SIR ; ಶೇಕಡ 93%ರಷ್ಟು ಮತದಾರರ ಗಣತಿ ಅರ್ಜಿ ನಮೂನೆ ವಿತರಣೆ ಪೂರ್ಣ-ಸಾಗರ ತಾಲ್ಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್.

SIR ; ಶೇಕಡ 93%ರಷ್ಟು ಮತದಾರರ ಗಣತಿ ಅರ್ಜಿ ನಮೂನೆ ವಿತರಣೆ ಪೂರ್ಣ-ಸಾಗರ ತಾಲ್ಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್.

ಸಾಗರ ; SIR ಶೇಕಡ 93%ರಷ್ಟು ಸಾಗರ ತಾಲ್ಲೂಕಿನಲ್ಲಿ ಪೂರ್ಣವಾಗಿದೆ. ಇನ್ನುಳಿದ ಶೇಕಡಾವಾರನ್ನು ಸಹ ಕೆಲವೇ ದಿನಗಳಲ್ಲಿ ಮುಗಿಸಿ ಶೇಕಡ 100% ಎನ್ಯಮರೇಷನ್ ಫಾರಂ ನೀಡಲಾಗುವುದು, ನಗರ ಪ್ರದೇಶದಲ್ಲೂ ಮತದಾರರ ಗಣತಿ ಅರ್ಜಿ ನಮೂನೆ ವಿತರಣೆ ಪೂರ್ಣ ಮಾಡಲಾಗುತ್ತಿದೆ ಎಂದಯಸಾಗರ ತಾಲ್ಲೂಕು ತಹಶೀಲ್ದಾರ್ ಡಾ‌ ಪ್ರತಿಭಾ ಆರ್. ಹೇಳಿದರು.


SiRಗೆ ಸಂಬಂಧಿಸಿದಂತೆ ಅವರು ಮೂರನೇಕಣ್ಣು ನ್ಯೂಸ್, ಸಾಗರದೊಂದಿಗೆ ಮಾತನಾಡುತ್ತ, SIRಗೆ ಸಂಬಂಧಿಸಿದಂತೆ ಯಾವುದೇ ಮತದಾರರು ಬಾಡಿಗೆ ಮನೆಯಲ್ಲಿ ಇರುವವರು ಬೇರೆಡೆ ಮನೆ ಮಾಡಿದ್ದರೆ, ಮನೆಯಲ್ಲಿ ಇಲ್ಲದೇ ತೀರ್ಥಯಾತ್ರೆಗಳಿಗೆ ತೆರಳಿದ್ದರೆ, ಬಿಎಲ್'ಎ ಗಳ ಮೂಲಕ ಅವರಿದ್ದ ಸ್ಥಳಕ್ಕೆ ಎನ್ಯುಮರೇಷನ್ ಫಾರಂ ತಲುಪಿಸಲಾಗುತ್ತದೆ. ಇದು ಇಲ್ಲದಿದ್ದರೆ ಫೋನ್ ಮೂಲಕ ಕರೆ ಮಾಡಿ ನೀಡುವ ವ್ಯವಸ್ಥೆ ಇದೆ. ಅದು ಆಗದಿದ್ದರೆ SIRನಲ್ಲಿ ಆನ್'ಲೈನ್ ಅರ್ಜಿ ಸಲ್ಲಿಸಲು eci.net ಮೂಲಕ ನೊಂದಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಒಟ್ಟಿನಲ್ಲಿ ಎನ್ಯುಮರೇಷನ್ ಫಾರಂ ಜುಲೈ 29ರೊಳಗೆ ತುಂಬಿ ನೀಡಲೇಬೇಕು. ಇಲ್ಲದಿದ್ದರೆ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಬರುವುದಿಲ್ಲ. ಮತದಾರರು ಗೊಂದಲಕ್ಕೆ ಈಡಾಗಬಾರದು. ಬಿಎಲ್'ಓಗಳು ಮೂರು ಬಾರಿ ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಸಾಗರ ತಾಲ್ಲೂಕು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ