ಲಡಾಖ್‌ನ ಸಿಂಹ' - ಕಾರ್ಗಿಲ್ ವೀರ ಕರ್ನಲ್ ಸೋನಮ್ ವಾಂಗ್ಚುಕ್
ಲಡಾಖ್‌ನ ಸಿಂಹ' - ಕಾರ್ಗಿಲ್ ವೀರ ಕರ್ನಲ್ ಸೋನಮ್ ವಾಂಗ್ಚುಕ್
(ಮೊದಲಿಗೆ ಒಂದು ಸ್ಪಷ್ಟನೆ ; ಇತ್ತೀಚೆಗೆ ಪರಿಸರ ರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಹೋರಾಟಗಾರ 'ಸೋನಮ್ ವಾಂಗ್ಚುಕ್' ಅವರಿಗೂ, ಈ ವೀರ ಯೋಧನಿಗೂ ಸಂಬಂಧವಿಲ್ಲ. ಇವರಿಬ್ಬರೂ ಬೇರೆ ಬೇರೆ. ಇದು ದೇಶಕ್ಕಾಗಿ ಶತ್ರುಗಳೆದುರು ಗುಂಡೆದೆಯೊಡ್ಡಿ ನಿಂತ ಕಾರ್ಗಿಲ್ ಯುದ್ಧದ ನಿಜವಾದ ಹೀರೋನ ಕಥೆ).
*ಹಿಮದ ಮೇಲಿನ ಯುದ್ಧ (ಮೇ 1999):*
ಅದು ಕಾರ್ಗಿಲ್ ಯುದ್ಧದ ಸಮಯ. 18,000 ಅಡಿ ಎತ್ತರದ 'ಚೋರ್ಬಾಟ್ ಲಾ' (Chorbat La) ಪರ್ವತವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ಲಡಾಖ್ ಸ್ಕೌಟ್ಸ್‌ನ ಮೇಜರ್ (ನಂತರ ಕರ್ನಲ್) ಸೋನಮ್ ವಾಂಗ್ಚುಕ್ ಅವರ ಹೆಗಲೇರಿತು. ಶತ್ರುಗಳು ಮೊದಲೇ ಬೆಟ್ಟದ ಮೇಲಿಂದ ಹೊಂಚು ಹಾಕಿ ಕುಳಿತಿದ್ದರು.
*ಸಿಡಿಲಮರಿ ಪ್ರತಿದಾಳಿ:*
ದಟ್ಟವಾದ ಹಿಮ, ಮೈನಸ್ ಡಿಗ್ರಿ ಚಳಿ! ಬೆಟ್ಟ ಹತ್ತುತ್ತಿದ್ದ ವಾಂಗ್ಚುಕ್ ಅವರ ಪಡೆಯ ಮೇಲೆ ಪಾಕಿಸ್ತಾನಿ ಶತ್ರುಗಳು ಗುಂಡಿನ ಸುರಿಮಳೆಗರೆದರು. ಪಡೆಯಲ್ಲಿದ್ದ ಒಬ್ಬ ಯೋಧ ಹುತಾತ್ಮನಾದ. ಆದರೆ ವಾಂಗ್ಚುಕ್ ಎದೆಗುಂದಲಿಲ್ಲ. ತಮ್ಮ ಪ್ರಾಣದ ಹಂಗು ತೊರೆದು, ಬೆರಳೆಣಿಕೆಯ ಸೈನಿಕರೊಂದಿಗೆ ಶತ್ರುಗಳ ಮೇಲೆ ಸಿಡಿಲಮರಿಯಂತೆ ಎರಗಿದರು.
*ಅಪ್ರತಿಮ ವಿಜಯ ಮತ್ತು ಗೌರವ:*
ತಮ್ಮ ನಾಯಕನ ದಿಟ್ಟತನ ಕಂಡು ಸ್ಫೂರ್ತಿಗೊಂಡ ಸೈನಿಕರು ಮುನ್ನುಗ್ಗಿ ಶತ್ರುಗಳನ್ನು ಸದೆಬಡಿದರು ಮತ್ತು ಆ ಆಯಕಟ್ಟಿನ ಪರ್ವತವನ್ನು ಭಾರತದ ಸುಪರ್ದಿಗೆ ತಂದರು. ಈ ಅಸಾಧಾರಣ ಶೌರ್ಯಕ್ಕಾಗಿ ಭಾರತ ಸರ್ಕಾರ ಅವರಿಗೆ ದೇಶದ 2ನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಮಹಾ ವೀರ ಚಕ್ರ' ನೀಡಿ ಗೌರವಿಸಿತು. ಅವರ ಈ ಸಾಹಸದ ನೆನಪಿಗಾಗಿ ಇಂದಿಗೂ ಆ ಭಾಗದ ಮಿಲಿಟರಿ ಪೋಸ್ಟ್‌ಗಳಿಗೆ 'ಸೋನಮ್ 1' ಮತ್ತು 'ಸೋನಮ್ 2' ಎಂದು ಹೆಸರಿಡಲಾಗಿದೆ. ಜನ ಪ್ರೀತಿಯಿಂದ ಇವರನ್ನು " *ಲಡಾಖ್‌ನ ಸಿಂಹ* " ( *Lion of Ladakh* ) ಎಂದು ಕರೆಯುತ್ತಾರೆ.
ವಿದಾಯ:
ದುಃಖದ ಸಂಗತಿಯೆಂದರೆ, ಇತ್ತೀಚೆಗಷ್ಟೇ (ಏಪ್ರಿಲ್ 10, 2026 ರಂದು) ದೇಶದ ಈ ಹೆಮ್ಮೆಯ ಪುತ್ರ ತಮ್ಮ 61ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಶಸ್ತ್ರ ಹಿಡಿದು ಗಡಿ ಕಾಯ್ದ ಈ ನಿಜವಾದ " *ಲಡಾಖ್‌ನ ಸಿಂಹ* "ನಿಗೆ ನಮ್ಮದೊಂದು ಸಲಾಂ! 🙏
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment