ಕರ್ನಾಟಕದಲ್ಲಿ RTI (ಮಾಹಿತಿ ಹಕ್ಕು ಕಾಯ್ದೆ - 2005) ಅರ್ಜಿ ಸಲ್ಲಿಸುವ ವಿಧಾನ
📢 ಕರ್ನಾಟಕದಲ್ಲಿ RTI (ಮಾಹಿತಿ ಹಕ್ಕು ಕಾಯ್ದೆ - 2005) ಅರ್ಜಿ ಸಲ್ಲಿಸುವ ವಿಧಾನ 🇮🇳
ಮಾಹಿತಿ ಕೇಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕಾನೂನುಬದ್ಧ ಹಕ್ಕು.
RTI ಕಾಯ್ದೆಯಡಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಇಲಾಖೆ, ಮೆಸ್ಕಾಂ ,RDPR, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಬಹುದು.
📌 RTI ಮೂಲಕ ಯಾವ ಮಾಹಿತಿ ಪಡೆಯಬಹುದು?
✅ ಗ್ರಾಮ ಪಂಚಾಯತ್ ಕಾಮಗಾರಿಗಳ ಅಂದಾಜು (Estimate)
✅ ಟೆಂಡರ್ ಮತ್ತು ಗುತ್ತಿಗೆದಾರರ ವಿವರ
✅ ಕಾಮಗಾರಿಗಳ Measurement Book (MB), ಬಿಲ್, ವೌಚರ್, Utilization Certificate
✅ ಗ್ರಾಮ ಸಭೆ ಹಾಗೂ ಗ್ರಾಮ ಪಂಚಾಯತ್ ಸಭೆಯ ಕಾರ್ಯವಿವರ (Minutes) ಮತ್ತು ನಿರ್ಣಯಗಳ ಪ್ರತಿಗಳು
✅ ಯೋಜನೆಗಳ ಫಲಾನುಭವಿಗಳ ಪಟ್ಟಿ
✅ ಸರ್ಕಾರಿ ಆದೇಶಗಳು (Government Orders)
✅ ಕಡತದ (File) ಪ್ರಗತಿ, File Notings ಹಾಗೂ ದಾಖಲೆಗಳ ಪ್ರತಿಗಳು
❌ RTI ಮೂಲಕ ಏನು ಕೇಳಲು ಸಾಧ್ಯವಿಲ್ಲ?
❌ ಅಧಿಕಾರಿಯ ವೈಯಕ್ತಿಕ ಅಭಿಪ್ರಾಯ
❌ ದಾಖಲೆಗಳಲ್ಲಿ ಇಲ್ಲದ ಹೊಸ ಮಾಹಿತಿ ಅಥವಾ ಹೊಸ ವಿವರಣೆ ನೀಡುವಂತೆ ಕೇಳುವುದು.
📝 ಆಫ್‌ಲೈನ್ RTI ಅರ್ಜಿ ಸಲ್ಲಿಸುವ ವಿಧಾನ
1️⃣ ಸಾಮಾನ್ಯ ಬಿಳಿ ಕಾಗದದಲ್ಲಿ ಅರ್ಜಿ ಬರೆಯಿರಿ.
2️⃣ ಸಂಬಂಧಿಸಿದ ಇಲಾಖೆಯ Public Information Officer (PIO) ಅವರಿಗೆ ಸಲ್ಲಿಸಿ.
👉 ಗ್ರಾಮ ಪಂಚಾಯತ್ ವಿಷಯವಾಗಿದ್ದರೆ PIO ಯಾರು ಎಂಬುದನ್ನು PDO (Panchayat Development Officer) ಕಚೇರಿಯಲ್ಲಿ ತಿಳಿದುಕೊಳ್ಳಬಹುದು.
3️⃣ ₹10 ಅರ್ಜಿ ಶುಲ್ಕ ಪಾವತಿಸಿ.
(BPL ಕುಟುಂಬಗಳಿಗೆ ಅರ್ಜಿ ಶುಲ್ಕವಿಲ್ಲ. BPL ಪುರಾವೆ ಲಗತ್ತಿಸಬೇಕು.)
4️⃣ ಅರ್ಜಿಯನ್ನು ಕಚೇರಿಗೆ ನೇರವಾಗಿ ನೀಡಿ ಸ್ವೀಕೃತಿ (Acknowledgement) ಪಡೆಯಿರಿ.
👉 ಹೋಗಲು ಸಾಧ್ಯವಾಗದಿದ್ದರೆ ಅಂಚೆ ಕಚೇರಿಯಿಂದ ನೋಂದಾಯಿತ ಅಂಚೆ (Registered Post) - ಸ್ವೀಕೃತಿ ಪತ್ರದೊಂದಿಗೆ (Acknowledgement Due / RPAD) ಕಳುಹಿಸಿ. ಇದು ಅರ್ಜಿ ಸಲ್ಲಿಸಿರುವುದಕ್ಕೆ ಅಧಿಕೃತ ಪುರಾವೆಯಾಗುತ್ತದೆ.
💻 ಆನ್‌ಲೈನ್ RTI ಸಲ್ಲಿಸುವ ವಿಧಾನ
✅ ಕರ್ನಾಟಕ ಸರ್ಕಾರದ ಇಲಾಖೆಗಳಿಗೆ:
🌐 https://rtionline.karnataka.gov.in
ಈ ಪೋರ್ಟಲ್‌ನಲ್ಲಿ ಲಭ್ಯವಿರುವ ಇಲಾಖೆಗಳಿಗೆ RTI ಅರ್ಜಿ, First Appeal ಸಲ್ಲಿಸಬಹುದು ಹಾಗೂ ಅರ್ಜಿಯ ಸ್ಥಿತಿಯನ್ನು (Status) ಪರಿಶೀಲಿಸಬಹುದು. ಸಂಬಂಧಿಸಿದ ಇಲಾಖೆ ಪಟ್ಟಿಯಲ್ಲಿ ಇಲ್ಲದಿದ್ದರೆ ನೇರವಾಗಿ PIO ಅವರಿಗೆ ಅರ್ಜಿ ಸಲ್ಲಿಸಬಹುದು.
✅ ಕೇಂದ್ರ ಸರ್ಕಾರದ ಇಲಾಖೆಗಳಿಗೆ:
🌐 https://rtionline.gov.in
⏳ ಮಾಹಿತಿ ನೀಡುವ ಗಡುವು
📅 ಸಾಮಾನ್ಯ ಪ್ರಕರಣ – 30 ದಿನ
📅 ತಪ್ಪು ಇಲಾಖೆಗೆ ಅರ್ಜಿ ಸಲ್ಲಿಸಿದರೆ – 5 ದಿನಗಳಲ್ಲಿ ಸರಿಯಾದ ಇಲಾಖೆಗೆ ವರ್ಗಾಯಿಸಬೇಕು.
🚨 ಜೀವ ಅಥವಾ ವೈಯಕ್ತಿಕ ಸ್ವಾತಂತ್ರ್ಯಕ್ಕೆ (Life / Liberty) ತಕ್ಷಣದ ಅಪಾಯ ಇರುವ ವಿಷಯಗಳಿಗೆ ಮಾತ್ರ – 48 ಗಂಟೆಗಳೊಳಗೆ ಮಾಹಿತಿ ನೀಡಬೇಕು.
❗ ಮಾಹಿತಿ ಸಿಗದಿದ್ದರೆ?
➡️ ಮೊದಲು First Appeal ಸಲ್ಲಿಸಬಹುದು.
➡️ ನಂತರವೂ ಮಾಹಿತಿ ಸಿಗದಿದ್ದರೆ ಅಥವಾ ಸಮರ್ಪಕ ಉತ್ತರ ದೊರೆಯದಿದ್ದರೆ **ಕರ್ನಾಟಕ ಮಾಹಿತಿ ಆಯೋಗ (Karnataka Information Commission)**ಕ್ಕೆ Second Appeal ಸಲ್ಲಿಸಬಹುದು.
✅ RTI ಬರೆಯುವಾಗ ನೆನಪಿಡಿ
✔ ಒಂದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೇಳಿ.
✔ ಪ್ರಶ್ನೆಗಳ ಜೊತೆ ದಾಖಲೆಗಳ ಪ್ರತಿಗಳನ್ನು ಕೇಳಿ.
✔ ದಿನಾಂಕ, ಅವಧಿ ಹಾಗೂ ಕಾಮಗಾರಿಯ ಹೆಸರನ್ನು ಸ್ಪಷ್ಟವಾಗಿ ಬರೆಯಿರಿ.
✔ ಅರ್ಜಿ ಹಾಗೂ ಸ್ವೀಕೃತಿ/ಅಂಚೆ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment