ಕೆಪಿಎಸ್ ಪಿಎಂಶ್ರೀ ಯುಜಿಹೆಚ್'ಪಿಎಸ್, ಎಸ್.ಎನ್. ನಗರ ಬಡಾವಣೆ ಶಾಲೆ ಇವರಿಗೆ ಸಾಗರದ ಶ್ರೀಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಕಂಪ್ಯೂಟರ್ ಕೊಡುಗೆ-ಹಸ್ತಾಂತರ ಮಾಡಿದ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮತ್ತು ಉಪಾಧ್ಯಕ್ಷ ವೈ. ಮೋಹನ
ಕೆಪಿಎಸ್ ಪಿಎಂಶ್ರೀ ಯುಜಿಹೆಚ್'ಪಿಎಸ್, ಎಸ್.ಎನ್. ನಗರ ಬಡಾವಣೆ ಶಾಲೆ ಇವರಿಗೆ ಸಾಗರದ ಶ್ರೀಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಕಂಪ್ಯೂಟರ್ ಕೊಡುಗೆ-ಹಸ್ತಾಂತರ ಮಾಡಿದ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮತ್ತು ಉಪಾಧ್ಯಕ್ಷ ವೈ. ಮೋಹನ
ಸಾಗರ ; ಶಾಲಾ ಚಟುವಟಿಕೆಗಳಿಗೆ ಸಾಗರ ಶ್ರೀಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು ಯಾವಾಗಲೂ ಸಹಕಾರ ನೀಡುತ್ತಾ ಬಂದಿದೆ. ಕೆಲವು ಶಾಲೆಗಳಲ್ಲಿಪರಿಕರಗಳ ಕೊರತೆ ಇರುವುದು ಸಾಮಾನ್ಯವಾಗಿದೆ. ಬ್ಯಾಂಕು ತನ್ನ ಕೈಲಾದ ಸೇವೆಗಳನ್ನು ಸಾರ್ವಜನಿಕವಾಗಿ ನೀಡುತ್ತಾ ಬರುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಸರಸ್ವತಿ ನಾಗರಾಜ್ ಹೇಳಿದರು.
ಅವರು ಇಂದು ಸಾಗರದ ಶ್ರೀಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ನಡೆದ ಸಾಮಾನ್ಯ ಸಭೆಯ ಸಂದರ್ಭದಲ್ಲಿ *ಕೆಪಿಎಸ್ ಪಿಎಂಶ್ರೀ ಯುಜಿಹೆಚ್'ಪಿಎಸ್, ಎಸ್.ಎನ್. ನಗರ ಬಡಾವಣೆ ಶಾಲೆ ಇವರಿಗೆ ಸಾಗರದ ಶ್ರೀಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಕಂಪ್ಯೂಟರ್ ಕೊಡುಗೆ ನೀಡಿ ಮಾತನಾಡಿದರು.
ಶಾಲೆಯ ಪರವಾಗಿ ಕೃಷ್ಣಮೂರ್ತಿ ಅವರು ಆಬಿನಂದಸಿ ಮಾತನಾಡಿದರು.
ಬ್ಯಾಂಕಿನ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮತ್ತು ಉಪಾಧ್ಯಕ್ಷ ವೈ. ಮೋಹನ ಮತ್ತು ಸಿಇಓ ಲಲಿತಾಂಬಿಕೆ ಅವರನ್ನು ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಗಳು ಸನ್ಮಾನಿಸಿದರು.
ಸಾಗರದ ಶಿವಪ್ಪನಾಯಕ ಯುವಜನ ಸಂಘದ ಅಧ್ಯಕ್ಷ ದಿನಕರ, ಎಸ್'ಡಿಎಂಸಿ ಅಧ್ಯಕ್ಷ ಗಣೇಶ್, ಸುವರ್ಣ, ಜ್ಯೋತಿ ಹೆಗಡೆ, ರೂಪಾ, ಸುನೀತಾ ಹಾಗೂ ಬ್ಯಾಂಕಿನ ನಿರ್ದೇಶಕರುಗಳು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ





Comments
Post a Comment