ದಿನೇಶ ಶಿರವಾಳ ಹುಟ್ಟುಹಬ್ಬ ಸಾಮಾಜಿಕ ಕಾರ್ಯಕ್ರಮವಾಗಿ ಆಚರಣೆ-ಸಾಗರ ತಾ. ರೈತ ಸಂಘದ ಅಧ್ಯಕ್ಷ ಡಾ. ರಾಮಚಂದ್ರ

ದಿನೇಶ ಶಿರವಾಳ ಹುಟ್ಟುಹಬ್ಬ ಸಾಮಾಜಿಕ ಕಾರ್ಯಕ್ರಮವಾಗಿ ಆಚರಣೆ-ಸಾಗರ ತಾ. ರೈತ ಸಂಘದ ಅಧ್ಯಕ್ಷ ಡಾ. ರಾಮಚಂದ್ರ


*ಹುಟ್ಟುಹಬ್ಬದ ಆಚರಣೆ ವೈಯಕ್ತಿಕ ಇಷ್ಟವಿಲ್ಲ. ರಕ್ತದಾನದಂತಹ ಶ್ರೇಷ್ಟ ಕೆಲಸ ಜನತೆಗೆ ಮಾದರಿಯಾಗಲಿ-ದಿನೇಶ್ ಶಿರವಾಳ*


ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ, ಸಾಗರ ತಾ. ಶಿವಮೊಗ್ಗ ಜಿಲ್ಲೆ ಮತ್ತು ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರ (ಉಪವಿಭಾಗೀಯ ಆಸ್ಪತ್ರೆ) ಇವರ ಸಂಯುಕ್ತ ಆಶ್ರಯದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ  ದಿನೇಶ್ ಶಿರವಾಳ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಗರ ಗಾಂಧಿ ಮೈದಾನದಲ್ಲಿ ಆಯೋಜನೆ ಮಾಡಿದ ರಕ್ತದಾನ ಶಿಬಿರದಲ್ಲಿ ಸಾಗರ ತಾಲ್ಲೂಕಿನ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.



ಸಭೆಯನ್ನು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಉದ್ಘಾಟಿಸಿದರು. ಗ್ಯಾರಂಟಿ ಸಮಿತಿ‌ ಅಧ್ಯಕ್ಷ ಬಿ.ಆರ್. ಜಯಂತ್ ಮತ್ತು ಡಾ. ರಾಜನಂದಿನಿ ಕಾಗೋಡುರವರು ಹಾಗೂ ಅನೇಕ ಪ್ರಮುಖರು ಭಾಗವಹಿಸಿ ಯಶಸ್ವಿಗೊಳಿಸಿದರು.


ದಿನೇಶ ಶಿರವಾಳ ಅವರಿಗೆ ರೈತ ಸಂಘದ ಕಾರ್ಯಕರ್ತರು, ಹಿತೈಷಿಗಳು ಹಾರ ಹಾಕಿ ಅಭಿನಂದಿಸಿದರು.

ಸಾಧಕರಿಗೆ ಸನ್ಮಾನ ಮಾಡಲಾಯಿತು. ರಕ್ತದಾನಿಗಳಿಗೆ ಪ್ರಮಾಪತ್ರ ನೀಡಲಾಯಿತು. ಎತ್ತಿನಗಾಡಿ ಮೆರವಣಿಗೆ ವಿಶೇಷವಾಗಿತ್ತು.

ಸುಮಾರು 50 ಯೂನಿಟ್'ಗಳಷ್ಟು ರಕ್ತ ಸಂಗ್ರಹಣೆ ಆಗಿದ್ದು ರೈತ ಸಂಘದ ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ