ಸಾಗರದ ಶ್ರೀಚಿತ್ತಮಂದಿರದಲ್ಲಿ ನಾಳೆ ದಿನಾಂಕ ; 14-08-2026ರಂದು "ಚಿಕ್ಕವರು ಕೋಣರಲ್ಲ" ಶೋ
ಸಾಗರದ ಶ್ರೀಚಿತ್ತಮಂದಿರದಲ್ಲಿ ನಾಳೆ ದಿನಾಂಕ ; 14-08-2026ರಂದು "ಚಿಕ್ಕವರು ಕೋಣರಲ್ಲ" ಶೋ
ಸಾಗರ ; ನಾಳೆ ಆಗಸ್ಟ್ 14ರಂದು ನಾವು ಕೆಲಸ ಮಾಡಿರುವ “ಚಿಕ್ಕವರು ಕೋಣರಲ್ಲ” ಸಿನಿಮಾ ಸಾಗರದ ಶ್ರೀಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು ನಾಲ್ಕು ದಿನ, ಪ್ರತಿದಿನ ಒಂದೊಂದು ಶೋ ಇರಲಿದೆ.
ಈ ಸಿನಿಮಾ ಸಾಗರದಲ್ಲೇ ಚಿತ್ರೀಕರಣಗೊಂಡಿದ್ದು, ಸಾಗರದ ಹಲವು ಕಲಾವಿದರು, ಚಿಕ್ಕ ಮಕ್ಕಳು ಹಾಗೂ ಈಗಾಗಲೇ ಗುರುತಿಸಿಕೊಂಡಿರುವ ಗುರುಮೂರ್ತಿ ಅವರಂತಹ ಕಲಾವಿದರು ಅಭಿನಯಿಸಿದ್ದಾರೆ. ಸಾಗರದ ಸಾಹಿತಿ ಹಾಗೂ ನಟ ಪ್ರಸನ್ನ ಹುಣಸೆಕೊಪ್ಪ ಅವರು ಬರೆದಿರುವ ಹಾಡು ಕೂಡ ಸಿನಿಮಾದಲ್ಲಿದೆ.
ದಯಮಾಡಿ ಎಲ್ಲರೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ. ನಿಮ್ಮ ಪರಿಚಯದ ಮಕ್ಕಳು ಹಾಗೂ ಸ್ನೇಹಿತರನ್ನೂ ಕರೆದುಕೊಂಡು ಹೋಗಿ. ಮಕ್ಕಳಿಗೆ ಟಿಕೆಟ್ ಬೇಕಿದ್ದರೆ, ಸಾಧ್ಯವಾದಷ್ಟು ನಾವು ಟಿಕೆಟ್ ಅರೇಂಜ್ ಮಾಡಿಕೊಡುತ್ತೇವೆ.
ನಮ್ಮ ಊರಿನ ಕಲಾವಿದರು, ನಮ್ಮ ಊರಿನ ಮಕ್ಕಳು, ನಮ್ಮ ಊರಿನಲ್ಲೇ ತಯಾರಾದ ಸಿನಿಮಾ. ನಿಮ್ಮ ಒಂದು ವೀಕ್ಷಣೆ ನಮಗೆ ದೊಡ್ಡ ಪ್ರೋತ್ಸಾಹ.
ದಯಮಾಡಿ ಎಲ್ಲರೂ ಹೋಗಿ ನೋಡಿ, ನಮ್ಮನ್ನು ಬೆಂಬಲಿಸಿ. 🙏
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment