ಅಭಿಮಾನವೆನ್ನುವುದು ಅಂತರಾಳದಿಂದ ಬರುತ್ತದೆ, ಅದು ಎಲ್.ಎಮ್. ಹೆಗಡೆ ಗಳಿಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ-ಮಾಜಿ ನಗರಸಭಾ ಸದಸ್ಯ ರವಿಲಿಂಗನಮಕ್ಕಿ
ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಯಿರುವ ಹೆಗಡೆಯವರು ತಮ್ಮ ನಿವೃತ್ತಿ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ-ಸಾ.ತಾ. ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ
ಅಭಿಮಾನವೆನ್ನುವುದು ಅಂತರಾಳದಿಂದ ಬರುತ್ತದೆ, ಅದು ಎಲ್.ಎಮ್. ಹೆಗಡೆ ಗಳಿಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ-ಮಾಜಿ ನಗರಸಭಾ ಸದಸ್ಯ ರವಿಲಿಂಗನಮಕ್ಕಿ
ವಿಜಯನಗರ ನಾಗರಿಕ ವೇದಿಕೆ ಅಧ್ಯಕ್ಷರಾದ ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಮಾಲತೇಶ್, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿರಾದ ಲಕ್ಷ್ಮಣ್'ರಿಂದಲೂ ಹೃದಯಸ್ಪರ್ಶಿ ಮಾತುಗಳು
ಸಾಗರ ; ವ್ಯಕ್ತಿಗಿಂತ ವ್ಯಕ್ತಿತ್ವ ಮೇಲೂ, ಸರಳತೆ ಮತ್ತು ಸಾವಧಾನದಿಂದ ಇದ್ದರೆ ಒಬ್ಬ ಉಪನ್ಯಾಸಕ ಹೇಗೆ ಅಭಿಮಾನಿಗಳನ್ನು ಸಂಪಾದಿಸಬಹುದು ಎಂಬುವುದಕ್ಕೆ ಉಪನ್ಯಾಸಕರಾಗಿ ಇತ್ತಿಚೆಗೆ ನಿವೃತ್ತರಾದ ಎಲ್.ಎಮ್. ಹೆಗಡೆ ಉದಾಹರಣೆ ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಂಕರ ಶಾಸ್ತ್ರೀಯವರು ಹೇಳಿದರು.
ಅವರು ಇಲ್ಲಿನ ಸರಕಾರಿ ಪದವೀಪೂರ್ವ ಕಾಲೇಜಿನ ಉಪನ್ಯಾಸಕರಾದ ಎಲ್. ಎಮ್. ಹೆಗಡೆ ಇವರು ಇತ್ತೀಚೆಗೆ ವಯೋನಿವೃತ್ತಿಯಾದ ನಿಮಿತ್ತ ವಿನಾಯಕ ಕನ್ನಡ ಸಂಘ ವಿಜಯನಗರ ಹಾಗೂ ಉತ್ತರ ಕನ್ನಡ ಕರಾವಳಿ ಶಿಕ್ಷ ಬಳಗ ಮತ್ತು ಗೆಳೆಯರ ಬಳಗದ ಪರವಾಗಿ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಹೀಗೆ ಮಾತನಾಡಿದರು.
ಈ ಕಾರ್ಯಕ್ರಮವು ಎಲ್.ಎಮ್. ಹೆಗಡೆ ಅವರ ಮನೆಯ ಮೇಲಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಅವರು ಮತನಾಡುತ್ತ, ಎಲ್.ಎಂ.ಹೆಗಡೆಯವರು ಘಟ್ಟದ ಕೆಳಗಿನಿಂದ ಬಂದು ಘಟ್ಟದ ಮೇಲಿನ ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕಿನಲ್ಲಿ ತಮ್ಮ ಸಂಘಟನೆ ಮತ್ತು ಕ್ರೀಯಾಶೀಲತೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಗರಕ್ಕೆ ಬರುವ ಹಾಗೂ ಇರುವ ನೌಕರರಿಗೆ ಯಾವುದೇ ಸಂದರ್ಭದಲ್ಲೂ ಅಣ್ಣನ ಸ್ಥಾನದಲ್ಲಿದ್ದು, ನೆರವು ಮಾರ್ಗದರ್ಶನ ನೀಡಿದ್ದಾರೆ. ಹಾಗೆಯೇ ಅವರ ವ್ಯಕ್ತಿತ್ವದಿಂದ ಸಾಗರ ಮತ್ತು ತೀರ್ಥಹಳ್ಳಿ ಜನರ ವಿಶ್ವಾಸಗಳಿಸಿದ್ದಾರೆ ಎಂದರು.
ವಿಜಯನಗರ ನಾಗರಿಕ ವೇದಿಕೆ ಅಧ್ಯಕ್ಷರಾದ ನಾಗರಾಜ್ ಮಾತನಾಡಿ, ವಿಜಯನಗರದಲ್ಲಿ ಸುಮಾರು 24 ವರ್ಷಗಳಿಂದ ಇರುವ ಹೆಗಡೆಯವರು ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ ಎಂದರು.
ಕನ್ನಡ ವಿನಾಯಕ ಸಂಘದ ಅಧ್ಯಕ್ಷರಾದ ರವಿ ಲಿಂಗನಮಕ್ಕಿ ಮಾತನಾಡಿ ಹೆಗಡೆಯವರ ಅಭಿಮಾನಕ್ಕಾಗಿ ಈ ಸಭಾಂಗಣ ತುಂಬಿದೆ. ಅವರೇನಾದರೂ ಕರೆ ನೀಡಿದ್ದರೆ ಪಕ್ಕದ ಮೈದಾನದಲ್ಲೇ ವೇದಿಕೆ ನಿರ್ಮಿಸಬೇಕಿತ್ತು. ಇದು ಅವರ ಕ್ರೀಯಾಶೀಲತೆ ಮತ್ತು ಆತ್ಮೀಯವಾಗಿ ಎಲ್ಲರೊಂದಿಗೆ ಬೆರೆಯುವ ಗುಣವೇ ಸಾಕ್ಷಿ ಎಂದರು. ಅಭಿಮಾನವೆನ್ನುವುದು ಅಂತರಾಳದಿಂದ ಬರುತ್ತದೆ, ಅದು ಎಲ್.ಎಮ್. ಹೆಗಡೆ ಗಳಿಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದು ಮಾಜಿ ನಗರಸಭಾ ಸದಸ್ಯ ರವಿಲಿಂಗನಮಕ್ಕಿ ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಮಾಲತೇಶ್ ಮಾತನಾಡಿ, ಹೆಗಡೆಯವರು ಸಾಗರದಲ್ಲಿ ಶಿಕ್ಷಣ ಸಂಯೋಜಕರಾಗಿದ್ದಾಗ ಹಿನ್ನೀರು ಹೋಬಳಿಯಾದ ಕರೂರು ಹೋಬಳಿಯಲ್ಲಿ ಮಾಡಿದ ಉತ್ತಮ ಕೆಲಸಗಳು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿ ನಿಂತಿದೆ ಎಂದರು.
ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿರಾದ ಲಕ್ಷ್ಮಣ್ ರವರು ಮಾತನಾಡಿ ಹೆಗಡೆಯವರು ಸುಮಾರು 10 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ನೌಕರರ ಪರವಾದ ಅವರ ಗಟ್ಟಿದ್ವನಿ ನೌಕರರ ಮನದಲ್ಲಿ ಇಂದಿಗೂ ನೆಲೆ ನಿಂತಿದೆ.ಎಂದರು.
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಯಿರುವ ಹೆಗಡೆಯವರು ತಮ್ಮ ನಿವೃತ್ತಿ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿ ಶುಭಕೋರಿದರು.
ವೇದಿಕೆಯಲ್ಲಿ ಕರಾವಳಿ ಬಳಗದ ಪದಾಧಿಕಾರಿಗಳು, ವಿಜಯನಗರ ನಾಗರಿಕ ವೇದಿಕೆಯ ಪದಾಧಿಕಾರಿಗಳು ಹಾಗೂ ವಿನಾಯಕ ಕನ್ನಡ ಬಳಗದ ಪದಾಧಿಕಾರಿಗಳೂ
ಹಿರಿಯ ಉಪನ್ಯಾಸಕರಾದ ಬಂಗಾರಪ್ಪನವರು, ಪಿಡಿಓ ಸಂಘದ ಜಿಲ್ಲಾ ಖಜಾಂಚಿ ರಾಘವೇಂದ್ರ, ಸತ್ಯನಾರಾಯಣ, ಮ.ಸ. ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶ್ರೀಮತಿ ಭುವನೇಶ್ವರಿ ಭಟ್ ಪ್ರಾರ್ಥಿಸಿದರು. ನಾರಾಯಣ ಹೆಗಡೆ ಸ್ವಾಗತಿಸಿದರು. ಉತ್ತರ ಕನ್ನಡ ಕರಾವಳಿ ಶಿಕ್ಷಕ ಬಳಗದ ಅಧ್ಯಕ್ಷರರಾದ ಡಿ.ಆರ್. ಹೆಗಡೆಯವರು ಅಚ್ಚಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಮೀನಿನಹೆಜ್ಜೆ ನ್ಯೂಸ್, ಸಾಗರಸುದ್ದಿ ಮತ್ತು ಜಾಹೀರಾತು ನೀಡಲು-7204641701


Comments
Post a Comment