ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮ ಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಕೋರಿ ಡಿಎಸ್'ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ‌ ಬಣದಿಂದ ಸಾಗರದ ಉಪವಿಭಾಗಾಧಿಕಾರಿಗಳಿಗೆ ಮನವಿ

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮ ಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಕೋರಿ ಡಿಎಸ್'ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ‌ ಬಣದಿಂದ ಸಾಗರದ ಉಪವಿಭಾಗಾಧಿಕಾರಿಗಳಿಗೆ ಮನವಿ


ಸಾಗರ ; ಈ ಬಾರಿಯ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ಮುಂದೂಡಿದ್ದರ ಪರಿಣಾಮ ನೀಟ್ ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭಿನ್ನತೆಗೆ ಒಳಗಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರ ಸಾವಿಗೆ ಸೂಕ್ತ ನ್ಯಾಯದಗಿಸುವಂತೆ ದೆಹಲಿಯ ಜಂತರ್ ಮಂತರ್ ನಲ್ಲಿ 21 ದಿನ ಉಪ ವಾಸ ಕೈಗೊಂಡ ಸೋನಂ ವಾಕ್ಖುಂಕ್ ಮತ್ತು ಕಾಕ್ರೋಚ್ ಪಾರ್ಟಿ ಕಾರ್ಯಕರ್ತರು ಈ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು, ಆಸ್ಪತ್ರೆಯಲ್ಲಿ ಬಲಾತ್ಕಾರವಾಗಿ ಬಂಧನದಲ್ಲಿಟ್ಟಿರುವ ಸೋನಂ ವಾಕ್ಖುಂಕ್ ರವರನ್ನು ಖಾಸಗಿ ಆಸ್ಪತ್ರೆಗೆ ಬದಲಾಯಿಸಬೇಕು, ಹಾಗೂ ಆತ್ಮಹತ್ಯೆ ಮಾಡಿಕೊಂಡ ನೀಟ್ ಪರೀಕ್ಷೆ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ1 ಕೋಟಿ ರೂ ಪರಿಹಾರ ನೀಡಬೇಕು ಎಂಬ ಸಿ.ಜೆ.ಪಿ ಪಾರ್ಟಿಯ ನ್ಯಾಯಯುತವಾದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು.

ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿರುವುದು ಪ್ರಜಾ ಪ್ರಭುತ್ವದ ವಿರುದ್ದದ ಧೋರಣೆಯಾಗಿದೆ. ಕೇಂದ್ರ ಸರ್ಕಾರದ ಈ ನಡೆ ಖಂಡನೀಯವಾದುದು. ಆದ್ದರಿಂದ ನ್ಯಾಯಯುತವಾದ ಹೋರಾಟಗಳನ್ನು ಬಲ ಪ್ರಯೋಗ ಮಾಡಿ ಹತ್ತಿಕ್ಕುವ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನಮ್ಮ ಸಂಘಟನೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಈ ಬಗ್ಗೆ ಗೌರವಾನ್ವಿತ ರಾಷ್ಟ್ರ ಪತಿಗಳು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.

ಈ ವಿಷಯವಾಗಿ ಸಾಗರ ನಗರಸಭಾ ಮಾಜಿ ಅಧ್ಯಕ್ಷ ಅದ ಎನ್. ಲಲಿತಮ್ಮ,‌ಸಾಗರ ನಗರಸಭಾ ಮಾಜಿ ಸದಸ್ಯ ಎಲ್. ಚಂದ್ರಪ್ಪ, ಡಿಎಸ್'ಎಸ್ ಸಂಚಾಲಕ ನಾಗರಾಜ, ರೈತ ಸಂಘದ ಅಧ್ಯಕ್ಷ ಎಂ. ಬಿ. ಮಂಜಪ್ಪ ಮಾತನಾಡಿದರು.

ಗುಡ್ಡೆಕೌತಿ ಶಿವಪ್ಪ, ನಾರಾಯಣ ಕೆಲುವೆ, ಸುರೇಶ್, ನಾರಾಯಣ ಅರಮನೆಕೇರಿ, ವಿರೇಶ ಜಂಬಗಾರು, ದೇವರಾಜ ಹೊಸಂತೆ, ಮೋಹಿಬ, ರಾಧಿಕಾ, ರಾಘವೇಂದ್ರ, ಶೇಖರಪ್ಪ, ರೂಪೇಶ್ ಜಂಬಗಾರು, ಮಂಜುನಾತಯ ಖಂಡಿಕಾ, ನಾಗರತ್ನಮ್ಮ ಇನ್ನಿತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ