ಫಲಾಪೇಕ್ಷೆ ಇಲ್ಲದೆ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಅಪರೂಪದ ಸಂಘ ಸಂಸ್ಥೆಗಳಲ್ಲಿ ನಮ್ಮಸಾಗರದ ಹೆಮ್ಮೆಯಾದ ನೇತಾಜಿ ಸುಭಾಶ್'ಚಂದ್ರಭೋಸ್ ಯುವ ಟ್ರಸ್ಟ್ (ರಿ.), ಸಾಗರ
ಫಲಾಪೇಕ್ಷೆ ಇಲ್ಲದೆ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಅಪರೂಪದ ಸಂಘ ಸಂಸ್ಥೆಗಳಲ್ಲಿ ನಮ್ಮಸಾಗರದ ಹೆಮ್ಮೆಯಾದ ನೇತಾಜಿ ಸುಭಾಶ್'ಚಂದ್ರಭೋಸ್ ಯುವ ಟ್ರಸ್ಟ್ (ರಿ.), ಸಾಗರ
ಸಾಗರ ; ಗಿಡ ಮರಗಳು ಹೆಚ್ಚಾದಂತೆಲ್ಲ ನಾವು ಉಸಿರಾಡುವ ಗಾಳಿಗೆ ಆಮ್ಲಜನಕ ಹೆಚ್ಚಾಗಿ ಸೇರಿಕೊಳ್ಳುತ್ತದೆ. ಇದು ನಮ್ಮೆಲ್ಲರ ಆರೋಗ್ಯಕ್ಕೆ ಉಪಯೋಗವಾಗುತ್ತಿದೆ ಆದರೆ ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಕಾಡು ಕಾಂಕ್ರೀಟ್ ನಾಡಾಗುತ್ತಿದೆ. ಇವೆಲ್ಲದರ ನಡುವೆಯೂ ಸಾಗರದಲ್ಲಿ ಕೆಲವು ಸಂಘ ಸಂಸ್ಥೆಗಳು ಯಾವುದೇ ಪಲಾಪೇಕ್ಷೆ ಇಲ್ಲದೆ ಗಿಡ ಮರಗಳನ್ನು ನೆಡುವ ಕಾಯಕ ಸದ್ದಿಲ್ಲದೇ ಮಾಡುತ್ತಿವೆ. ಅದರಲ್ಲಿ ಸಾಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವ ಟ್ರಸ್ಟ್ ಹಾಗೂ ಯೋಧ ನಮನ ಬಳಗ ,ಸಾಗರ ತಾಲೂಕು ವೀರಶೈವ ಯುವ ವೇದಿಕೆ. ಹಲವು ಕಡೆಗಳಲ್ಲಿ ಗಿಡ ನೆಡುವ ಕೆಲಸದ ಮೂಲಕ ಸಾಗರದಲ್ಲಿ ತನ್ನದೇ ಆದ ಸೇವೆ ಮಾಡುತ್ತಿವೆ .
ಇದೇ ಜುಲೈ 23 ರಂದು ಗುರುವಾರ ಸಾಗರದ ಗಾಂಧಿನಗರದ ಅಗ್ರಹಾರದ ಸಮೀಪ ದತ್ತ ಮಂದಿರದ ಹಿಂಭಾಗದ ಉದ್ಯಾನವನದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಸುಮಾರು ನೂರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ನೆಡುವ ಮೂಲಕ ತಮ್ಮ ಕೆಲಸವನ್ನು ಮುಂದುವರಿಸಿತು.
ಪಾರಿಜಾತ, ಪತ್ರೆ ಸಂಪಿಗೆ,ಮತ್ತು ದಾಸವಾಳ ಸೇರಿದಂತೆ ವಿವಿಧ ಬಗೆ ಬಗೆಯ ಹೂವಿನ ಗಿಡಗಳನ್ನು ನೆಡಲಾಯಿತು ಈ ಸಂದರ್ಭದಲ್ಲಿ ಯೋಧ ನಮನ ಬಳಗ, ನೇತಾಜಿ ಸುಭಾಷ್ ಚಂದ್ರ ಬೋಸ್ ಯುವ ಟ್ರಸ್ಟ್ ಹಾಗೂ ತಾಲೂಕು ವೀರಶೈವ ಯುವ ವೇದಿಕೆಯ ಸದಸ್ಯರನ್ನೊಳಗೊಂಡ ಸುಭಾಷ್ ಕೌತಳ್ಳಿ,ಕಾಂತೇಶ್, ಚಂದ್ರಶೇಖರ್, ಅನಿಲ್ ಕುಮಾರ್ ಬರದವಳ್ಳಿ ನಟರಾಜ್ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಈಗಾಗಲೇ ಗಾಂಧಿನಗರ ವಿಜಯನಗರ ಶುಭಾಷ್ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸುಭಾಷ್ ಕೌತಳ್ಳಿ ನೇತೃತ್ವದ ಈ ತಂಡ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತ ಬಂದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಸಾಗರದ ಹಲವಾರು ಕಡೆ ಇವರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸೋಣ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment