ಲಯನ್ಸ್ ಕ್ಲಬ್ ಶ್ರೀಗಂಧ ಇವರಿಂದ ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯ

ಲಯನ್ಸ್ ಕ್ಲಬ್ ಶ್ರೀಗಂಧ ಇವರಿಂದ ಬಡ  ವಿದ್ಯಾರ್ಥಿಗಳಿಗೆ ಹಣ ಸಹಾಯ

ಸಾಗರ ; ಲಯನ್ಸ್ ಕ್ಲಬ್, ಸಾಗರ ಶ್ರೀಗಂಧವು ಸಾಗರದ ಖ್ಯಾತ ವಿದ್ಯಾ ಸಂಸ್ಥೆ ಆದ ಸೇವಾ ಸಾಗರದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ಒಂಬತ್ತು ಸಾವಿರ ನೀಡಿ ಸಹಾಯ ಮಾಡಿದೆ. ಇದರಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಹಣವನ್ನು ಮುಖ್ಯ ಶಿಕ್ಷಕಿಗೆ ನೀಡಿ ವಿದ್ಯಾರ್ಥಿಗಳ ಆಯ್ಕೆ ಶಾಲಾ ಸಮಿತಿ ಮಾಡಲು ತಿಳಿಸಲಾಗಿದೆ. 

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮಂಜುಳಾ ನಾಗರಾಜ, ಲಯನ್ಸ್ ಶ್ರೀಗಂಧ ಅಧ್ಯಕ್ಷೆ ಸರಸ್ವತಿ ನಾಗರಾಜ್, ಕಾರ್ಯದರ್ಶಿ ಸವಿತಾ ಮಹಾಬಲೇಶ, ಖಜಾಂಚಿ ಸಹನಾ ವಿನಯ್, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಮೇಜರ್ ನಾಗರಾಜ್, ವಿನಯ್ ಎನ್.ಆರ್, ಮಹಾಬಲೇಶ ಕೆ.ಬಿ. ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ