ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗೃತೆ ವಹಿಸೋಣ-ಅಧ್ಯಕ್ಷ ಗಿರೀಶಕೋವಿ.

ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗೃತೆ ವಹಿಸೋಣ-ಅಧ್ಯಕ್ಷ ಗಿರೀಶಕೋವಿ

ಸಾಗರ : ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗೃತೆ ವಹಿಸೋಣ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಹೊಣೆ ಜೊತೆಗೆ ನಮ್ಮನ್ನು ನಂಬಿಕೊಂಡ ಕುಟುಂಬವನ್ನು ನೋಡಿಕೊಳ್ಳುವ ಹೊಣೆ ನಮ್ಮ ಮೇಲೆ ಇರುತ್ತದೆ ಎನ್ನುವುದನ್ನು ಮರೆಯೋದು ಬೇಡ ಎಂದು ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಿರೀಶ್ ಕೋವಿ ತಿಳಿಸಿದರು.

ಇಲ್ಲಿನ ಗ್ರೀನ್ ಎಂಬೆಸ್ಸಿ ಸಭಾಂಗಣದಲ್ಲಿ ತಾಲ್ಲೂಕು ಕಾರು ಚಾಲಕರ ಮತ್ತು ಮಾಲೀಕರ ಸಂಘ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾರು ಚಾಲಕರು ವiತ್ತು ಮಾಲೀಕರ ಸಂಘ ಅನೇಕ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದೆ. ಇದರ ಜೊತೆಗೆ ಸದಸ್ಯರ ಹಿತಕಾಯುವ ನಿಟ್ಟಿನಲ್ಲಿ ಬೇರೆಬೇರೆ ಯೋಜನೆ ಜಾರಿಗೆ ತಂದಿದೆ. ಮೊದಲು ಚಾಲಕರ ಸುರಕ್ಷತೆ ಬಗ್ಗೆ ಸಂಘ ಗಮನ ಹರಿಸಿದ್ದು, ಸದಸ್ಯರಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ನೂತನವಾಗಿ ಸಂಘದ ಸದಸ್ಯರಾಗಿ ಬಂದವರು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಟಿ.ವಿ.ಪಾಂಡುರಂಗ, ಎಸ್.ಎಂ.ಮಂಜುನಾಥ್, ವಿರೇಶ್, ನಾರಾಯಣ ಪೂಜಾರಿ, ಫ್ರಾನ್ಸಿಸ್ ಡಿಕಾಸ್ಟ, ಸರಸ್ವತಿ ನಾಗರಾಜ್ ಇನ್ನಿತರರು ಹಾಜರಿದ್ದರು.


ನಂತರ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಗಿರೀಶ್ ಕೋವಿ ಪುನರಾಯ್ಕೆಯಾದರು. ಮಹೇಶ್ ಆರ್. (ಉಪಾಧ್ಯಕ್ಷ), ಫ್ರಾನ್ಸಿಸ್ ಡಿಕಾಸ್ಟ (ಪ್ರಧಾನ ಕಾರ್ಯದರ್ಶಿ), ಕೃಷ್ಣಮೂರ್ತಿ ಎ. (ಕೋಶಾಧ್ಯಕ್ಷ), ಜಗದೀಶ್ ಕೆ.ಆರ್. (ಸಹ ಕಾರ್ಯದರ್ಶಿ), ಶರಣ್ ಡಿ., ಪ್ದೀಪ್ ಎಂ.ಈ., ಪ್ರವೀಣ ಕುಮಾರ್, ಇಮ್ರಾನ್, ಪ್ರವೀಣ್ ಎಚ್.ಜೆ., ಸಂತೋಷ್ ಸಿ.ಆರ್. ನಿರ್ದೇಶಕರಾಗಿ ಆಯ್ಕೆಯಾದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ