ಸರಸ್ವತಿ ನಾಗರಾಜ್ ಅವರಿಗೆ ಅತ್ಯುತ್ತಮ ಅಧ್ಯಕ್ಷೆ ಪುರಸ್ಕಾರ
ಸರಸ್ವತಿ ನಾಗರಾಜ್ ಅವರಿಗೆ ಅತ್ಯುತ್ತಮ ಅಧ್ಯಕ್ಷೆ ಪುರಸ್ಕಾರ
ಸಾಗರ: ಇಲ್ಲಿನ ಸಾಗರ ಶ್ರೀಗಂಧ ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ನಾಗರಾಜ್ ಅವರು ಲಯನ್ಸ್ ಸಂಸ್ಥೆ ಜಿಲ್ಲಾ ವ್ಯಾಪ್ತಿಯಲ್ಲಿ ನೀಡುವ 2026-27ನೇ ಸಾಲಿನ ಅತ್ಯುತ್ತಮ ಅಧ್ಯಕ್ಷೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯಡ್ಕದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಯಿತು.
ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಕ್ಯಾನ್ಸರ್ ರೋಗಿಗಳಿಗೆ ಧನಸಹಾಯ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿದ ಕಾರಣಕ್ಕೆ ಅವರಿಗೆ ಈ ಪುರಸ್ಕಾರ ನೀಡಲಾಗಿದೆ.
ಸರಸ್ವತಿ ನಾಗರಾಜ್ ಅವರು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರಚಾರ ಪಡೆಯಲು ಮಾಡದೇ ಸಮಾಜಕ್ಕೆ ಒಳಿತಾಗಲೆಂದು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಅತ್ಯುತ್ತಮ ಅಧ್ಯಕ್ಷೆ ಪುರಸ್ಕಾರ ನೀಡಲಾಗಿದೆ.
ಸರಸ್ವತಿ ನಾಗರಾಜ್ ಪ್ರಸ್ತುತ ಸಾಗರ ಶ್ರೀಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ರೆಡ್'ಕ್ರಾಸ್ ಸಂಸ್ಥೆಯಲ್ಲೂ ಅವರ ಸೇವೆ ಗಣನೀಯವಾಗಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment