ದಾವಣಗೆರೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಒಡವೆ ಕಳ್ಳತನ; ಪೂಜಾರಿ ವಿರುದ್ಧ FIR

ದಾವಣಗೆರೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಒಡವೆ ಕಳ್ಳತನ; ಪೂಜಾರಿ ವಿರುದ್ಧ FIR

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಪೂಜಾರಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿರುವುದಾಗಿ ಟ್ರಸ್ಟ್ನ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.

ಪೂಜಾರಿ ಕಳ್ಳತನ ಮಾಡಿರುವುದಾಗಿ ಆರೋಪಿಸಿ ಗಾಂಧಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ದೇವಿಗೆ ಸೇರಿದ 28 ಲಕ್ಷ ಬೆಲೆ ಬಾಳುವ 200 ಗ್ರಾಂ ಬಂಗಾರ ಕಳ್ಳತನ‌ ಆಗಿದೆ ಎಂದು ದುರ್ಗಾಂಬಿಕಾ ದೇವಾಲಯ ಧರ್ಮದರ್ಶಿ ಹೆಚ್.ಗೋಣೆಪ್ಪ ಆರೋಪಿಸಿದ್ದಾರೆ.

ಸದ್ಯ ಗಾಂಧಿ‌ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ‌

ಈ ಬಗ್ಗೆ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಧರ್ಮದರ್ಶಿ ಹೆಚ್.ಗೋಣೆಪ್ಪ, “ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತ‌ನವಾಗಿದೆ ಎಂದು ಪೂಜಾರಿ ತಿಳಿಸಿದಾಗ ನಮಗೆ ಈ ವಿಚಾರ ಗೊತ್ತಾಯಿತು. ಸ್ವಲ್ಪ ತಡವಾಗಿ ದೂರು ಕೊಟ್ಟಿದ್ದೇವೆ ವಿಚಾರ ತಿಳಿದಾಗ ಟ್ರಸ್ಟ್ನ ಎಲ್ಲಾ ಧರ್ಮದರ್ಶಿಗಳು ತಕ್ಷಣ ಸಭೆ ಮಾಡಿದ್ದೆವು. ದೇವಿಗೆ ಪೂಜೆ ಮಾಡಲು ಆರು ತಿಂಗಳಿಗೊಮ್ಮೆ ಪೂಜಾರಿಕೆ ಬರುತ್ತದೆ. ಆಗಾ ನಾವು ಎಷ್ಟು ಬೇಕು ಅಷ್ಟು ಚಿನ್ನಾಭರಣವನ್ನು ದೇವಿಗೆ ಅಲಂಕಾರ ಮಾಡಲು ಕೊಡುತ್ತೇವೆ‌”.

“ಭಕ್ತರು ಕೊಡುವ ಬಂಗಾರವನ್ನು ಕರಗಿಸಿ ಗಟ್ಟಿ ಮಾಡಿಕೊಂಡು ದೇವಸ್ಥಾನದಲ್ಲಿ ಇರಿಸುತ್ತೇವೆ. ಇಲ್ಲಿ ತನಕ ಒಂದು ಚಿಕ್ಕ ವಸ್ತು ಕಳ್ಳತನ ಆಗಿಲ್ಲ. ಒಬ್ಬ ಮೂರ್ಖ ಈ ರೀತಿ ಮಾಡಿದ್ದಾನೆ. ಅವನಿಗೆ ತಕ್ಕ ಶಿಕ್ಷೆ ಕೊಡುತ್ತೇವೆ. ಇದೇ ತಿಂಗಳು ಐದನೇ ತಾರೀಕಿಗೆ ಕಳ್ಳತನ ಮಾಡಿದ್ದಾನೆ. ಐದಾರು ದಿನದ ಬಳಿಕ ಪೂಜಾರಿ ಒಬ್ಬರು ನೋಡಿದಾಗ ನಮ್ಮ ಗಮನಕ್ಕೆ ತಂದಿದ್ದಾರೆ.


ಬಂಗಾರವನ್ನು ಕಳ್ಳತನ ಮಾಡಿದವರು, ಕರಗಿಸಿದವರು, ತೆಗೆದುಕೊಂಡವರು ಎಲ್ಲರನ್ನು ಬಂಧಿಸಬೇಕಿದೆ. ಅಂದಾಜು 28 ಲಕ್ಷ ಮೌಲ್ಯದ 20 ತೊಲ ಬಂಗಾರ ಕಳ್ಳತನ ‌ಆಗಿದೆ. ದೇವರಿಗೆ ಸೇರಿದ್ದು 2 ಕೆಜಿ 5 ಗ್ರಾಂ ಬಂಗಾರ, 59 ಕೆಜಿ ಬೆಳ್ಳಿ ಸಾಮಾನುಗಳು ನಮ್ಮ ಬಳಿ ಇವೆ. ಅದನ್ನು ದೇವಾಲಯದಲ್ಲಿ ಸ್ಟ್ರಾಂಗ್ ರೂಮ್ನಲ್ಲಿ ಇರಿಸಿದ್ದೇವೆ. ಪೂಜಾರಿ ಕಳ್ಳತನ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೇ ಬಂಗಾರ ದಾನ ಕೊಟ್ಟರು ಅದರ ದಾಖಲೆಗಳು ನಮ್ಮ ಬಳಿ ಇವೆ” ಎಂದು ಅವರು ತಿಳಿಸಿದರು. ‌

ಗಾಂಧಿನಗರ ಠಾಣೆಯ ಪಿಐ ಉಮೇಶ್ ಮಾತನಾಡಿ, “ಹೌದು ದೇವಾಲಯದಲ್ಲಿ ಕಳ್ಳತನ‌ ಆಗಿದೆ. ಆಕಾಶ್ ಎಂಬ ಪೂಜಾರಿ ಕಳ್ಳತನ ಮಾಡಿರುವುದಾಗಿ ದುರ್ಗಾಂಬಿಕ ದೇವಿ ಟ್ರಸ್ಟ್ನ ಧರ್ಮದರ್ಶಿ ಹೆಚ್. ಗೋಣೆಪ್ಪ ಅವರು ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದೇವೆ. ಇನ್ನು ಯಾರನ್ನೂ ಬಂಧಿಸಿಲ್ಲ, ತನಿಖೆ ಮುಂದುವರೆದಿದೆ” ಎಂದು ತಿಳಿಸಿದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ