ಸಿಗಂದೂರು ಚಿತ್ತ ರಂಗ ಶಿಕ್ಷಣದತ್ತ, ಡಾ. ಎಸ್. ರಾಮಪ್ಪಾಜಿಯವರ ಕನಸು ನನಸಿನತ್ತ-ಶ್ರೀಕ್ಷೇತ್ರ ಸಿಗಂದೂರು ಶ್ರೀಚೌಡೇಶ್ವರಿ ದೇವಿ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್
ಸಿಗಂದೂರು ಚಿತ್ತ ರಂಗ ಶಿಕ್ಷಣದತ್ತ, ಡಾ. ಎಸ್. ರಾಮಪ್ಪಾಜಿಯವರ ಕನಸು ನನಸಿನತ್ತ-ಶ್ರೀಕ್ಷೇತ್ರ ಸಿಗಂದೂರು ಶ್ರೀಚೌಡೇಶ್ವರಿ ದೇವಿ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್
ಸಾಗರ : ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ರಾಮಪ್ಪ ಅವರ ಕನಸಿನ ಯೋಜನೆಯಾದ ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ – ರಂಗಶಿಕ್ಷಣದತ್ತ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಶ್ರೀ ಸಿಗಂದೂರು ಚೌಡಮ್ಮ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಆರಂಭವಾಗಿರುವ ಈ ಯೋಜನೆಯು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಉತ್ತೇಜನ ನೀಡುವ ಉದ್ದೇಶ ನೂತನ ಯೋಜನೆ ಕಾರ್ಯಕ್ರಮವಾಗಿದೆ ಎಂದು ಶ್ರೀಕ್ಷೇತ್ತ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟಿನ ಪ್ರದಾನ ಕಾರ್ಯದರ್ಶಿಗಳಾದ ಎಚ್.ಆರ್. ರವಿಕುಮಾರ್ ಹೇಳಿದ್ದಾರೆ.
ಈ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ರಂಗಭೂಮಿ ತರಬೇತಿ, ಅಭಿನಯ, ಸಂವಹನ ಕೌಶಲ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಭಾಷಾ ಜ್ಞಾನ, ನಾಯಕತ್ವ ಗುಣ, ತಂಡದಲ್ಲಿ ಕಾರ್ಯನಿರ್ವಹಿಸುವ ಮನೋಭಾವ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ.
ಇದರೊಂದಿಗೆ ಮಕ್ಕಳಲ್ಲಿ ಸೃಜನಶೀಲ ಚಿಂತನೆಗೆ ಉತ್ತೇಜನ ನೀಡುವುದು, ಸಹಾನುಭೂತಿ ಮತ್ತು ಪರಿಪಕ್ವತೆ ಬೆಳೆಸುವುದು ಹಾಗೂ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಗುರಿಯನ್ನೂ ಯೋಜನೆ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಸಹಕಾರ ನೀಡಿದ್ದು, ಧಾರ್ಮಿಕ ಸಂಸ್ಥೆಯೊಂದು ಶಿಕ್ಷಣ ಮತ್ತು ಕಲಾ ಕ್ಷೇತ್ರದಲ್ಲಿ ಇಂತಹ ಸಾಮಾಜಿಕ ಕಾರ್ಯಕ್ರಮ ಕೈಗೊಂಡಿರುವುದು ಸ್ಥಳೀಯರು ಹಾಗೂ ಶಿಕ್ಷಣ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದನ್ನು ಸ್ಮರಿಸಬಹುದಾಗಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ




Comments
Post a Comment