ಬ್ಯಾಂಕ್ ಆಫ್ ಬರೋಡ, ಸಾಗರ ಜೋಗ ರಸ್ತೆ ಶಾಖೆ ಕಚೇರಿ ಎದುರು ನ್ಯಾಯಕ್ಕಾಗಿ ಉಪವಾಸ ಪ್ರತಿಭಟನೆಯ ಎಚ್ಚರಿಕೆ ನೀಡಿದ ಕೆಆರ್'ಎಸ್ ಪಕ್ಷದ ವೀರಭದ್ರ ಎಸ್.ಎಸ್.*

ಬ್ಯಾಂಕ್ ಆಫ್ ಬರೋಡ, ಸಾಗರ ಜೋಗ ರಸ್ತೆ ಶಾಖೆ ಕಚೇರಿ ಎದುರು ನ್ಯಾಯಕ್ಕಾಗಿ ಉಪವಾಸ ಪ್ರತಿಭಟನೆಯ ಎಚ್ಚರಿಕೆ ನೀಡಿದ ಕೆಆರ್'ಎಸ್ ಪಕ್ಷದ ವೀರಭದ್ರ ಎಸ್.ಎಸ್.



ಸಾಲಕ್ಕೆ ಅರ್ಜಿ ಹಾಕಿದ ಗ್ರಾಹಕನಿಗೆ ಬ್ಯಾಂಕಿನಿಂದ 2016 ರಲ್ಲಿ 2 ಲಕ್ಷ ಸಾಲ ಮಾಡಿದ್ದೀರಾ ಎಂದು ಸುಳ್ಳು ಆರೋಪ ಹೊರಿಸಿದ ಬ್ಯಾಂಕ್

ಸಾಗರ ; ಹೈನುಗಾರಿಕೆ ಉದ್ಯಮಕ್ಕೆ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ಕಚೇರಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ ಗ್ರಾಹಕ ಎಸ್.ಎಸ್. ವೀರಭದ್ರ 2016ರಲ್ಲಿ 2 ಲಕ್ಷ ಸಾಲಮಾಡಿದ್ದೀರಾ ಎಂದು ಸುಳ್ಳು ಆರೋಪ ಸಹಿತ ಸಾಲ ನೀಡದೆ ವಂಚಿಸಿದ್ದಾರೆ ಎಂದು ಕೆ.ಆರ್.ಎಸ್. ಪಕ್ಷದ ಸಾಗರ ತಾಲ್ಲೂಕು ಅಧ್ಯಕ್ಷ ವೀರಭದ್ರ ಎಸ್.ಎಸ್ ದೂರಿದ್ದಾರೆ.

ಹೈನುಗಾರಿಕೆ ಉದ್ಯಮಕ್ಕೆ 2024-25ನೇ ಸಾಲಿನ ಬಂಡವಾಳ ಹೂಡಿಕೆ ಸಹಾಯಧನ ಮಂಜೂರಾತಿ ಮಾಡಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಪಂಚಾಯಿತಿ, ಶಿವಮೊಗ್ಗ ಉಪನಿರ್ದೇಶಕರು, ಸಾಗರದ ಜೋಗ ರಸ್ತೆಯ ಬ್ಯಾಂಕ್ ಆಫ್ ಬರೋಡ, ವ್ಯವಸ್ಥಾಪಕರಿಗೆ ನವಂಬರ್ 2025 ರಂದು ಉಲ್ಲೇಖ ಸಹಿತ ಪತ್ರ ಬರೆದಿದ್ದರೂ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಉದ್ದೇಶಪೂರ್ವಕ ಸುಳ್ಳು ನೆಪ ಹೇಳುವ ಮೂಲಕ ಅನುಷ್ಠಾನ ಮಾಡದಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

2016 ರಲ್ಲಿ ಯಾವುದೇ ಬ್ಯಾಂಕುಗಳಲ್ಲಿ ಖಾತೆಯನ್ನೇ ಹೊಂದಿರದ ನನ್ನ ಹೆಸರಿಗೆ 2ಲಕ್ಷ ರೂ.ಗಳ ಸಾಲ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ವ್ಯವಸ್ಥಾಪಕರು ಕೇವಲ ಬಾಯಿಮಾತಿನಲ್ಲಿ ಸಾಲವಿದೆ ಎಂದು ಹೇಳುವ ಜೊತೆಗೆ ಲಿಖಿತವಾಗಿ 2 ಲಕ್ಷ ರೂಗಳ ಸಾಲ ವೀರಭಧ್ರಪ್ಪ ಬಿನ್ ಶಂಕ್ರಪ್ಪ ಮಾಡಿದ್ದಾರೆ ಎಂದು ನೀಡಿದ್ದಾರೆ ಎಂದರು.

ಹೈನುಗಾರಿಕೆ ಸಾಲಕ್ಕೆ ಸಲ್ಲಿಸಿರುವ ಅರ್ಜಿಯ ಕುರಿತು ಪ್ರಕ್ರಿಯೆ ಆರಂಭಕ್ಕೂ ಪೂರ್ವದಲ್ಲಿ ಬ್ಯಾಂಕಿನ ವ್ಯವಸ್ಥಾಪಕರು ಸಿಬಿಲ್ ಚೆಕ್ ಮಾಡುವ ನೆಪದಲ್ಲಿ ಸಿಬಿಲ್ ಸ್ಕೋರ್ ಸಾಲ ನೀಡುವಷ್ಟು ಇಲ್ಲ ಎಂದು ತಿಳಿಸಿದ್ದಾರೆ. ಖಾಸಗಿ ಸೈಬರ್‌ನಲ್ಲಿ ನೀವು ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ನಮ್ಮನ್ನು ಬ್ಯಾಂಕಿನಿಂದ ಹೇಳಿ ಕಳಿಸಿದ್ದರು.

ಸೈಬರ್‌ಸೆಂಟರ್‌ನಲ್ಲಿ ಸಿಬಿಲ್ ಸ್ಕೋರ್ ಪ್ರಿಂಟ್ ಕಾಪಿ ಪಡೆದುಕೊಂಡಾಗ ವೀರಭದ್ರ ಎಸ್.ಎಸ್. ಹೆಸರಿಗೆ 750 ಸಿಬಿಲ್ ಸ್ಕೋರ್  ಪ್ರಕಟವಾಗಿದೆ. ಈ ದಾಖಲೆಯನ್ನು ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ವ್ಯವಸ್ಥಾಪಕರಿಗೆ ತೋರಿಸಿದರು. ಒಪ್ಪಲಿಲ್ಲ.ಬದಲಾಗಿ 2 ಲಕ್ಷ ಸಾಲವಿದೆ ಎಂಬ ನೆಪವನ್ನೇ ಪುರುಚ್ಚರಿಸಿದ್ದಾರೆ ಎಂದು ದೂರಿದರು.

ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ವ್ಯವಸ್ಥಾಪಕರ ವರ್ತನೆ ಹಾಗೂ ಇಲ್ಲದ ಸಾಲ ಇದೆ ಎಂದು ನೀಡಿರುವ ಪತ್ರ ಸಮೇತ ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ರೀಜನಲ್ ಮ್ಯಾನೇಜರ್ ಅವರಿಗೂ ಹಾಗೂ ಆರ್‌ಬಿಐ ನವರಿಗೂ ದೂರು ಸಲ್ಲಿಸಿದ್ದೇವೆ ಎಂದರು.

ಆರ್‌ಬಿಐ ನಮ್ಮ ದೂರು ಸ್ವೀಕರಿಸಿ ಲಿಖಿತವಾಗಿ ಪ್ರತಿಕ್ರಿಯಿಸಿ 22 ಲಕ್ಷ ಸಾಲ ನಿಮ್ಮ ಹೆಸರಿಗೆ ಇದೆ ಎಂದು ಲಿಖಿತ ಉತ್ತರ ನೀಡಿದ್ದಾರೆ. ಹೀಗೆ ಸಾಲವಿದೆ ಎಂಬ ಪತ್ರವನ್ನು ನಮ್ಮ ಮನೆಯಲ್ಲಿ ನೋಡಿದ ನಂತರ ಸಾಲಗಾರ ಮನೆಹಾಳ ಎಂದು ಮನೆಯಿಂದ ಹೊರಗೆ ಹಾಕಲು ಮುಂದಾಗಿದ್ದಾರೆ. ಇಲ್ಲದ ಸಾಲದ ಕಥೆ ನನಗೆ ವ್ಯಥೆಯಾಗಿದೆ ಎಂದು ಅಳಲು ತೋಡಿಕೊಂಡರು.

22 ಲಕ್ಷ ಸಾಲವಿದೆ ಎಂದು ಆರ್‌ಬಿಐ ಬರೆದ ಪತ್ರ ಮತ್ತು ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ವ್ಯವಸ್ಥಾಪಕರು ನೀಡಿದ 2 ಲಕ್ಷ ರೂಗಳ ಸಾಲವಿದೆ ಎಂಬ ಪತ್ರಗಳನ್ನು ಪುನಃ ಆರ್‌ಬಿಐಗೆ ಸಲ್ಲಿಸಿ ಸೂಕ್ತ ಸಾಲಗಳ ಕುರಿತು ಅಧಿಕೃತ ದಾಖಲೆಗಳನ್ನು ನೀಡುವಂತೆ ದೂರು ಸಲ್ಲಿಸಿದಾಗ ಆರ್‌ಬಿಐ ಪ್ರತಿಕ್ರಿಯಿಸಿ  ನಿಮಗೆ ನೀಡಿದ 22 ಲಕ್ಷ ಸಾಲವಿದೆ ಎಂಬ ಪತ್ರ ಮುದ್ರಣದ ತಪ್ಪಿನಿಂದ ಆಗಿದೆ ಎಂಬ ಸ್ಪಷ್ಟೀಕರಣ ನೀಡಿದೆ ಎಂದು ಮಾಹಿತಿ ನೀಡಿದರು.

ನಮಗೆ ಸಹಾಯಧನದಲ್ಲಿ ಹೈನುಗಾರಿಕೆಗೆ ಪಶು ಇಲಾಖೆಯಿಂದ ಶಿಪಾರಸ್ಸುಗೊಂಡು ಮಂಜೂರಾಗಿರುವುದು 30 ಸಾವಿರ ರೂಗಳ ಸಾಲ ನೀಡಲು ಒಪ್ಪಿಗೆ ಅಥವಾ ನಿರಾಕರಿಸುವ ಬದಲಿಗೆ ಸುಳ್ಳು ಹೇಳುವುದು ವರ್ಷಗಳಿಂದ ಸತಾಯಿಸುವ ಸಾಗರದ ಜೋಗ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಶಾಖಾ ಕಚೇರಿ ವಿರುದ್ಧ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದೇವೆ ಎಂದು ಸಂತ್ರಸ್ಥ ಹಾಗೂ ಕೆ.ಆರ್.ಎಸ್. ಪಕ್ಷದ ಸಾಗರ ತಾಲ್ಲೂಕು ಅಧ್ಯಕ್ಷ ವೀರಭದ್ರ ಎಸ್.ಎಸ್ ಘೋಷಿಸಿದ್ದಾರೆ.

ಸಾಗರದ ಜೋಗ ರಸ್ತೆಯ ಬ್ಯಾಂಕ್ ಆಫ್ ಬರೋಡ,ಶಾಖಾ ಕಚೇರಿಯಲ್ಲಿ ಸ್ಥಳಿಯ ಭಾಷೆ ಗೊತ್ತಿಲ್ಲದ ಅಧಿಕಾರಿಗಳಿಂದ ಸ್ಥಳಿಯ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತದೆ. ಗ್ರಾಹಕರಿಗೆ ಕನಿಷ್ಠ ಗೌರವ ಹಾಗೂ ನ್ಯಾಯ ದೊರೆಯುತ್ತಿಲ್ಲ, ಬ್ಯಾಂಕಿನ ಸಾಲ ನೀತಿ ಪಾಲಿಸುತ್ತಿಲ್ಲ. ಆರ್‌ಬಿಐ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಬ್ಯಾಂಕುಗಳ ಅಧಿಕಾರಿ,ಸಿಬ್ಬಂದಿಗಳ ಅನುಚಿತ ವರ್ತನೆಗಳ ವಿರುದ್ಧ ಕ್ರಮವಹಿಸಬೇಕು ಎಂದು ಆರ್‌ಬಿಐ ಗವರ್ನರ್'ರ್‌ಗೆ ದೂರು ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಕೆ.ಆರ್‌ಎಸ್. ಪಕ್ಷದ ನಾಗಭೂಷಣ್, ಮಂಜುನಾಥ, ರಾಮಪ್ಪ, ಕಾಶೀನಾಥ ಎಂ.ಟಿ., ಶಿವಕುಮಾರ್ ಮುಂತಾದವರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ