ಲಯನ್ಸ್ ಕ್ಲಬ್, ಸಾಗರ ನೂತನ ಅಧ್ಯಕ್ಷರಾಗಿ PMJF ಲಯನ್ ನಾಗರಾಜ ಈ., ಜುಲೈ 16ರಂದು ಸಂಜೆ ಸಾಗರ ಗ್ರೀನ್ ಎಂಬಸ್ಸಿಯಲ್ಲಿ ಪದಗ್ರಹಣ-ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಲಯನ್ಸ್ ಕ್ಲಬ್'ನ ದ್ವಿತೀಯ ಉಪಾಧ್ಯಕ್ಷ ಸುಧೀರ್ ಗೋಪಾಲಶೆಟ್ಟಿ ಹಕ್ಲಾಡಿ

ಲಯನ್ಸ್ ಕ್ಲಬ್, ಸಾಗರ ನೂತನ ಅಧ್ಯಕ್ಷರಾಗಿ PMJF ಲಯನ್ ನಾಗರಾಜ ಈ., ಜುಲೈ 16ರಂದು ಸಂಜೆ ಸಾಗರ ಗ್ರೀನ್ ಎಂಬಸ್ಸಿಯಲ್ಲಿ ಪದಗ್ರಹಣ-ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಲಯನ್ಸ್  ಕ್ಲಬ್'ನ ದ್ವಿತೀಯ ಉಪಾಧ್ಯಕ್ಷ ಸುಧೀರ್ ಗೋಪಾಲಶೆಟ್ಟಿ ಹಕ್ಲಾಡಿ

ಸಾಗರ ; ಇದೇ ಬರುವ ಜುಲೈ 16ರಂದು ಸಾಗರದ ಬಿ.ಹೆಚ್.‌ರಸ್ತೆಯಲ್ಲಿ ಇರುವ ಗ್ರೀನ್ ಎಂಬಸ್ಸಿ ಹೋಟೇಲ್'ನಲ್ಲಿ ಸತೀಶಸ್ ಕ್ಲಬ್'ನ ನೂತನ ಅಧ್ಯಕ್ಷರಾಗಿ 2026-27ನೇ ಸಾಲಿಗೆ PMJF ಲಯನ್ ನಾಗರಾಜ ಈ., ವಕೀಲರು ದಿ. (ಈಶ್ವರಪ್ಪ ನಾಯ್ಕ ವಕೀಲರು ಇವರ ಮಗ) ಪದಗ್ರಹಣ ಸ್ವೀಕಾರ ಮಾಡಲಿದ್ದಾರೆ. ಇವರೊಂದಿಗೆ ನೂತನ ಕಾರ್ಯದರ್ಶಿಗಳಾಗಿ ಲಯನ್ ಸಂತೋಷ್ ಫ್ರಾನ್ಸಿಸ್ ಮತ್ತು ಖಜಾಂಚಿಗಳಾಗಿ ಲಯನ್ ಪ್ರಭಾಕರ ಜೈನ್ ಹಾಗೂ ಇತರ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆಂದು ಲಯನ್ಸ್ ಕ್ಲಬ್, ಸಾಗರದ ದ್ವಿತೀಯ ಉಪಾಧ್ಯಕ್ಷ ಸುಧೀರ್ ಗೋಪಾಲಶೆಟ್ಟಿ ಹಕ್ಲಾಡಿ ತಿಳಿಸಿದರು.

ಅವರು ಸಾಗರದ ಕರಾಕಾನಿಪಸಂಘದ ಕಚೇರಿಯಲ್ಲಿ ಮಾತನಾಡುತ್ತ, 54ನೇಯ ಅಧ್ಯಕ್ಣರಾಗಿ ನಾಗರಾಜ ಈ. ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಸಮಾರಂಭಕ್ಕೆ ಪ್ರತಿಜ್ಞಾವಿಧಿ ಭೋಧಿಸಲು PMJF ಲಯನ್ ಎನ್. ಮೋಹನಕುಮಾರ್ ಮತ್ತು PMJF ಲಯನ್ ಕೆ. ಸುರೇಶ್'ಪ್ರಭು ಬರಲಿದ್ದಾರೆ.

ಇದೇ ಸಂದರ್ಭದಲ್ಲಿ ಲಿಯೋ ಕ್ಲಬ್ ಆಫ್ ನಿರ್ಮಲ, ಸಾಗರ ಸಹ ಆರಂಭ ಆಗಲಿದೆ ಎಂದು ಅವರು ತಿಳಿಸಿದರು.

ಅಂದು ಆಡಳಿತ ಮಂಡಳಿ 2026-27 ಮತ್ತು ಕ್ಲಬ್'ನ ನಿರ್ದೇಶಕರು ಹಾಗೂ ಹೊಸತಾಗಿ ಕ್ಲಬ್'ಗೆ ಸೇರ್ಪಡೆ ಆಗುವವರಿಗೂ ಸಹ ಪ್ರತಿಜ್ಞಾವಿಧಿ ಭೋಧನೆ ಆಗಲಿದೆ ಎಂದು ಹೇಳಿದರು.

ನೂತನ ಅಧ್ಯಕ್ಷ ಲ. ನಾಗರಾಜ ಈ, ಸರ್ವರೂ ಈ ಕಾರ್ಯಕ್ರಮದಲ್ಲಿ‌ ಭಾಗಿಯಾಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಪ್ರಸನ್ನ ಟಿ.‌ಅವರನ್ನು ಜಿಲ್ಲಾ ಮಟ್ಟಕ್ಕೆ ಕ್ಲಬ್'ನ LCIF ಕೋ-ಆರ್ಡಿನೇಟರ್ ಮಾಡಲಾಗಿದೆ. ಮತ್ತು ಅಂಗವಿಕಲರಿಗೆ ನೆರವಾಗಲು ಸಿಸಿಆರ್ ಆಗಿ ನೇಮಿಸಲಾಗಿದೆ. ಅವರ ಅಧ್ಯಕ್ಷ ಕಾಲದಲ್ಲಿ ಸಾಗರದ ಲಯನ್ಸ್ ಕ್ಲಬ್ ನಂ. 1 ಸ್ಥಾನಕ್ಕೆ ಲಯನ್ ಜಿಲ್ಲಾ ವ್ಯಾಪ್ತಿಯಲ್ಲಿ ಬಂದಿದೆ ಎಂದು ಸಙತೋಷ್ ಫ್ರಾನ್ಸಿಸ್ ಹೇಳಿದರು.

ಹೊಸ ಸೇರ್ಪೆಡೆ ಹೀಗಿದೆ ; ಗೌತಮ್ ಪಿ., ಶ್ರೀಮತಿನಪಲ್ಲವಿ ಸುಧೀರ್ ಶೆಟ್ಟಿ, ಆದರ್ಶ, ಸಂತೋಷ್ ಕುಮಾರ್, ಕೆ.ವಿ. ಡಾಕಪ್ಪ, ಶರತ್ ಆರ್., ಭಾನುಪ್ರಕಾಶ್ ಎಂ.ಬಿ., ಶ್ರೀಮತಿ ಬಿ.ಎಸ್. ಸ್ವರ್ಣಪ್ರಸಾದ್, ಎಂ.ಎಸ್. ನಂಜುಂಡಸ್ವಾಮಿ, ಶ್ರೀಮತಿ ಜ್ಯೋತಿ ನಂಜುಂಡಸ್ವಾಮಿ, ದೇವೇಂದ್ರ ಎಂ., ಕಲಾವತಿ ಎ.ಎಂ., ಯಶವಂತ ಎಂ.ಎಚ್., ರಮಾನಂದ ಸಾಗರ್, ಕಾರ್ತೀಕ್ ಎನ್. ಎಚ್., ಚಿನ್ಮಯ ಸಿ.ಎಂ., ಕಿರಣ ಈ., ಮಹಮ್ಮದ್ ತಾರೀಖ್ ಹುಸೇನ್ ಖಾನ್, ಪುರುಷೋತ್ತಮ ಬಿ., ಸುಜಯ ಕುಮಾರ್ ಎಚ್., ಗಣೇಶ ಶೆಟ್ಟಿ, ಸುನೀಲ್ ಕುಮಾರ್ ಎಸ್., ನಾಗರಾಜ ಶೆಟ್ಟಿ, ಪ್ರಕಾಶ ಶೆಟ್ಟಿ, ಶ್ರೀಮತಿ‌ ಸೆಲಿನ್ ಸಬೀನ, ಕಾರ್ತೀಕ್ ಉಪ್ಪೂರು ಇವರುಗಳು.

ಕೊನೆಯಲ್ಲಿ ಲಯನ್ ನಾಗರಾಜ ಗುಡ್ಡೇಮನೆ ಲಯನ್ ಸಂಸ್ಥೆಯ ಈ ಕಾರ್ಯಕ್ರಮಗಳಿಗೆ ಎಲ್ಲರೂ‌ ಆಗಮಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಲ. ಪ್ರಸನ್ನ ಟಿ‌. ಮತ್ತು ಲ.‌ ಸತೀಶ ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ