಸಬೇಕು" ಎಂದು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಅಲ್ಲದೆ, "ನೀಟ್ ಪರೀಕ್ಷಾ ಹಗರಣದಿಂದ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯ ಸಿಗುವಂತೆ ಪಾರದರ್ಶಕ ಹಾಗೂ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳಬೇಕು. ಈ ಪ್ರಜಾಪ್ರಭುತ್ವದ ಹೋರಾಟದಲ್ಲಿ ನೀಟ್ ಪರೀಕ್ಷಾರ್ಥಿಗಳ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಹಾಗೂ ಯುವಕರು ದೃಢವಾಗಿ ನಿಲ್ಲಬೇಕು" ಎಂದರು.

ಪ್ರತಿಭಟನೆಯಲ್ಲಿ ಕಲಸೇ ಚಂದ್ರಪ್ಪ. ಐ.ಎನ್. ಸುರೇಶ್'ಬಾಬು, ಮಂಡಗಳಲೆ‌ ಗಣಪತಿ, ಗ್ಯಾರಂಟಿ ಯೋಜನೆಗಳ ಸದಸ್ಯ ಸೈಯ್ಯದ್ ತಾಹೀರ್ (ಕೋಳಿ ತಾಹೀರ್), ಎಲ್ ಚಂದ್ರಪ್ಪ. ಲಲಿತಮ್ಮ. ವೀಣಾ ನಾಯ್ಡು.ಗಣಪತಿ ಮಂಡಗಳಲೆ. ರವಿ ಲಿಂಗನಮಕ್ಕಿ, ಅನ್ವರ್ ಭಾಷಾ, ಕಬೀರ್ ಚಿಪ್ಲಿ, ತೌಫಿಕ್,  ಜ್ಯೋತಿ ಕೋವಿ, ತಬ್ರೆಜ್. ಕಿರಣ್ ದೊಡ್ಮನೆ, ಆರ್ಥರ್ ಗೋಮ್ಸ್, ವಿಲ್ಸನ್ ಗೋನ್ಸಾಲ್ವೀಸ್, ಮೈಕಲ್‌ ಜೆ. ಡಿಸೋ, ಭೀಮನೇರಿ ಆನಂದ, ಸೇರಿದಂತೆ ಮೊದಲಾದವರು ಇದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ