ಜೋಗ ಅಭಿವೃದ್ಧಿ ವಿಚಾರದಲ್ಲಿ ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿ‌ ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೇಲ್ ನಿರ್ಮಾಣ ಮಾಡುವುದಕ್ಕೆ ಕೆ.ಎಲ್. ಭೋಜರಾಜ್ ವಿರೋಧವನ್ನು

ಜೋಗ ಅಭಿವೃದ್ಧಿ ವಿಚಾರದಲ್ಲಿ ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿ‌ ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೇಲ್ ನಿರ್ಮಾಣ ಮಾಡುವುದಕ್ಕೆ ವಿರೋಧವನ್ನು ಸಾಗರ ತಾಲ್ಲೂಕು ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ವಕೀಲರಾದ ಕೆ.ಎಲ್. ಭೋಜರಾಜ್ ವ್ಯಕ್ತಪಡಿಸಿದ್ದಾರೆ.

ಅರಣ್ಯ ಭೂಮಿ ಮೊದಲು ಕಂದಾಯ ಭೂಮಿಯನ್ನಾಗಿ ಪರಿವರ್ತನೆ ಮಾಡಲು ಸರಕಾರ ತಯಾರಿದೆಯೇ?, ಈಗಿರುವ ಪ್ರವಾಸಿ ಮಂದಿರವೇಕೆ ತೆರವು ಮಾಡಬೇಕು? ಹೋಟೇಲ್ ನಿರ್ಮಾಣಕ್ಕೆ ಬೇರೆ ಜಾಗ ಇಲ್ಲವೇ? ಎಂದು ಅಭಿವೃದ್ಧಿ ಪ್ರಾಧಿಕಾರ ಮತ್ತು‌ಸರಕಾರಕ್ಕೆ ಕೆ.ಎಲ್.ಬಿ. ಖಡಕ್ ಪ್ರಶ್ನೆ ಹಾಕಿದ್ದಾರೆ.

                    ವಕೀಲರಾದ ಕೆ.ಎಲ್. ಭೋಜರಾಜ್

ಈ ಸಂಬಂಧ ಯಾರಾದರೂ ಇದರ ಬಗ್ಗೆ ಹೈಕೋರ್ಟ್'ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಬೇಕಾಗಿ ಬರಬಹುದು...ಕಳೆದ ಬಾರಿ‌ ಒಮ್ಮೆ ಪರಿಹಾರ ನೀಡಿದ ನಿದರ್ಶನ ನಮ್ಮ ಮುಂದೆ ಇದೆ. ಮತ್ತೆ ಈ ರೀತಿಯ ನ್ಯೂನತೆಗಳು ಮರುಕಳಿಸಬಾರದು‌ಎಅಮದು ಹೇಳಿದರು.


ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರದಲ್ಲಿ ನ್ಯಾಯಾಲಯ ಹಲವು ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಸಿಂಗಳೀಕ ಅಭಯಾರಣ್ಯ ಉಳಿಯಬೇಕು ಎಂದು ಹೇಳಿದೆ. ಅರ್ಜಿಯ ವಿಚಾರಣೆ ಅಕ್ಟೋಬರ್ 1ಕ್ಕೆ ಮುಂದೂಡಿದೆ. ಈ ಬಗ್ಗೆ ಸಹ ಇಲ್ಲಿನ ಸ್ಥಳೀಯ ಮುಖಂಡರು ವಿಚಾರ ಮಾಡಬೇಕು. ಪರಿಸರವನ್ನು ಉಳಿಸಿಕೊಳ್ಳುವುದು ಜನತೆಯ ಆದ್ಯತೆ ಆಗಬೇಕು. ಈಗಗಾಲೇ ಹವಾಮಾನ ವೈಪರಿತ್ಯಗಳು ಮಲೆನಾಡ ಭಾಗದಲ್ಲಿ ಆಗುತ್ತಿದ್ದು, ಸರಕಾರಗಳು ಮಲೆನಾಡ ಭಾಗದಲ್ಲಿ ಬೃಹತ್ ಯೋಜನೆಗಳನ್ನು ಮಾಡಲು‌ ಮತ್ತೊಮ ಪರೀಶೀಲನೆ ನಡೆಸಬೇಕು ಎಂದರು.

ಸಾಗರ ತಾಲ್ಲೂಕಿನಲ್ಲಿ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಗರ-ಹೊಸನಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರುರವರಿಗೆ ಸಚಿವ ಸ್ಥಾನ ನೀಡಬೇಕು. ಈಗಾಗಲೇ ಬಗರ್'ಹುಕುಂ, 94c ಮತ್ತು 94cc ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇದೆ. ಅದಲ್ಲದೇ ಹಿ‌ಂದುಳಿದ ವರ್ಗಗಳ ನಾಯಕರು ಗೋಪಾಲಕೃಷ್ಣ ಬೇಳೂರುರವರು ಎಲ್ಲರನ್ನೂ ವಿಶ್ವಾಸದಿಂದ ತಮ್ಮ ಹತ್ತಿರಕ್ಕೆ ಬರಮಾಡಿಕೊಳ್ಳುವ ಗುಣ ಇರುವ ಸಾಗರ ಕಂಡ ಶಾಸಕರು ಅವರು ಎಂದು ಹೇಳಿದರು.

ಗೋಪಾಲಕೃಷ್ಣ ಬೇಳೂರು‌ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಮೂರು ಬಾರಿ‌ ಎಂಎಲ್'ಎ ಆಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಇನ್ನಷ್ಟೂ ತಾಲ್ಲೂಕು ಅಭಿವೃದ್ಧಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ ಕೆ.ಎಲ್. ಭೋಜರಾಜ್ ತಮ್ಮ ಮನದಿಂಗಿತವನ್ನು ತಿಳಿಸಿದರು. 

ಮೀನಿನಹೆಜ್ಜೆ ನ್ಯೂಸ್, ಸಾಗರದೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡ ಸಾಮಾಜಿಕ ಹೋರಾಟಗಾರ ಕೆ.ಎಲ್. ಭೋಜರಾಜ್

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ