ಗ್ರಾಪಂ ಚುನಾವಣೆಗೆ ಸಿದ್ಧತೆ, ಚುನಾವಣಾಧಿಕಾರಿಗಳ ನಿಯೋಜನೆಗೆ ಆಯೋಗ ಪತ್ರ

ಗ್ರಾಪಂ ಚುನಾವಣೆಗೆ ಸಿದ್ಧತೆ, ಚುನಾವಣಾಧಿಕಾರಿಗಳ ನಿಯೋಜನೆಗೆ ಆಯೋಗ ಪತ್ರ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಜ್ಯ ಚುನಾವಣಾ ಆಯೋಗ, ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಚುನಾವಣಾಧಿಕಾರಿಗಳನ್ನು ನಿಯೋಜಿಸಲು ಸೂಚಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ, ಆಯಾ ಪಂಚಾಯಿತಿಗಳ ವಾರ್ಡ್‌ವಾರು ಸದಸ್ಯ ಸ್ಥಾನ ಮತ್ತು ವಿವಿಧ ವರ್ಗಗಳ ಮೀಸಲಾತಿ ನಿಗದಿಪಡಿಸಿ ಕೋಷ್ಟಕಗಳ ಮೂಲಕ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಅಧಿಸೂಚನೆಗಳ ಪ್ರತಿಗಳನ್ನು ತಕ್ಷಣವೇ ಆಯೋಗಕ್ಕೆ ಸಲ್ಲಿಸಲು ಗಡುವು ನೀಡಲಾಗಿದೆ.




*ಅಧಿಸೂಚನೆ ಹೊರಡಿಸಲು ಡಿಸಿಗಳಿಗೆ : ಸೂಚನೆ*

ಪ್ರತಿ ಗ್ರಾಮ ಪಂಚಾಯಿತಿಗೆ 'ಚುನಾವಣಾಧಿಕಾರಿ' ಹಾಗೂ 'ಸಹಾಯಕ ಚುನಾವಣಾಧಿಕಾರಿ'ಗಳನ್ನು ನೇಮಿಸಲು ಆಯೋಗ ಆದೇಶಿಸಿದೆ. ನಿಯಮಾವಳಿಗಳ ಪ್ರಕಾರ, ಗ್ರೂಪ್-ಬಿ ವೃಂದದ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ಮತ್ತು ಶಿರಸ್ತೇದಾ‌ರ್ ಅಥವಾ ಸೂಪರಿಂಟೆಂಡೆಂಟ್ ಮಟ್ಟದ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿನೇಮಿಸಬೇಕಿದೆ. ಅಧಿಕಾರಿಗಳಕೊರತೆ ಯಿದ್ದಲ್ಲಿ, ಹಿರಿತನದ ಆಧಾರದ ಮೇಲೆ ಶಿರಸ್ತೇದಾರ್ ವೃಂದದವರಿಗೆ ಜವಾಬ್ದಾರಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಅವಧಿ ಪೂರ್ಣಗೊಂಡ ಗ್ರಾಪಂ ಗಳ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ. ಗೊಂದಲಕ್ಕೆ ಅವಕಾಶ ಇಲ್ಲದಂತೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

| ಜಿ.ಎಸ್. ಸಂಗ್ರೇಶಿ
ಆಯುಕ್ತ, ರಾಜ್ಯ ಚುನಾವಣೆ ಆಯೋಗ

*ಅಕ್ಟೋಬರ್‌ವರೆಗೂ ಅಸಾಧ್ಯ*

ಪ್ರಸ್ತುತ ಎಸ್‌ಐಆರ್‌ ನಡೆಯುತ್ತಿದ್ದು, ಆಡಳಿತಯಂತ್ರ ಆ ಪ್ರಕ್ರಿಯೆಯಲ್ಲಿ ತೊಡಗಿದೆ.

ಹೀಗಿರುವಾಗ 2025ರ ಮತದಾರರ ಪಟ್ಟಿಯನ್ನೇ ಬಳಸಿಕೊಂಡು ಪಂಚಾಯಿತಿಗೆ ಚುನಾವಣೆ ನಡೆಸುವುದಾದರೂ ಅಕ್ಟೋಬರ್ ವರೆಗೂ ಸಾಧ್ಯವಿಲ್ಲ. ಆದರೆ ಪೂರ್ವ ತಯಾರಿ ಮಾಡಿಕೊಳ್ಳಲು ಸಮಸ್ಯೆ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ