ಸಾಗರದ ಸಂತ ಜೋಸೆಫರ ದೇವಾಲಯದ ಸಭಾಂಗಣದಲ್ಲಿ ಇಂದು SIR ಮತ್ತು ಗೃಹಜ್ಯೋತಿ ಬಗ್ಗೆ ವಿಶೇಷ ಕಾರ್ಯಾಗಾರ
ಸಾಗರದ ಸಂತ ಜೋಸೆಫರ ದೇವಾಲಯದ ಸಭಾಂಗಣದಲ್ಲಿ ಇಂದು SIR ಮತ್ತು ಗೃಹಜ್ಯೋತಿ ಬಗ್ಗೆ ವಿಶೇಷ ಕಾರ್ಯಾಗಾರ ; ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿರುವ ಸಾಗರ ತಾಲ್ಲೂಕು ಉಪತಹಶೀಲ್ದಾರ್ ಪ್ರವೀಣ್ ಫರ್ನಾಂಡೀಸ್
ಆತ್ಮೀಯರೇ,..
ಇಂದು ಸಂಜೆ 4-00 ಗಂಟೆಗೆ ಸಂತ ಜೋಸೆಫರ ದೇವಾಲಯದ ಸಭಾಂಗಣದಲ್ಲಿ ಸಾಗರ ತಾಲ್ಲೂಕು ತಹಶೀಲ್ದಾರರಾದ ಡಾ ಪ್ರತಿಭಾ ಆರ್. ಹಾಗೂ ಚುನಾವಣೆ ಶಿರಸ್ತೇದಾರರಾದಂತಹ ಪ್ರವೀಣ್ ಫರ್ನಾಂಡಿಸ್'ರವರು ಸರಕಾರಗಳು ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಮತಪಟ್ಟಿ SIR ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕ್ರಿಸ್ಟೋಫರ್ ಫ್ರವೀಣ್ ಫರ್ನಾಂಡೀಸ್ಇದೇ ಸಂದರ್ಭದಲ್ಲಿ ಸರಕಾರದ ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಮನೆಯ ಮಾಲೀಕರುಗಳು ಅಥವಾ ಬಾಡಿಗೆದಾರರುಗಳಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಲು ಸಾಗರದ ಮೆಸ್ಕಾಂ ಇಲಾಖೆಯವರು ಸಹ ಬರಲಿದ್ದು, ಈ ಕಾರ್ಯಾಗಾರವು ಹೆಚ್ಚು ಮಹತ್ವದ್ದಾಗಿರುತ್ತದೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಗರದ ಸಂತ ಜೋಸೇಫರ ದೇವಾಲಯದ ಧರ್ಮಕೇಂದ್ರದ ಗುರುಗಳು ಎಲ್ಲ ಸಾರ್ವಜನಿಕ ಬಂಧುಗಳಲ್ಲಿ ಕೋರಿರುತ್ತಾರೆ.
ಈ ಸಭೆಯಲ್ಲಿ SIR ಮತ್ತು ಗೃಹಜ್ಯೋತಿ ಕುರಿತ ಎಲ್ಲ ಮಾಹಿತಿ ಜನತೆಗೆ ನೀಡಲಿದ್ದು, ಎಲ್ಲ ಜನಾಂಗದ ಜನರು ಭಾಗವಹಿಸಬಹುದಾಗಿದೆ ಎಂದುಸಂತ ಜೋಸೇಫರ ದೇವಾಲಯದ ಕಾರ್ಯದರ್ಶಿಯವರಾದ ಮೈಕೆಲ್ ಜೆ. ಡಿಸೋಜಾ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಎಲ್ಲರಿಗೂ ಹೃದಯಪೂರ್ವಕ ಆಹ್ವಾನ ಸಹ ನೀಡಲಾಗಿದೆ.
ಬನ್ನಿ...ಭಾಗವಹಿಸಿ....ಕಾರ್ಯಕ್ರಮ ಯಶಸ್ವಿಯಾಗಿಸಿ....
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ






Comments
Post a Comment