ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ, ಶಿವಮೊಗ್ಗ ಜಿಲ್ಲೆ ಈ ಸಂಘಟನೆಯ ಸಾಗರ ನಗರ ಅಧ್ಯಕ್ಷರಾಗಿ ರಾಜೇಶ್ ಆರ್. ಶೇಟ್
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ, ಶಿವಮೊಗ್ಗ ಜಿಲ್ಲೆ ಈ ಸಂಘಟನೆಯ ಸಾಗರ ನಗರ ಅಧ್ಯಕ್ಷರಾಗಿ ರಾಜೇಶ್ ಆರ್. ಶೇಟ್
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಶಿವಮೊಗ್ಗ ಜಿಲ್ಲೆ ಸಾಗರ ನಗರ ನೂತನ ನಗರ ಅಧ್ಯಕ್ಷರನ್ನಾಗಿ ರಾಜೇಶ್ ಆರ್ ಶೇಟ್ ಇವರನ್ನು ನೇಮಕ ಮಾಡಲಾಗಿದೆ ಇವರು ಈ ಹಿಂದೆ ನಗರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ರಾಜೇಶ್ ಶೇಟ್ ಸರಳ ವ್ಯಕ್ತಿತ್ವದವರಾಗಿದ್ದು, ಸಾಗರ ನಗರದಲ್ಲಿ ಎಲ್ಲೆಂದರಲ್ಲಿ ಪರಿಚಿತರು. ಇವರು ಎಲ್ಲಿಯೂ ಸಹ ತಮ್ಮ ಕೆಲಸವಾಗಲೀ ತಮ್ಮನ್ನು ನಂಬಿ ಬಂದ ಕೆಲಸದವರಿಗಾಗಲೀ ಎಲ್ಲಿಯೂ ನೋಯಿಸಿದ ಉದಾಹರಣೆಗಳು ಇಲ್ಲ. ಬದಲಿಗೆ ಕಾರ್ಮಿಕರ ಬಗ್ಗೆ ಅತೀ ಕಾಳಜಿ ವಹಿಸಿ ಎಲ್ಲರಿಗೂ ನ್ಯಾಯ ಸಿಗಬೇಕೆಂದು ಅಲ್ಲಲ್ಲಿ ಹೇಳಿದ ನೆನಪುಗಳಿದೆ.
ರಾಜೇಶ್ ಶೇಟ್ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ ಅಸಂಘಟಿತ ವರ್ಗದಲ್ಲಿ ಇರುವ ಎಲ್ಲಾ ಸಾಗರ ನಗರದ ಕಾರ್ಮಿಕರನ್ನು ಒಂದುಗೂಡಿಸಿ ಕಾರ್ಮಿಕ ಸಂಘವನ್ನು ಗಟ್ಟಿಗೊಳಿಸಲೆಂದು ಮೂರನೇಕಣ್ಣು ನ್ಯೂಸ್, ಸಾಗರ ಮತ್ತು ಮೀನಿನಹೆಜ್ಜೆ ನ್ಯೂಸ್, ಸಾಗರ ಹಾರೈಸುತ್ತದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment