ಶಿವಮೊಗ್ಗದಿಂದ ಕೊಯಮತ್ತೂರಿಗೆ ಹೋಗುವ ಸಾರಿಗೆ ಸಂಸ್ಥೆಯ ಬಸ್ಸನ್ನು ಸಾಗರ ದಿಂದ ಕೊಯಮತ್ತೂರುವರೆಗೆ ಬಿಡುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ರಾಜ್ಯ ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಪತ್ರ

ಶಿವಮೊಗ್ಗದಿಂದ ಕೊಯಮತ್ತೂರಿಗೆ ಹೋಗುವ ಸಾರಿಗೆ ಸಂಸ್ಥೆಯ ಬಸ್ಸನ್ನು ಸಾಗರ ದಿಂದ ಕೊಯಮತ್ತೂರುವರೆಗೆ ಬಿಡುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ರಾಜ್ಯ ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಪತ್ರ

ಸಾಗರ ; ಸಾಗರ, ಸೊರಬ, ಹೊಸನಗರ ಸಿದ್ದಾಪುರ,ಸುತ್ತಮುತ್ತಲಿನ ರೈತರು ತಮ್ಮ ಕೃಷಿ ಉಪಯುಕ್ತ ಸಲಕರಣೆಗಳನ್ನು ಹೆಚ್ಚಾಗಿ ತಮಿಳುನಾಡು ರಾಜ್ಯದ ಕೊಯಮತ್ತೂರಿನಿಂದ ಖರೀದಿಸಿ ತರುತ್ತಾರೆ. ಅಲ್ಲಿ ದರಗಳು ಅತಿ ಕಡಿಮೆ ಇರುತ್ತವೆ. ಸಾಗರದಿಂದ ನೇರವಾಗಿ ಕೊಯಮತ್ತೂರಿಗೆ ಬಸ್ ಸಂಪರ್ಕ ಇಲ್ಲರುವುದರಿಂದ ಕೊಯಮತ್ತೂರಿನಿಂದ ಕೃಷಿ ಉಪಕರಣಗಳನ್ನು ಸಾಗಾಟ ಮಾಡಲು ತೊಂದರೆಯಾಗುತ್ತಿದೆ.

ಕೊಯಮತ್ತೂರಿನಿಂದ ಶಿವಮೊಗ್ಗದವರೆಗೆ ತಂದು ಅಲ್ಲಿಂದ ಮತ್ತೆ ಬೇರೆ ಬಸ್ಸುಗಳಿಗೆ ಹಾಕುವುದು ಕಷ್ಟವಾಗುದರಿಂದ ಶಿವಮೊಗ್ಗದಿಂದ ಕೊಯಮತ್ತೂರಿಗೆ ಹಾಲಿ 2 ಬಸ್ಸುಗಳು ಪ್ರತಿ ನಿತ್ಯ ಕಾರ್ಯಾಚರಣೆ ಮಾಡುತ್ತಿದ್ದು ಅದರಲ್ಲಿ ಒಂದು ಬಸ್ಸನ್ನು ಸಾಗರದಿಂದ ಹೊರಟು ಶಿವಮೊಗ್ಗ ಮಾರ್ಗವಾಗಿ ನೇರವಾಗಿ ಕೊಯಮತ್ತೂರಿಗೆ ಪುನಃ ಕೊಯಮತ್ತೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸಾಗರಕ್ಕೆ ಬಸ್ ಸಂಪರ್ಕ ಒದಗಿಸಿಕೊಟ್ಟಲ್ಲಿ ಸಾಗರ, ಹೊಸನಗರ, ಸೊರಬ, ಸಿದ್ದಾಪುರ ತಾಲ್ಲೂಕಿನ ರೈತರಿಗೆ ತುಂಬಾ ಅನುಕೂಲವಾಗುತ್ತದೆ.

ಆದ್ದರಿಂದ ಶಿವಮೊಗ್ಗ ಕೊಯಮತ್ತೂರು ಬಸ್ಸನ್ನು ಸಾಗರದಿಂದ ಹೊಡುವ ವ್ಯವಸ್ಥೆ ಮಾಡಬೇಕಾಗಿ ಶಿವಮೊಗ್ಗ ಜಿಲ್ಲಾ ರೈತಸಂಘ ಮತ್ತು ಹಸಿರುಸೇನೆಯ ಪರವಾಗಿ  ಕಳಕಳಿಯ ಮನವಿಯನ್ನು ಅಧಿಕಾರಿ ವರ್ಗಕ್ಕೆ ಮಾಡಲಾಗಿದೆ. 

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ