ಸಂಪುಟದಲ್ಲಿ ಹೊಸಬರಿಗೆ ಅವಕಾಶ, ಕಾರ್ಮಿಕ ಸಚಿವರಾಗಲಿದ್ದಾರೆಯೇ ಸಾಗರ-ಹೊಸನಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು?
ಬೆಂಗಳೂರು : ಈಗಾಗಲೇ ಒಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆ ಆಗಿದೆ. ಮೊನ್ನೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಬಂದಿದ್ದಾರೆ. ಅವತ್ತೇ ಸಂಪುಟ ವಿಸ್ತರಣೆ ಆಗಬೇಕಿತ್ತು, ಆದರೆ ಆ ದಿನ NEET ವಿಚಾರದಲ್ಲಿ ಹೋರಾಟ ನಡೆಯುತ್ತಿತ್ತು. ಈಗ ಸಿಎಂ ಅವರು ದೆಹಲಿಯಲ್ಲಿದ್ದು, ಇಂದು ರಾಜ್ಯದ ಎಂಪಿಗಳ (ಸಂಸದರ) ಜೊತೆ ಸಭೆ ನಡೆಸಲಿದ್ದಾರೆ. ನಾಳೆ ನಮ್ಮ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಒಂದು ವಾರದಲ್ಲಿ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆಂದ ಸಾಮಾಜಿಕ ಜಾಲತಾಣದ ಸುದ್ದಿಗಳಲ್ಲಿ ಬಂದಿದೆ.
ಜಿಲ್ಲೆಯಲ್ಲಿ ಮಧು ಬಂಗಾರಪ್ಪ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ವಿಚಾರ : ಮಧು ಬಂಗಾರಪ್ಪ ಅವರು ಈಗಾಗಲೇ ಮೂರು ವರ್ಷ ಅಧಿಕಾರ ನಡೆಸಿದ್ದಾರೆ. ಅವರು ತಮ್ಮ ಹಕ್ಕನ್ನು ಒತ್ತಾಯಿಸಲು ಅವಕಾಶವಿದೆ, ಅದನ್ನು ನಾವು ಬೇಡ ಎಂದು ಹೇಳುವುದಿಲ್ಲ. ಅವರು ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ನಾನು ಕೂಡ ಈಡಿಗ ಸಮುದಾಯದಿಂದ ಬಂದವನಾಗಿದ್ದು, ನನಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದೇನೆ. ಮುಂದಿನ ಅವಧಿಯಲ್ಲೂ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬುದು ಸಿಎಂ ಅವರ ಉದ್ದೇಶವಾಗಿದೆ. ಅದಕ್ಕಾಗಿಯೇ ಅವರು ಹೊಸ ಮುಖಗಳನ್ನು ತರಲು ಹೊರಟಿದ್ದಾರೆ. ಅವರ ಆಸೆ ಈಡೇರಬೇಕಿರುವುದರಿಂದ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಸಚಿವ ಸಂಪುಟ ವಿಳಂಬದ ವಿಚಾರ: ಈಗಾಗಲೇ ಮಂತ್ರಿಮಂಡಲದಲ್ಲಿ 14 ಜನ ಇದ್ದಾರೆ. ಉಪಮುಖ್ಯಮಂತ್ರಿಗಳು (ಡಿಸಿಎಂ) ಸಹ ರಾಜ್ಯದಲ್ಲೇ ಇದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಅಡಚಣೆ ಇಲ್ಲ. ಈಗಾಗಲೇ ಸಿಎಂ ಅವರು ಜಿಲ್ಲಾವಾರು ಚರ್ಚೆ ನಡೆಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಸಭೆ ಕೂಡ ಮಾಡಿದ್ದಾರೆ. ಜನರ ಪರವಾಗಿ ಕೆಲಸ ಮಾಡಲು ಸಿಎಂ ಇದ್ದಾರೆ. ಹಿಂದೆ ಯಡಿಯೂರಪ್ಪ ಅವರ ಅವಧಿಯಲ್ಲಿ ಸಚಿವ ಸಂಪುಟವೇ ಇರಲಿಲ್ಲ. ನಾನು ಮತ್ತೆ ದೆಹಲಿಗೆ ಹೋಗುವುದಿಲ್ಲ, ಈಗಾಗಲೇ 5-6 ಬಾರಿ ಹೋಗಿ ಬಂದಿದ್ದೇನೆ. ಆದರೆ ನಮ್ಮ ಸ್ನೇಹಿತರಲ್ಲಿ ಕೆಲವು ಜನ ಈಗಾಗಲೇ ದೆಹಲಿಯಲ್ಲಿದ್ದಾರೆ.
ಈ ನಡುವೆ ಸಾಗರ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದರೆ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಮಿಕ ಸಚಿವರಾಗಲಿದ್ದಾರೆಂದು ಬಲ್ಲ ಮೂಲಗಳ ಪ್ರಕಾರ ಕಾಂಗ್ರೇಸ್ ಕಾರ್ಯಕರ್ತರು ಮಾತನಾಡಿ ಕೊಳ್ಳಲು ಆರಂಭಿಸಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment