ತೋಟಗಾರಿಕಾ ಇಲಾಖೆಯಿಂದ ಅರ್ಹರಿಗೆ ಕಾರ್ಯಾದೇಶದ ನಂತರ ಸಹಾಯಧನ

ತೋಟಗಾರಿಕಾ ಇಲಾಖೆಯಿಂದ ಅರ್ಹರಿಗೆ ಕಾರ್ಯಾದೇಶದ ನಂತರ ಸಹಾಯಧನ


2026-27 ನೇ ಸಾಲಿನ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಡಿ ಪ್ರದೆಶ ವಿಸ್ತರಣೆ, ಮೂಲ ಸೌಕರ್ಯಾಭಿವೃದ್ದಿ, ಹನಿ/ತುಂತುರು ನೀರಾವರಿ, ತೋಟಗಾರಿಕೆಯಲ್ಲಿ ಯಾಂತ್ರೀಕರಣ, ಕೃಷಿಹೊಂಡ, ಸೋಲಾರ್ ಪಂಪ್,  ಪ್ಲಾಸ್ಟೀಕ್ ಮುಚ್ಚಿಗೆ, ವೀಡ್ ಮ್ಯಾಟ್, ಜೇನು ಕೃಷಿ ಸೇರಿದಂತೆ ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಸಂರಕ್ಷಿತ ಬೇಸಾಯ, ಪ್ರಾಥಮಿಕ ಸಂಸ್ಕರಣಾ ಘಟಕ, ಮಶ್ರೂಮ್ ಘಟಕ, ಸಮಗ್ರ ಪ್ಯಾಕ್ ಹೌಸ್, ಟ್ರ್ಯಾಕ್ಟರ್ ಹಾಗೂ ಇತರೆ ಕಾಂಪೋನೆಂಟ್ ಅಡಿಯಲ್ಲಿ ಸಹಾಯಧನ / ಸೌಲಭ್ಯ ಪಡೆಯಲು ಇಚ್ಚಿಸುವ ರೈತರು ಮನವಿಯನ್ನು ಸಲ್ಲಿಸಿ, ಕಾರ್ಯಾದೇಶ ಪಡೆದ ನಂತರ ಸಹಾಯಧನ ಪಡೆಯಬಹುದಾಗಿದೆ.

ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ/ ರೋಗ ನಿಯಂತ್ರಣ ಕಾರ್ಯಕ್ರಮದಡಿ ಅಡಿಕೆ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗಕ್ಕೆ ಮುಂಜಾಗ್ರತ ಕ್ರಮವಾಗಿ ಔಷಧಿ ಸಿಂಪಡಿಸಿದಲ್ಲಿ, ಅನುಮೋದಿತ  ಔಷಧಿ ಖರೀದಿಸಿದ GST ಬಿಲ್ಲು, ಪಹಣೆ ಜೆರಾಕ್ಸ್ ಪ್ರತಿ (ಎಪ್ರಿಲ್ 2026), ಆಧಾರ್ ಪ್ರತಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ, ನೇರವಾಗಿ ಔಷಧಿ ಖರೀದಿಸಿದ ರೈತರಿಗೆ  ಶೇ.30 ರಂತೆ ಪ್ರತಿ ಹೆಕ್ಟರ್ ತೋಟಗಾರಿಕೆ ಬೆಳೆಗಳಿಗೆ ರೂ. 1500/- ನಂತೆ ಗರಿಷ್ಟ 2.00 ಹೆ. ವರೆಗೂ  ರೂ. 3000/- ಸಹಾಯಧನ ನೀಡಲು ಅವಕಾಶವಿರುತ್ತದೆ. ಎಲೆಚುಕ್ಕಿ ನಿಯಂತ್ರಣ ಸಂಬಂಧ ಆರ್ಕ ಮೈಕ್ರೋಬಿಯಲ್  ಕನ್ಸ್ ರ್ಷಿಯಂ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೇರವಾಗಿ ರೈತರಿಗೆ ವಿತರಿಸಲಾಗುವುದು. 

ತೋಟಗಾರಿಕೆ ಇಲಾಖೆಯ ಮಾರ್ಗಸೂಚಿಯನ್ವಯ, ಅರ್ಜಿ ಜೇಷ್ಠತೆ, ಮೀಸಲಾತಿ, ದಾಸ್ತಾನು ಹಾಗು ಅನುದಾನ ಲಭ್ಯತೆಯಂತೆ ಸಾಗರ ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಪರಿಗಣಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಸಾಗರ  ಅಥವಾ ಸಹಾಯಕ ತೋಟಗಾರಿಕೆ ಅಧಿಕಾರಿ ರೈತಸಂಪರ್ಕ ಕೇಂದ್ರ ಇವರನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ಸಂಖ್ಯೆ : 9900903393, 7353346902, 9074175042, 9611325124, 8310674314, 8762287792, 6360301664 ಸಂಪರ್ಕಿಸಬಹುದಾಗಿದೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ