ರಾಜ್ಯದಲ್ಲಿ ಸರಕಾರಿ ಶಾಲೆಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿತ
ರಾಜ್ಯದಲ್ಲಿ ಸರಕಾರಿ ಶಾಲೆಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿತ
ಬೆಂಗಳೂರು: ರಾಜ್ಯದಲ್ಲಿ ಸರಕಾರಿ ಶಾಲೆಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಹೋಗುತ್ತಿದೆ. 2024-25 ಕ್ಕೆ ಹೋಲಿಸಿದರೆ, ಈ ವರ್ಷ ಸರಕಾರಿ ಶಾಲೆಗೆ 2025-26 ರಲ್ಲಿ 66,037 ವಿದ್ಯಾರ್ಥಿಗಳು ಕಡಿಮೆ ದಾಖಲಾಗಿದ್ದಾರೆ.
ಇದು ಪ್ರಾಥಮಿಕ ಹಾಗೂ ಪದವಿಪೂರ್ವ ದಾಖಲಾತಿಗೆ ಸಂಬಂಧಿಸಿದ ವರದಿಯಾಗಿದೆ. 2023-24 ರಿಂದ 2025-26 ರವರೆಗೆ ಒಟ್ಟು 3 ವರ್ಷದಲ್ಲಿ 2 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ.
ಕೇಂದ್ರ ಸರಕಾರದ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಾಗಿದ್ದು, ಸರಕಾರಿ, ಅನುದಾನಿ ಹಾಗೂ ಖಾಸಗಿ ಶಾಲೆಗಳ ಒಟ್ಟು ದಾಖಲಾತಿ, ಈ ವರ್ಷ 1,17,14,214 ಆಗಿದ್ದ 2025 ರಲ್ಲಿ 1,17,80,251 ಹಾಗೂ 24 ರಲ್ಲಿ 1,19,26,303 ಮಕ್ಕಳು ದಾಖಲಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಸರಕಾರಿ ಶಾಲೆಗಳ ದಾಖಲಾತಿ ಕುಸಿದು, ಖಾಸಗಿ ಶಾಲೆಗಳ ದಾಖಲಾತಿಯಲ್ಲಿ ಏರಿಕೆಯಾಗಿದೆ.
ಕಳೆದ ವರ್ಷ ಬಹಳ ದೊಡ್ಡ ಮಟ್ಟದಲ್ಲಿ ದಾಖಲಾತಿ ಕುಸಿದಿತ್ತು. 24 ಕ್ಕೆ ಹೋಲಿಸಿದರೆ 2025 ರಲ್ಲಿ 1,46,052 ಮಂದಿ ಕಡಿಮೆ ದಾಖಲಾಗಿದ್ದರು. ಗರಿಷ್ಠ ಪ್ರಮಾಣ ಪಿಯುಸಿಯದ್ದಾಗಿದ್ದು, ಪ್ರಾಥಮಿಕಕ್ಕಿಂತಲೂ ಪಿಯುಸಿಯ ದಾಖಲಾತಿ ಹೆಚ್ಚು ಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳ ಸಂಖ್ಯೆ ಹೆಚ್ಚಿದ್ದರು ಖಾಸಗಿ ಶಾಲೆಗಳಿಗೆ ಈ ವರ್ಷ 5861,960 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಸರಕಾರಿ ಶಾಲೆಗಳಿಗೆ 45,39,93 ಹಾಗೂ ಅನುದಾನಿತ ಶಾಲೆಗಳಿಗೆ 13,12,859 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸರಕಾರಿ ಶಾಲೆಗಳಿಗೆ ಹೆಚ್ಚು ದಾಖಲಾತಿ ಆಗಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿಯೇ ಇಂಗ್ಲಿಷ್ ಶಿಕ್ಷಣ , ದ್ವಿಭಾಷಾ ಶಿಕ್ಷಣ ಕೊಡುತ್ತಿದ್ದರೂ, ಹೆಚ್ಚು ಮಕ್ಕಳ ದಾಖಲಾತಿ ಆಗುವಲ್ಲಿ ವಿಫಲ ವಿಫಲವಾಗಿದೆ .
ತಜ್ಞರ ಪ್ರಕಾರ ಸರಕಾರ, ಖಾಲಿ ಇರುವ ಶಿಕ್ಷಕರ ಪೋಸ್ಟ್ ಗಳನ್ನು ಭರ್ತಿ ಮಾಡಬೇಕಿದೆ ಎಂದಿದ್ದಾರೆ. ಆದರೆ ಅಧಿಕಾರಿಗಳ ಪ್ರಕಾರ ಪ್ರಾಥಮಿಕ ಶಿಕ್ಷಣಕ್ಕಿಂತ ಪಿಯುಸಿ ಮಟ್ಟದಲ್ಲಿನ ದಾಖಲಾತಿ ಹೆಚ್ಚು ಕುಸಿದಿದೆ ಆದ್ರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ದಾಖಲಾತಿ ಕುಸಿದಿಲ್ಲ ಮ್ಯಾನೇಜ್ಮೆಂಟ್ ಶಾಲೆಗಳ ದಾಖಲಾತಿಯನ್ನು ಸೇರಿಸಿ ನೋಡಿದಾಗ ಹೆಚ್ಚು ವ್ಯತ್ಯಾಸ ಆಗಿಲ್ಲ ಎಂದು ಸಮರ್ಥಿಸಿದ್ದಾರೆ.
3 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಹಿಂದೆ ಕುಸಿಯುತ್ತಿತ್ತು.ಆದರೆ ಈ ಬಾರಿ ಪ್ರಮಾಣ ಕಡಿಮೆಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕಳೆದ ವರ್ಷ ಇದ್ದ ಪಿಯುಸಿ ದಾಖಲಾತಿ ಪ್ರಮಾಣ 1.37 ರಿಂದ 1.78 ಕ್ಕೆ ಹೆಚ್ಚಾಗಿದೆ ಎಂದಿದ್ದಾರೆ.
ರಾಜ್ಯಮಟ್ಟದ ಪತ್ರಿಕೆಯಿಂದ
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment