ವಾಹನ ಹಸ್ತಾಂತರ ಮಾಡಿದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಗೌರವಾಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು
ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದಿಂದ 2026 ಮಾರಿಕಾಂಬ ಜಾತ್ರೆಯ ಪ್ರಯುಕ್ತ ಸಾಗರ ನಗರಸಭೆಗೆ ಕೊಡುಗೆಯಾಗಿ ವಾಹನ ಹಸ್ತಾಂತರ ಮಾಡಿದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಗೌರವಾಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು
ವಾಹನದ ಕೀ ಸ್ವೀಕಾರ ಮಾಡಿದ ಸಾಗರ ನಗರಸಭೆಯ ಪೌರಾಯುಕ್ತ ಹೆಚ್.ಕೆ. ನಾಗಪ್ಪ
ಸಾಗರ ನಗರಸಭೆಯ ಮುಕ್ತಿ ವಾಹನ ಸ್ವೀಕಾರ ಮಾಡಿದ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಪವಿತ್ರ ನಾಗರಾಜ್
ಹಳೆಯ ಕಮಿಟಿಯ ಅಧ್ಯಕ್ಷರಾಗಿದ್ದ ಕೆ.ಎನ್. ನಾಗೇಂದ್ರ ಅವರು ಈ ಬಾರಿಯ ಶ್ರೀಮಾರಿಕಾಂಬ ಜಾತ್ರೆಯಲ್ಲಿ ಸಾಗರ ನಗರಸಭೆಗೆ ಕೊಡುಗೆಯಾಗಿ ವಾಹನವನ್ನು ನೀಡುವ ನಿರ್ಧಾರವನ್ನು ಜಾತ್ರೆಗಿಂತ ಮುಂಚಿತವಾಗಿ ಎಸಿ ಕಚೇರಿಯಲ್ಲಿ ನಡೆದ ಮೀಟಿಂಗ್'ನಲ್ಲಿ ನಿರ್ಧರಣೆ ಆಗಿತ್ತು.
ಈ ಕಾರ್ಯಕ್ರಮ ಇಂದು ಸಾಗರದ ಶ್ರೀಮಾರಿಕಾಂಬ ದೇವಸ್ಥಾನದ ಕಚೇರಿಯಲ್ಲಿ ನಡೆಯಿತು. ಮಾಜಿ ಅಧ್ಯಕ್ಷ ನಾಗೇಂದ್ರ ಕೆ.ಎನ್. ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಮಾರು 21ಲಕ್ಷ ರೂಪಾಯಿಗಳ ಸ್ಕಾರ್ಪಿಯೋ ವಾಹನವನ್ನು ಪದ್ದತಿಯಂತೆ ಸಾಗರ ನಗರಸಭೆಗೆ ನೀಡುವ ತೀರ್ಮಾನ ಮಾಡಲಾಗಿತ್ತು. ಇಂದು ಈ ವಾಹನವನ್ನು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಉಪಸ್ಥಿತಿಯಲ್ಲಿ ಸಾಗರ ನಗರಸಭೆಗೆ ಸಾಗರ ನಗರಸಭೆಯ ಪೌರಾಯುಕ್ತ ಎಚ್.ಕೆ. ನಾಗಪ್ಪ ಇವರಿಗೆ ವಾಹನದ ಕೀ ನೀಡುವ ಮೂಲಕ ಹಸ್ತಾಂತರ ಮಾಡಲಾಯಿತು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಮತ್ತು ದ್ವಾರಬಾಗಿಲುಗಳನ್ನು ಈ ಕೂಡಲೇ ಮಾಡಲು ಸಮಿತಿಯ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕಲ್ಯಾಣ ಮಂಟಪ, ಸಭಾಭವನ, ಶಾಲೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಪವಿತ್ರ ನಾಗರಾಜ್ ಹೇಳಿದರು.
ಸಾಗರ ನಗರಸಭೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದೇ ಇದ್ದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸಾಗರ ನಗರಸಭೆಗೆ ನೀಡಿದ್ದ ಮುಕ್ತಿ ವಾಹನವನ್ನು ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಸಾಗರ ನಗರಸಭೆಯ ಪೌರಾಯುಕ್ತ ಎಚ್.ಕೆ. ನಾಗಪ್ಪ ಅವರು ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರಾದ ಪವಿತ್ರ ನಾಗರಾಜ್, ಪ್ರದಾನ ಕಾರ್ಯದರ್ಶಿಗಳಾದ ಆನಂದ ಎಂ.ಡಿ.ಅವರಿಗೆ ಕೀ ನೀಡುವ ಮೂಲಕ ಹಸ್ತಾಂತರ ಮಾಡಿದರು.
ಈ ನಡುವೆ ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನದ ಕಚೇರಿಯಲ್ಲಿ ಹಾಜರಿದ್ದ ನಿರ್ದೇಶಕರ ಸಮ್ಮುಖದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಪೌರಾಯುಕ್ತ ಎಚ್.ಕೆ. ನಾಗಪ್ಪ ಮತ್ತು ಅಧ್ಯಕ್ಷ ಎಚ್.ಕೆ. ನಾಗಪ್ಪ ಮಾತನಾಡಿದರು.
ಕಾರ್ಯದರ್ಶಿ ಡಿಶ್ ಗುರು, ರಾಮಪ್ಪ ಉಪ್ಪಾರ್, ಡಿಶ್ ಶ್ರೀನಾಥ ವೇದಿಕೆಯಲ್ಲಿ ಇದ್ದರು.
ನಿರ್ದೇಶಕರಾದ ಶರಾವತಿ ಸಿ.ರಾವ್, ಎನ್. ಲಲಿತಮ್ಮ, ಧರ್ಮರಾಜ್, ಪ್ರಶಾಂತ ಪಾಟೀಲ್ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ










Comments
Post a Comment